ಕಡೆಗೂ ಸುಶೀಲ್‌ಗೆ ರು.5 ಕೋಟಿ ಬಹುಮಾನ ಸಿಕ್ತು
ಸೋನಿ ವಾಹಿನಿಯ ಜನಪ್ರಿಯ ಗೇಮ್ ಶೋ 'ಕೌನ್ ಬನೇಗಾ ಕರೋಡ್‌ಪತಿ'ಯಲ್ಲಿ ಸುಶೀಲ್ ಕುಮಾರ್ ರು.5 ಕೋಟಿ ಬಹುಮಾನ ಗೆದ್ದಿದರು. ಆದರೆ ಈ ಬಹುಮಾನದ ಮೊತ್ತ ಅವರ ಕೈಸೇರಿರಲಿಲ್ಲ. ಈ ಬಗ್ಗೆ ಸುಶೀಲ್ ತೀವ್ರ ಆತಂಕಕ್ಕೆ ಈಡಾಗಿದ್ದರು. ಕಡೆಗೂ ಕಾರ್ಯಕ್ರಮದ ನಿರೂಪಕ ಅಮಿತಾಬ್ ಬಚ್ಚನ್ ರು.5 ಕೋಟಿಯನ್ನು ಸುಶೀಲ್‌ಗೆ ಹಸ್ತಾಂತರಿ ಅವರ ಆತಂಕವನ್ನು ದೂರ ಮಾಡಿದ್ದಾರೆ.
ಈ ಬಗ್ಗೆ ಬಿಗ್ ಬಿ ಪ್ರತಿಕ್ರಿಯಿಸುತ್ತಾ, ಕೆಬಿಸಿಯ ಅತ್ಯುತ್ತಮ ಟೀಂನಿಂದ ಮಾತ್ರ ಈ ರೀತಿಯ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯ. ಈ ಬಾರಿಯ ಸೀಸನ್ ಹಲವು ವಿಶೇಷತೆಗಳಿಂದ ಕೂಡಿತ್ತು. ಕೆಬಿಸಿಯ ಅಡಿಬರಹವನ್ನು ಸುಶೀಲ್ ಸಾಬೀತುಪಡಿಸಿದ್ದಾರೆ. ಅವರಿಗೆ ರು.5 ಕೋಟಿ ಚೆಕ್ ಹಸ್ತಾಂತರಿಸಲಾಯಿತು ಎಂದಿದ್ದಾರೆ.
ಚೆಕ್ ಸ್ವೀಕರಿಸಿದ ಬಳಿಕ ಸುಶೀಲ್ ಮಾತನಾಡುತ್ತಾ, ಕಾರ್ಯಕ್ರಮದ ಸ್ಪರ್ಧಾಳುಗಳು ನೈಜ ಭಾರತ ದರ್ಶನವನ್ನು ಮಾಡಿಸಿದರು. ಕೆಲವರು ತುಂಬ ಸಂಕಷ್ಟದಲ್ಲಿದ್ದರು. ಅವರ ಕಷ್ಟವನ್ನು ಕಣ್ಣಾರೆ ಕಂಡಾಗ ಪಾಪಪ್ರಜ್ಞೆ ಕಾಡುತ್ತಿತ್ತು ಎಂದಿದ್ದಾರೆ. ಏನೇ ಆಗಲಿ ಬಹುಮಾನದ ಮೊತ್ತ ಸುಶೀಲ್ ಕೈಸೇರಿದೆ. (ಏಜೆನ್ಸೀಸ್)


Click it and Unblock the Notifications











