ಸುವರ್ಣ ಟಿವಿ ರಂಗನಾಥ್ ನಾಪತ್ತೆ ಪ್ರಕರಣ

ಒಂದು ವಲಯದ ಪತ್ರಕರ್ತರನ್ನು ಹೊರತುಪಡಿಸಿದರೆ ಸುವರ್ಣ ಟಿವಿಯನ್ನು ನಿತ್ಯ ಗಮನಿಸುತ್ತಿದ್ದ ವೀಕ್ಷಕ ಸಮುದಾಯಕ್ಕೆ ಮತ್ತು ರಂಗನಾಥ್ ಅವರ ವಾಕ್ ಚಾತುರ್ಯಕ್ಕೆ ಮನಸೋತಿದ್ದ ಅಭಿಮಾನಿಗಳಿಗೆ ಅವರು ಕಾಣೆಯಾದ ಪ್ರಕರಣ ಒಂದು ನಿಗೂಢ ವಿಷಯವಾಗಿ ಕಾಡುತ್ತಿದೆ.
ಒಂದು ಪ್ರಭಾವಿ ಕನ್ನಡ ಟಿವಿ ವಾಹಿನಿಯಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಕಾಣೆಯಾದರೆ ಅದು ಸುದ್ದಿಯಾಗುವುದಿಲ್ಲ. ವ್ಯಕ್ತಿ ಬದುಕಿದ್ದಾನೋ ಸತ್ತಿದ್ದಾನೋ ಎನ್ನುವುದೂ ಗೊತ್ತಾಗದಂಥ ಪರಿಸ್ಥಿತಿ ಕನ್ನಡ ನಾಡಿನಲ್ಲಿದೆ.
ಕಾರಣ ಸ್ಪಷ್ಟ : ಟಿವಿಯಲ್ಲಾಗಲೀ, ಪತ್ರಿಕೆಗಳಲ್ಲಾಗಲೀ ಉದ್ಯೋಗ ಮಾಡುವ ಪತ್ರಕರ್ತರ ಬಗೆಗಿನ ಸುದ್ದಿಗಳು ಸುದ್ದಿಗಳಾಗುವುದಿಲ್ಲ. ಒಂದು ಮಾಧ್ಯಮ ವೇದಿಕೆಯಲ್ಲಿ ಉಂಟಾಗುವ ಸುದ್ದಿಗಳನ್ನು ಇನ್ನೊಂದು ಮಾಧ್ಯಮ ವೇದಿಕೆ ಬರೆಯುವ ಗೋಜಿಗೆ ಹೋಗುವುದಿಲ್ಲ. ಇದು ಇಲ್ಲಿನ ಪದ್ಧತಿ!
ಪರಂತು, ರಂಗನಾಥ್ ಉರುಫ್ ರಂಗ ಅವರು ಎಲ್ಲಿದ್ದಾರೆ, ಅವರ ಮುಂದಿನ ಯೋಜನೆಗಳೇನು ಎನ್ನುವುದರ ಬಗ್ಗೆ ನಾಳೆ, ಶನಿವಾರ ನಮ್ಮ ವಾಹಿನಿಯಲ್ಲಿ ಸಂದರ್ಶನ ಪ್ರಕಟವಾಗಲಿದೆ. ನಿರೀಕ್ಷಿಸಿ. (ಫೋಟೋ : ಕೆಎಂ ವೀರೇಶ್)


Click it and Unblock the Notifications











