ಜೀ ಕನ್ನಡದಲ್ಲಿ ಸತ್ಯಂ ಶಿವಂ ಸುಂದರಂ ಕಾರ್ಯಕ್ರಮ

ಸರಳವಾಗಿ ಹೇಳುವುದಾದರೆ ದೇವರೇ ದಾರಿ ತೋರಿಸುತ್ತಾನೆ. ಹೀಗೆ ಕಾಣದ ಶಕ್ತಿಯ ಅಥವಾ ದೇವರ ಅಸ್ತಿತ್ವವನ್ನು ಅನುಭವದಿಂದ ಕಂಡುಕೊಂಡ ಸತ್ಯವನ್ನು ಸಾರುವ ಅಪರೂಪದ ಕಾರ್ಯಕ್ರಮ 'ಸತ್ಯಂ ಶಿವಂ ಸುಂದರಂ' ಕನ್ನಡಿಗರ ಕಣ್ಮಣಿ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.
ತಮ್ಮ ಬಹುದಿನಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ ವ್ಯಕ್ತಿಗಳು ಸ್ವತಃ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಅವರ ಸಮಸ್ಯೆಗೆ ಪರಿಹಾರ ಸಿಕ್ಕ ಸ್ಥಳಗಳು, ಅದರ ವಿಶೇಷತೆ, ಐತಿಹ್ಯ, ಸತ್ಯಾಸತ್ಯೆಗಳನ್ನು ಈ ಕಾರ್ಯಕ್ರಮವು ಒಳಗೊಂಡಿರುತ್ತದೆ. ಜೀವನದ ಬಗ್ಗೆ ಹೊಸ ಆಶಾಭಾವ ಮೂಡಿಸಿ, ಧನಾತ್ಮಕ ಮನೋಭಾವ ಬೆಳೆಸುವ ಈ ಸರಣಿಯಲ್ಲಿ ಮೂಢ ನಂಬಿಕೆಗೆ ಅವಕಾಶವಿಲ್ಲ ಎಂದು ಜೀಕನ್ನಡ ವಾಹಿನಿ ತಿಳಿಸಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Satyam Shivam Sundaram Zee Kannada’s New Offering Modern lifestyles are burdened with various psychological and physical problems like health, stress, infertility and such others. Satyam Shivam Sundaram’ airs on Zee Kannada, every Monday and Tuesday at 9:00PM IST from the 19th of September.


Click it and Unblock the Notifications











