twitter
    For Quick Alerts
    ALLOW NOTIFICATIONS  
    For Daily Alerts

    ಈಟಿವಿ ಚಾನೆಲ್ ಖರೀದಿ ಸನಿಹದಲ್ಲಿ ಸೋನಿ

    By Mahesh
    |

    Sony set to buy ETV
    ದೇಶದ ಪ್ರಮುಖ ಮನರಂಜನಾ ಚಾನೆಲ್ ಸೋನಿಯ ಮಾಲೀಕತ್ವ ಹೊಂದಿರುವ ಮಲ್ಟಿ ಸ್ಕ್ರೀನ್ ಮೀಡಿಯಾ(Multi-Screen Media (MSM)) ಹೈದರಾಬಾದ್ ಮೂಲದ ರಾಮೋಜಿರಾವ್ ಒಡೆತನದ ಈನಾಡು ಟಿವಿಯ 11 ಪ್ರಾದೇಶಿಕ ಚಾನೆಲ್ ಗಳನ್ನು ಖರೀದಿಸಲು ಸಜ್ಜಾಗಿದೆ.

    ಮೂಲಗಳ ಪ್ರಕಾರ ಖರೀದಿ ಮಾತುಕತೆ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಈ ಡೀಲ್ ನ ಮೊತ್ತ 2,250 ರಿಂದ 2,400 ಕೋಟಿ ರೂಪಾಯಿಗಳಾಗಿದೆ. ದೇಶದಲ್ಲೇ ಅತೀ ದೊಡ್ಡ ಮಾದ್ಯಮ ಡೀಲ್ ಆಗಲಿದೆ.

    ಈ ಖರೀದಿ ಯಶಸ್ವಿಯಾದರೆ ಸೋನಿ ಪ್ರಾದೇಶಿಕ ಚಾನೆಲ್ ಗಳ ವಹಿವಾಟಿನಲ್ಲಿ ತನ್ನ ಪ್ರತಿಸ್ಪರ್ದಿಗಳಾದ ಸ್ಟಾರ್ ಹಾಗೂ ಝೀ ಟಿವಿಗೆ ಸ್ಪರ್ದೆ ನೀಡಬಲ್ಲುದ್ದಾಗಿದೆ. ಇದರಿಂದ ಸೋನಿ ಪ್ರಾದೇಶಿಕ ಚಾನೆಲ್ ಗಳನ್ನು ಡಿಜಿಟಲ್ ರೂಪದಲ್ಲಿ ನೀಡಲಿದೆ.

    ಈ ಕುರಿತು ಪ್ರತಿಕ್ರಿಯಿಸಲು ಎರಡೂ ಕಂಪೆನಿಗಳು ನಿರಾಕರಿಸಿದ್ದು ಈ ಡೀಲ್ ಗೆ ಅರ್ನ್ಸ್ ಮತ್ತು ಯಂಗ್ ಈ ನಾಡು ಸಮೂಹಕ್ಕೆ ಸಲಹೆಗಾರನಾಗಿದೆ ಎನ್ನಲಾಗಿದೆ. ಮಲ್ಟಿ ಸ್ಕ್ರೀನ್ ಮೀಡಿಯಾ ಈಗ ಸೋನಿ ಟಿವಿ, ಸಬ್ ಟಿವಿ, ಸೆಟ್ ಮ್ಯಾಕ್ಸ್, ಎಎಕ್ಸ್‌ಎನ್, ಸೋನಿ ಪಿಕ್ಸ್ ಹಾಗೂ ಆನಿಮ್ಯಾಕ್ಸ್ ಎಂಬ ಆರು ಚಾನೆಲ್ ಗಳನ್ನು ನಡೆಸುತಿದ್ದು ಹಿಂದಿ ಮನರಂಜನಾ ಮಾರುಕಟ್ಟೆಯಲ್ಲಿ ಶೇ 15 ರಷ್ಟು ಪಾಲನ್ನು ಹೊಂದಿದೆ.

    ಚಾನೆಲ್ ಖರೀದಿ ಸೋನಿಗೆ ಹೊಸತೇನಲ್ಲ, ಈ ಹಿಂದೆ ಶ್ರೀಆದಿಶಕ್ತಿ ಬ್ರದರ್ಸ್ (ಸಬ್ ) ಟಿವಿ ಯನ್ನು ಖರೀದಿಸಿದ್ದು ಇದು ಸ್ಟಾರ್ ಒನ್ ಗೆ ಸ್ಪರ್ಧೆ ನೀಡುತ್ತಿದೆ. ದೇಶದಲ್ಲಿ ಪ್ರಾದೇಶಿಕ ಮನರಂಜನಾ ಚಾನೆಲ್ ಗಳು ದೇಶದ 32,000 ಕೋಟಿ ರೂಪಾಯಿಗಳ ಜಾಹೀರಾತು ಆದಾಯದಲ್ಲಿ 8,000 ಕೋಟಿ ರೂಪಾಯಿಗಳ ಪಾಲನ್ನು ಹೊಂದಿವೆ.

    English summary
    Hyderabad origin Ramoji Rao-owned Eenadu TV’s (ETV’s) bouquet of 11 regional channels are set to be part of Sony Television in India. The biggest media deal expected to close to $500-600 million. an announcement expected shortly sources.
    Sunday, July 17, 2011, 10:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X