ಬನ್ನೇರುಘಟ್ಟದಲ್ಲಿ ಕಾಣಿಸಿಕೊಂಡ ಕಾಡುಗಳ್ಳ ವೀರಪ್ಪನ್

ಇದು ಜೀ ಕನ್ನಡ ವಾಹಿನಿಯಲ್ಲಿ ವಾರಾಂತ್ಯದಲ್ಲಿ, 'ಶನಿವಾರ' ಹಾಗೂ 'ಭಾನುವಾರ' ರಾತ್ರಿ '9.00 ಗಂಟೆ'ಗೆ ಪ್ರಸಾರವಾಗುತ್ತಿರುವ 'ದೇವಿ' ಧಾರಾವಾಹಿಯ ಸಧ್ಯದ ವಿದ್ಯಮಾನ. ಅಮ್ನೋರ ಕಿರೀಟದ ಕಾರಣದಿಂದ ತನ್ನೆಲ್ಲ ಆಸ್ತಿಯನ್ನೂ ಕಳೆದುಕೊಂಡ ದೇವಿಯ ಅಪ್ಪ ಸದಾಶಿವ, ಕಾಡು ಪಾಲಾಗಿದ್ದಾನೆ. ಹುಚ್ಚನಂತೆ ಅಲೆಯುತ್ತಿದ್ದ ಸದಾಶಿವ ಆ ಕಳ್ಳರ ಕೈಗೆ ಸಿಕ್ಕಿದ್ದಾನೆ. ಅವರ ಬಳಿಯೇ ಇದೆ ಕದ್ದು ತಂದ ಅಮ್ನೋರ ಕಿರೀಟ!
ಲೋಕಕಲ್ಯಾಣಕ್ಕಾಗಿ ಅಮ್ನೋರು ಮಹಾಶಂಖದಲ್ಲಿ ತುಂಬಿದ್ದ ವರವನ್ನು ಪರೀಕ್ಷೆ ಮಾಡಿದ್ದ ನಾಸ್ತಿಕ ಸದಾಶಿವ. ಈಗ ಅದರ ಫಲ ಅನುಭವಿಸುತ್ತಿದ್ದಾನೆ. ಇನ್ನೂ ಬಾಕಿ ಇವೆ ಎಂಟು ಕ್ಷೇತ್ರಗಳ ಯಾತ್ರೆ ! ಇದು ಹರಕೆ. ಮುಂದಿನ ಶೃಂಗೇರಿ ಯಾತ್ರೆಗೆ ಅಮ್ನೋರ ಕಿರೀಟವೇ ಕಾರಣವಾಗುತ್ತಾ? ಜಗನ್ಮಾತೆಯ ಲೀಲಾಮೃತದ ಈ ಧಾರಾವಾಹಿ ಈಗ ಅತ್ಯಂತ ಕುತೂಹಲಕಾರಿ ಘಟ್ಟದಲ್ಲಿದೆ. ಜಗನ್ಮಾತೆಯ ಪಾತ್ರದಲ್ಲಿ ಕಲಾವಿದೆ ಶಮಾ ಪ್ರವೇಶ ಮೆಚ್ಚುಗೆಗೆ ಪಾತ್ರವಾಗಿದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Zee Kannada Serial 'Devi' is running successfully. New Character Veerappan enters the serial.


Click it and Unblock the Notifications











