ಖ್ಯಾತ ತಾರೆಯರ 'ಲೈಫು ಇಷ್ಟೇನೆ..!' ಕಾರ್ಯಕ್ರಮ

Life Istene Image
ಕನ್ನಡ ಕಿರುತೆರೆಯಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ನೀಡುತ್ತಿರುವ ಜೀ ಕನ್ನಡ ವಾಹಿನಿಯಲ್ಲಿ ಡಿಸೆಂಬರ್ 19 ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 2:00 ಗಂಟೆಗೆ 'ಲೈಫು ಇಷ್ಟೇನೆ..!' ಎಂಬ ಹೊಸ ಕಾರ್ಯಕ್ರಮ ಪ್ರಸಾರಕ್ಕೆ ಸಿದ್ಧವಾಗಿದೆ. ಮೊದಲ ವಾರ ಕಿರುತೆರೆಯ ಖ್ಯಾತ ತಾರೆಯರಾದ ಮಾಳವಿಕಾ, ಸಿರಿ, ನಂದಿನಿ, ಕೃತಿಕಾ ಮತ್ತು ಶೃತಿ ನಾಯ್ಡು ಇವರ ತೆರೆಯಾಚೆಗಿನ ಬದುಕು ಅನಾವರಣಗೊಳ್ಳಲಿದೆ.

ಜೀವನ ಒಂದು ಸಾಹಸಯಾನ. ಯಾವುದೇ ಒಬ್ಬ ವ್ಯಕ್ತಿ ಬದುಕಿನಲ್ಲಿ ಅದ್ಭುತ ಸಾಧನೆ ಮಾಡಿ ಹೆಸರು, ಕೀರ್ತಿ, ಹಣ, ಅದೃಷ್ಟದ ಸವಿ ಉಂಡರೆ, ಅಥವಾ ಸೆಲೆಬ್ರಿಟಿ ಸ್ಥಾನಮಾನ ಪಡೆದರೆ, ಅವರು ಅದರ ಸಿಹಿ ನೆನಪುಗಳನ್ನು ಸ್ಮರಿಸಿಕೊಳ್ಳುತ್ತಾ, ಅಭಿಮಾನದಿಂದ ಸಲಹುತ್ತಾ, ಕಹಿಗಳನ್ನು ಮರೆಯಲೆತ್ನಿಸುತ್ತಾ ತಮ್ಮ ಜೀವನ ಯಾನವನ್ನು ಜೀವಂತವಾಗಿರಿಸಿಕೊಳ್ಳಲು ಬಯಸುತ್ತಾರೆ.

ತಾವು ನಡೆದು ಬಂದ ಕಲ್ಲು ಮುಳ್ಳಿನ ಹಾದಿಯನ್ನು, ತಮ್ಮ ಬೆಳವಣಿಗೆಗೆ ನೆರವಾದವರನ್ನು ಇಂದಿನ ತಾರಾ ಮೌಲ್ಯದ ಬದುಕಿನಲ್ಲೂ ಸ್ಮರಿಸಿಕೊಳ್ಳುವ ಅನೇಕ ಮಂದಿ ಇಂದೂ ನಮ್ಮೊಂದಿಗೆ ಇದ್ದಾರೆ. ಈ ಪರಿಕಲ್ಪನೆಯನ್ನು ವೀಕ್ಷಕರ ಮುಂದೆ ಭಾವನಾತ್ಮಕ ಅಂಶದೊಂದಿಗೆ ಪ್ರಸ್ತುತ ಪಡಿಸುವ ಹೃದಯಸ್ಪರ್ಶಿ ಕಾರ್ಯಕ್ರಮ ಲೈಫು ಇಷ್ಟೇನೆ..! ಇದು ರೀಲ್ ಮಂದಿಯ ರಿಯಲ್ ಲೈಫ್.

ಕಲಾವಿದರ ನಿಜವಾದ ಜೀವನ ಬಣ್ಣವನ್ನು ಅನಾವರಣಗೊಳಿಸುವ ವಿಶಿಷ್ಟ ಕಾರ್ಯಕ್ರಮವಿದು, ತಾರೆಯರ ಕಲರ್ ಫುಲ್ ಲೈಫ್ ಹಿಂದೆ ಅವರಿಗೂ ಒಂದು ಸ್ವಂತ ಬದುಕಿದೆ. ಅವರ ಬಾಲ್ಯ, ಶಾಲಾ-ಕಾಲೇಜು ದಿನಗಳು, ಆಪ್ತಮಿತ್ರರು, ಪ್ರೀತಿ, ಪ್ರೇಮ, ಮದುವೆ-ಮಕ್ಕಳು, ಸಂಸಾರ, ಹವ್ಯಾಸಗಳು - ಹೀಗೆ ಖ್ಯಾತನಾಮರ ಜೀವನದ ವಿವಿಧ ಮಜಲುಗಳನ್ನು ಕುತೂಹಲಕರವಾಗಿ ಬಿಂಬಿಸುವ ಕಾರ್ಯಕ್ರಮ 'ಲೈಫು ಇಷ್ಟೇನೆ..!' (ಒನ್ ಇಂಡಿಯಾ ಕನ್ನಡ)

More from Filmibeat

English summary
Zee Kannada new Programme 'Life Istene' telecasts on Monday to Friday 2 PM, very soon.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X