ಟಿವಿ ಪುನರ್ಜನ್ಮ ಕಾರ್ಯಕ್ರಮ ಯುವತಿಯ ಪ್ರಾಣ ನೀಗಿತು

ಇಲ್ಲಿನ ಕುವೆಂಪುನಗರ ಬಡಾವಣೆಯ ಎಚ್‌ಎಂಟಿ ನೌಕರ ಆರ್ಎಸ್ ಚಂದ್ರಶೇಖರ್ ರಾವ್ ಅವರ ಪುತ್ರಿ ಎಸ್. ಸುಪ್ರಿಯಾ (17) ಶನಿವಾರ ಮುಂಜಾನೆ (ಜುಲೈ 16) ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ತಂದೆ- ತಾಯಿಗೆ ಬರೆದ ಪತ್ರದಲ್ಲಿರುವ ಸಾಲುಗಳು ಇವು.
ಖಾಸಗಿ ಕನ್ನಡ ನ್ಯೂಸ್ ಚಾನೆಲ್‌ನಲ್ಲಿ ಪ್ರಸಾರವಾಗುವ ಪುನರ್ಜನ್ಮ ಕಾರ್ಯಕ್ರಮವನ್ನು ತಪ್ಪದೆ ನೋಡುತ್ತಿದ್ದ ಸುಪ್ರಿಯಾಗೆ ಪುನರ್ಜನ್ಮವೊಂದೇ ತನ್ನೆಲ್ಲ ಸಮಸ್ಯೆಗೆ ಪರಿಹಾರ ಎನಿಸಿತು. ತಂದೆ- ತಾಯಿ ಕೆಲಸಕ್ಕೆ ತೆರಳಿದ ನಂತರ ಪುನರ್ಜನ್ಮದಲ್ಲಿ ದೊಡ್ಡ ವ್ಯಕ್ತಿಯಾಗಿ ಹುಟ್ಟಿ ದೇಶದ ಭ್ರಷ್ಟಾಚಾರ ತೊಲಗಿಸುತ್ತೇನೆ ಎಂಬ ಸಾರಾಂಶವಿರುವ ನಾಲ್ಕು ಪುಟದ ಪತ್ರ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ.
'ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರವಿದೆ. ಯುವ ಜನತೆ ದೇಶದ ಬಗ್ಗೆ ಯೋಚಿಸುತ್ತಿಲ್ಲ. ಸರ್ಕಾರ ಏನೂ ಮಾಡುತ್ತಿಲ್ಲ' ಎಂದು ಸುಪ್ರಿಯಾ ತನ್ನ ಅಸಹಾಯಕತೆಯನ್ನು ಪತ್ರದಲ್ಲಿ ತೋಡಿಕೊಂಡಿದ್ದಾಳೆ.
ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಸುಪ್ರಿಯಾ, ಓದಿನಲ್ಲೂ ಮುಂದಿದ್ದರು. ದೇಶ ಹಾಗೂ ದೇಶ ಸೇವೆಯ ಬಗ್ಗೆ ದೊಡ್ಡ ಕನಸು ಕಟ್ಟಿಕೊಂಡಿದ್ದರು. ಅವರಿಗೆ ಕೊಂಚ ಕಿವಿ ತೊಂದರೆಯಿತ್ತು. ಇದೇ ಕಾರಣಕ್ಕೆ ಸಹಪಾಠಿಗಳು ಮತ್ತು ಗೆಳೆತಿಯರು ಸುಪ್ರಿಯಾ ಜೊತೆಗೆ ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಿದ್ದರು. ಸಹಪಾಠಿಗಳ ವರ್ತನೆ ಸುಪ್ರಿಯಾ ಮನಸ್ಥಿತಿಯನ್ನು ಸಾಕಷ್ಟು ಕುಗ್ಗಿಸಿತ್ತು ಎನ್ನಲಾಗಿದೆ.


Click it and Unblock the Notifications











