For Quick Alerts
  ALLOW NOTIFICATIONS  
  For Daily Alerts

  ನಷ್ಟ ಭರಿಸಲಾಗದೆ ಬಾಗಿಲು ಮುಚ್ಚಿದ ಟಿವಿ ಚಾನಲ್

  By Rajendra
  |

  ಟಿಆರ್‌ಪಿ ರೇಟಿಂಗ್‌ನಲ್ಲಿ ತೀವ್ರ ಕುಸಿತ ಹಾಗೂ ನಷ್ಟ ಭರಿಸಲಾಗದೆ ಟಿವಿ ಚಾನಲ್‌ ಒಂದು ದಿಢೀರ್ ಎಂದು ಬಾಗಿಲು ಮುಚ್ಚಿದೆ. ಹಿಂದಿಯ ಜನರಲ್ ಎಂಟರ್‌ಟೈನ್‌ಮೆಂಟ್ ಚಾನಲ್ 'ಇಮ್ಯಾಜಿನ್ ಟಿವಿ' ಭಾರತದಲ್ಲಿ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸಿರುತ್ತಿರುವುದಾಗಿ ತಿಳಿಸಿದೆ.

  ಯುಎಸ್ ಮೂಲದ ಟರ್ನರ್ ಬ್ರಾಡ್ ಕಾಸ್ಟಿಂಗ್ ಸಿಸ್ಟಂಸ್ ಇಂಕ್ 2009ರಲ್ಲಿ NDTVಯ ಇಮ್ಯಾಜಿನ್ ಟಿವಿಯನ್ನು 117 ದಶಲಕ್ಷ ಡಾಲರ್‌ಗೆ ಖರೀದಿಸಿತ್ತು. ರೇಟಿಂಗ್ ಪಟ್ಟಿಯಲ್ಲಿ ಚಾನಲ್ ನಿರೀಕ್ಷಿಸಿದ ಬೆಳವಣಿಗೆ ಕಾಣದ ಕಾರಣ ವಾಹಿನಿ ತನ್ನ ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸುತ್ತಿರುವುದಾಗಿ ಟರ್ನರ್ ಇಂಟರ್‌ನ್ಯಾಷನಲ್ ಇಂಡಿಯಾದ ದಕ್ಷಿಣ ಏಷ್ಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿದ್ಧಾರ್ಥ್ ಜೈನ್ ತಿಳಿಸಿದ್ದಾರೆ.

  ಭಾರತದಲ್ಲಿ ಟರ್ನರ್ ಬ್ರಾಡ್ ಕಾಸ್ಟಿಂಗ್ ಕಂಪನಿ ಹಲವಾರು ಟಿವಿ ಚಾನಲ್‌ಗಳನ್ನು ನಿರ್ವಹಿಸುತ್ತಿದೆ. ಅವುಗಳಲ್ಲಿ ಮುಖ್ಯವಾಗಿ ಹೆಚ್‌ಬಿಓ, ಸಿಎನ್‍ಎನ್, ಕಾರ್ಟೂನ್ ನೆಟ್‌ವರ್ಕ್, ಪೋಗೋ ಹಾಗೂ ಡಬ್ಲ್ಯುಬಿ ವಾಹಿಗಳು ಜನಪ್ರಿಯವಾಗಿವೆ. ಇಮ್ಯಾಜಿನ್ ಟಿವಿಯನ್ನು ಮುಚ್ಚಿರುವ ಟರ್ನರ್ ಕಂಪನಿ ಭಾರತದ ಮಾರುಕಟ್ಟೆ ಆಶಾದಾಯಕವಾಗಿದ್ದು ಮುಂದೆಯೂ ಬಂಡವಾಳ ಹೂಡುವುದಾಗಿ ತಿಳಿಸಿದೆ. ಸ್ವಯಂವರ ಸರಣಿ ಸೇರಿದಂತೆ ಹಲವು ರಿಯಾಲಿಟಿ ಶೋಗಳಿಗೆ ಇಮ್ಯಾಜಿನ್ ಟಿವಿ ಹೆಸರಾಗಿತ್ತು. (ಏಜೆನ್ಸೀಸ್)

  English summary
  The U.S.-based Turner Broadcasting System Inc, a Time Warner company, has decided to shut its Hindi general entertainment channel ‘Imagine TV’ in India as poor ratings hampered any further investment in it, a senior company official said.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X