ಬ್ರಹ್ಮಾಂಡದ ಖ್ಯಾತಿಯ ನರೇಂದ್ರಬಾಬು ಶರ್ಮ ಜತೆ ಮಾತುಕತೆ

By Rajendra

Narenra Babu Sharma
ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ 'ಬೃಹತ್ ಬ್ರಹ್ಮಾಂಡ'. ಈ ಕಾರ್ಯಕ್ರಮದ ಮೂಲಕ ರಾಜ್ಯದ ಜನತೆಗೆ ನಿತ್ಯ ಜೀವನದ ಸಾಂಸಾರಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ವಿಚಾರಧಾರೆಗಳನ್ನು ಪ್ರತಿ ದಿನವೂ ಭೋದಿಸುತ್ತಿದ್ದಾರೆ ನರೇಂದ್ರಬಾಬು ಶರ್ಮ. ಅವರು ಇದೀಗ ಸಾರ್ವಜನಿಕ ಪ್ರವಚನಗಳ ಮೂಲಕ ವೀಕ್ಷಕರನ್ನು ನೇರವಾಗಿ ಭೇಟಿಯಾಗಲಿದ್ದಾರೆ. ಈ ಅವಕಾಶವನ್ನು ಜೀಕನ್ನಡ ಕಲ್ಪಿಸುತ್ತಿದೆ.

ತಮ್ಮ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪ್ರವಚನಗಳ ಮೂಲಕ ನರೇಂದ್ರಬಾಬು ಶರ್ಮ ಅವರು ರಾಜ್ಯದ ಜನತೆಯ ಜೀವನಕ್ಕೆ ಉಪಯುಕ್ತವಾದ ವಿಚಾರಗಳನ್ನು ಜೀ ಕನ್ನಡದ ಮೂಲಕ ನಿತ್ಯವೂ ಹಂಚಿಕೊಳ್ಳುತ್ತಿದ್ದು ಅಪಾರ ಜನಪ್ರಿಯತೆಗೆ ಪಾತ್ರರಾಗಿದ್ದಾರೆ. ಇವರ ವಿಚಾರಧಾರೆಗೆ ಮನಸೋತಿರುವ ಭಕ್ತಕೋಟಿ ಇವರನ್ನು ಸಂಪರ್ಕಿಸಲು ನಿತ್ಯವೂ ಪ್ರಯತ್ನಿಸುತ್ತಿರುವುದು ವಾಹಿನಿಯ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ವೀಕ್ಷಕರು ಅವರನ್ನು ನೇರವಾಗಿ ಸಂಪರ್ಕಿಸಲು ಅನುಕೂಲವಾಗುವಂತೆ ವಿವಿಧ ಪ್ರವಚನ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಜೀ ಸೌಥ್‌ಹೆಡ್ ಡಾ. ಗೌತಮ್ ಮಾಚಯ್ಯ ಹೇಳಿದ್ದಾರೆ.

ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪ್ರವಚನ ಆರಂಭವಾಗುತ್ತಿದ್ದು ಇನ್ನು ಮುಂದೆ ರಾಜ್ಯದ ವಿವಿಧ ನಗರಗಳಿಗೂ ಭೇಟಿ ನೀಡಿ ಪ್ರವಚನ ನೀಡಲಿದ್ದಾರೆ. ತಮ್ಮ ಪ್ರವಚನದಲ್ಲಿ ಅವರು ಆಧ್ಯಾತ್ಮಿಕ, ಲೌಕಿಕ ಹಾಗೂ ಕ್ಷೇತ್ರ ದರ್ಶನದ ವಿಚಾರಗಳೊಂದಿಗೆ ಪ್ರಳಯ ಕುರಿತ ಮಾಹಿತಿಯನ್ನು ಸಹ ಸಾರ್ವಜನಿಕರೊಂದಿಗೆ ಹಂಚಿಕೊಳ್ಳಲಿದ್ದಾರೆ.

ಪ್ರವಚನದ ಸ್ಥಳ ಹಾಗೂ ದಿನಾಂಕ: ದಿನಾಂಕ 20.03.2011ರ ಭಾನುವಾರ. ಶ್ರೀ ದುರ್ಗಾಪರಮೇಶ್ವರಿ ಆಟದ ಮೈದಾನ, ಆರ್. ವಿ. ಡೆಂಟಲ್ ಕಾಲೇಜ್ ಎದುರು, ಜೆ.ಪಿ. ನಗರ, 2ನೇ ಹಂತ, ಬೆಂಗಳೂರು. ಸಮಯ: ಸಂಜೆ 6.30 ಗಂಟೆಗೆ. ಪ್ರವಚನದೊಂದಿಗೆ ಸಾರ್ವಜನಿಕರು ಅವರನ್ನು ನೇರವಾಗಿ ಭೇಟಿ ಮಾಡಬಹುದಾಗಿದೆ ಎಂದು ಜೀಕನ್ನಡ ಪ್ರಕಟಣೆ ತಿಳಿಸಿದೆ.

More from Filmibeat

English summary
Zee Kannada event called "Narenra Babu Sharma Jote Mathukathe". It will organize in Bangalore on 20th March 2011, Sunday at 6.30 PM. Those who belives in atheism can directly ask questions to renowned astrologer Narendra Babu Sharma. Their is no restrictions to participate in this programme all are welcome said the Zee Kannada announcement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X