For Quick Alerts
  ALLOW NOTIFICATIONS  
  For Daily Alerts

  ಬಲಗಾಲಿಟ್ಟು ಬಂದ ತುಂಟಾಟದ ಚಿಟ್ಟೆ ಛಾಯಾ ಸಿಂಗ್

  |

  ಸ್ಯಾಂಡಲ್ ವುಡ್ ನಲ್ಲಿ 'ತುಂಟಾಟ'ದ ಮೂಲಕ ಬಂದು ಚಿಟ್ಟೆಯಾಗಿ ಒಂದು ಹಂತಕ್ಕೆ ಹೆಸರು ಮಾಡಿದ್ದ ನಟಿ ಛಾಯಾ ಸಿಂಗ್ ಬಹಳಷ್ಟು ಕಾಲದಿಂದ ಹಿರಿತೆರೆ ಹಾಗೂ ಕಿರುತೆರೆ ಎರಡರಿಂದಲೂ ಮಾಯವಾಗಿದ್ದರು. ಇದೀಗ ಮತ್ತೊಮ್ಮೆ ಪ್ರತ್ಯಕ್ಷವಾಗಲಿದ್ದಾರೆ. ಕಿರಿತೆರೆಯಲ್ಲಿ ರಿಯಾಲಿಟಿ ಶೋಗೆ ಬರುವ ಮೂಲಕ ಮತ್ತೊಮ್ಮೆ ಜನರಿಗೆ ಮುಖದರ್ಶನ ಮಾಡಿಸಲಿದ್ದಾರೆ.

  ರೌಡಿ ಅಳಿಯ, ಆಕಾಶ ಗಂಗೆ, ಬಲಗಾಲಿಟ್ಟು ಒಳಗೆ ಬಾ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡರೂ ಅದ್ಯಾಕೋ ಆಕೆಗೆ ಸಿನಿಮಾರಂಗದಲ್ಲಿ ಹೆಚ್ಚು ಮಿಂಚಲು ಸಾಧ್ಯವಾಗಲೇ ಇಲ್ಲ. ಪ್ರತಿಭಾವಂತೆಯಾದರೂ ಚಿತ್ರರಂಗ ಅವರಲ್ಲಿ ಅದೇನು ಕೊರತೆ ಕಂಡಿತೋ ಎಂಬಂತೆ ಛಾಯಾ ಸಿಂಗ್ ಮಡಿಲಿಗೆ ಸಿನಿಮಾ ಬೀಳಲಿಲ್ಲ. ಕಿರುತೆರೆಯಲ್ಲಿ ಆಕೆಯೇ ಉಳಿಯಲಿಲ್ಲವೋ ಏನೋ!

  ಒಟ್ಟಿನಲ್ಲೀಗ ಜೀ ವಾಹಿನಿಯಲ್ಲಿ ಸದ್ಯದಲ್ಲೇ ಪ್ರಾರಂಭವಾಗಲಿರುವ ಗಂಡ-ಹೆಂಡಿರ ರಿಯಾಲಿಟಿ ಶೋ "ನಾನು ನೀನು ಹಾಲು ಜೇನು' ವನ್ನು ನಟಿ ಛಾಯಾ ಸಿಂಗ್ ನಡೆಸಿಕೊಡಲಿದ್ದಾರೆ. ಮತ್ತೆ ಕಿರುತೆರೆಯತ್ತ ಮುಖಮಾಡಿರುವ ಛಾಯಾ, ಇದೀಗ ಪೂರ್ಣಪ್ರಮಾಣದಲ್ಲಿ ಕಿರಿತೆರೆಯಲ್ಲೇ ಸೆಟ್ಲ್ ಆದರೂ ಆಶ್ಚರ್ಯವಿಲ್ಲ ಎನ್ನುತ್ತಿವೆ ಸುದ್ದಿ ಮೂಲಗಳು. (ಒನ್ ಇಂಡಿಯಾ ಕನ್ನಡ)

  English summary
  Kannada Actress Chaya Singh to host Zee Kannada Reality Show, 'Nanu Neenu Halu Jenu' very shortly. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X