ಗುರುವಾರ ರಾತ್ರಿ ಹತ್ತಕ್ಕೆ ರಾಘವೇಂದ್ರ ಕಲ್ಯಾಣ
ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗುರು ರಾಘವೇಂದ್ರ ವೈಭವ ಯಶಸ್ವಿ ನೂರು ಸಂಚಿಕೆಗಳನ್ನು ಪೂರೈಸಿದೆ. ಗುರುವಾರ (ನ.18) ರಾತ್ರಿ ರಾಘವೇಂದ್ರ ಕಲ್ಯಾಣ ನಡೆಯಲಿದೆ.
ಗುರು ರಾಘವೇಂದ್ರರು ರಾಯರಾಗುವ ಮುಂಚಿನ ಹೆಸರಾದ ವೆಂಕಟನಾಥರ ಮದುವೆ ಸನ್ನಿವೇಶ ಇಂದು ರಾತ್ರಿ 10 ಗಂಟೆಗೆ ಪ್ರಸಾರವಾಗಲಿದೆ. ಗುರು ರಾಘವೇಂದ್ರ ಸ್ವಾಮಿಗಳ ಜೀವನ ಗಾಥೆಯನ್ನು ಸಾರುತ್ತಿರುವ ಧಾರಾವಾಹಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಧಾರಾವಾಹಿ ನಿರ್ಮಾಪಕ ಡಾ.ಎಂ.ಆರ್. ಪಟ್ಟಾಭಿರಾಮ್ ತಿಳಿಸಿದ್ದಾರೆ.
ರಾಘವೇಂದ್ರರ ತಾತ ಕನಕಾಚಲ ಭಟ್ಟರಿಂದ ಆರಂಭವಾದ ಕತೆ ರಾಯರ ಯೌವ್ವನದ ಹಂತ ತಲುಪಿದೆ. ವೆಂಕಟನಾಥರು ಗುರು ರಾಯರಾಗುವ ಮೊದಲಿನ ಹಲವು ಮುಖ್ಯ ತಿರುವುಗಳಿವೆ. ಸೋಮವಾರದಿಂದ ಶುಕ್ರವಾರವರೆಗೆ ಪ್ರತಿದಿನ ರಾತ್ರಿ 10 ಗಂಟೆಗೆ ಪ್ರಸಾರವಾಗುತ್ತಿರುವ ಈ ಧಾರಾವಾಹಿಯನ್ನು ಬಲ ಸುರೇಶ್ ನಿರ್ದೇಶಿಸಿದ್ದಾರೆ.
ಗುರು ರಾಘವೇಂದ್ರ ವೈಭವ ಸುವರ್ಣ ಶ್ರೀನಿವಾಸಮೂರ್ತಿ ಪವಿತ್ರಾ ಲೋಕೇಶ್ ಕಿರುತೆರೆ guru raghavendra vaibhava suvarna tv pavithra lokesh srinivasa murthy


Click it and Unblock the Notifications
