ಕರಿಬಸವಯ್ಯ ಕೈಹಿಡಿದ ಕಿರುತೆರೆ ಸೀರಿಯಲ್

'ಉಂಡೂ ಹೋದ ಕೊಂಡೂ ಹೋದ' ಚಿತ್ರದ ಮೂಲಕ ಬಣ್ಣ ಹಚ್ಚಿದ ಇವರು ಕೊಟ್ರೇಶಿ ಕನಸು, ಜನುಮದ ಜೋಡಿ, ಮುಂಗಾರಿನ ಮಿಂಚು, ಹೀಗೆ ಸಾಕಷ್ಟು ಚಿತ್ರಗಳಲ್ಲಿ ಗಮನಾರ್ಹವಾಗಿ ನಟಿಸಿದವರು. ಸದ್ಯ ಬಿಡುಗಡೆಯಾಗಲಿರುವ ಅವರ ಚಿತ್ರಗಳೆಂದರೆ ಸಂಗೊಳ್ಳಿ ರಾಯಣ್ಣ ಹಾಗೂ ಚಿತ್ರಮಂದಿರ.
ಕಾಮಿಡಿ, ಪೆದ್ದ, ಕುಡುಕ, ಹಾಗೂ ಹತ್ತು ಹಲವು ವಿಭಿನ್ನ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಕರಿಬಸವಯ್ಯ, ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬ್ಯುಸಿಯಾಗಿದ್ದವರು. ಆದರೆ ಈಗ ಕಾಲ ಬದಲಾಗಿದೆ. ಹೊಸಬರು ಬಂದಿದ್ದಾರೆ, ಇವರಂಥ ಹಳಬರು ಜಾಗ ಖಾಲಿ ಮಾಡಿಲೇಬೇಕಾಗಿದೆ. ಅದರಂತೆ ಇವರು 'ಲಕುಮಿ' ಮುಂತಾದ ಧಾರಾವಾಹಿಗಳಲ್ಲಿ ನಟಿಸುತ್ತಾ ಕಿರುತೆರೆಯಲ್ಲಿಯೇ ಗಟ್ಟಿನೆಲೆ ಕಂಡುಕೊಂಡಿದ್ದಾರೆ. (ಒನ್ ಇಂಡಿಯಾ ಕನ್ನಡ)
English summary
Actor Karibasavayya acts in Lakumi and other serials. He is not getting chance in movies as earlier


Click it and Unblock the Notifications