ಐವತ್ತರ ಮಹಿಳೆ ಜತೆ ಚೆಲ್ಲಾಟವಾಡಿದ ಕನ್ನಡ ಟಿವಿ ವಾಹಿನಿ!

ಆದರೆ ಆ ವಾಹಿನಿಯಿಂದ ಬಂದ ಉತ್ತರ ಅವರಿಗೆ ಆಘಾತವನ್ನುಂಟು ಮಾಡಿತ್ತು. ನಿಮ್ಮ ವಯಸ್ಸು ಜಾಸ್ತಿಯಾಯಿತು. 40 ವರ್ಷಗಳ ಒಳಗಿನವರಿಗೆ ಮಾತ್ರ ತಾವು ಅವಕಾಶ ನೀಡುವುದಾಗಿ ಹೇಳಿದ್ದರು. ಆದರೆ ಈ ವಿಷಯ ಪ್ರಸಾರ ಮಾಡುವಾಗ ವಯಸ್ಸಿನ ಮಿತಿಯನ್ನೇನು ಹೇಳಿರಲಿಲ್ಲವಾದ್ದರಿಂದ ಈ ಮಹಿಳೆ ಪತ್ರ ಬರೆದಿದ್ದರು.
ಚಾನೆಲ್‌ನವರಿಗೆ ಟಿ.ಆರ್.ಪಿ ಮುಖ್ಯ. ಹಾಗಾಗಿ ಹಿರಿಯ ಮಹಿಳೆಯರ ವಯಸ್ಸಿನ ಜತೆ ಚೆಲ್ಲಾಟವಾಡುತ್ತಾರೆ. 50 ವರ್ಷ ದಾಟಿದ ಮಹಿಳೆಯರಿಗೆ ಅಡುಗೆ ಮಾಡಲು ಬರುವುದಿಲ್ಲವೆಂದೋ ಅಥವಾ ಥಳುಕು ಬಳುಕು ಸಾಕಾಗುವುದಿಲ್ಲವೆಂದೋ ಗ್ತೊತ್ತಿಲ್ಲ. ಒಟ್ಟಿನಲ್ಲಿ ಅವಕಾಶ ಕೊಡಲು ನಿರಾಕರಿಸುತ್ತಿದ್ದಾರೆ.
ಇದು ಒಂದು ಉದಾಹರಣೆ ಮಾತ್ರ. ಎಲ್ಲಾ ಚಾನೆಲ್‌ನವರು ಹಿರಿಯರಿಗೆ ಹೆಚ್ಚು ಅವಕಾಶವನ್ನು ಕೊಡದೆ ಯುವತಿಯರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 50 ವರ್ಷ ದಾಟಿದವರು ಎಲ್ಲದಕ್ಕೂ ಅನರ್ಹರೇ? ಅಥವಾ ಉತ್ಸಾಹ, ಹುರುಪು ಕಳೆದುಕೊಂಡು ಬಿಟ್ಟಿರುತ್ತಾರೆಯೇ? ಹುರಿದುಂಬಿಸಬೇಕಾದ ಮಾಧ್ಯಮಗಳೇ ಈ ರೀತಿ ಮಾಡುತ್ತಿರುವುದು ನಿಜಕ್ಕೂ ಖೇದವನ್ನುಂಟು ಮಾಡಿದೆ.
More from Filmibeat
English summary
Kannada tv channels are neglecting senior womne's. They are not selecting 50 years old women to their recipe programmes. This shows medias are not encouraging seniors says one of tv viewer.


Click it and Unblock the Notifications











