ಸುವರ್ಣ ಬೆಂಗಳೂರಿನ ಅಂಡರ್ ವರ್ಲ್ಡ್ ವಿಡಿಯೋ-1

ಆ ದಿನಗಳಲ್ಲಿ ಕತ್ತಿ, ಮಚ್ಚು , ಲಾಂಗು, ಭರ್ಜಿಗಳನ್ನು ಹಿಡಿದು ಹೋರಾಡಿದ ದೊರೆಗಳೆಂದರೆ ಜಯರಾಜ್, ಕೊತ್ವಾಲ್, ಅಗ್ನಿ ಶ್ರೀಧರ್, ಯುವ ಪ್ರೇಮಿ ವರದರಾಜ್, ಕೊತ್ವಾಲ್ ಬಂಟ ಶೆಟ್ಟಿ, ಬಚ್ಚನ್ ಮತ್ತವರ ಸಾಮಂತರು!
ನಿರೂಪಕ ಹಮೀದ್ ಪಾಳ್ಯ ಅವರ ನಡೆಸಿಕೊಡುತ್ತಿರುವ ಈ ರೋಚಕ ಸರಣಿ, ಅಂದಿನ ರಾಜಕೀಯ, ಜನಜೀವನ, ಭೂಗತ ಜಗತ್ತಿನ ಆಗು ಹೋಗುಗಳ ಮೇಲೆ ಮರುಬೆಳಕು ಚೆಲ್ಲುತ್ತಿದೆ. ಅಂದು ನಡೆದ ನವಿರೇಳಿಸುವ ಘಟನೆಗಳು ಕಣ್ಣು ಕುಕ್ಕತ್ತವೆ.
ಭೂಗತ ಜಗತ್ತಿಗೆ ಗುಡ್ ಬೈ ಹೇಳಿ ಮನೇಲಿ ಕೂತಿರುವ ಮಾಜಿ ಪಾತಕಿಗಳ ಹಾಲಿ ಹೇಳಿಕೆಗಳು ಕೂಡಾ ಕಾಣ ನಿಮಗೆ ಕೇಳಲು, ನೋಡಲು ಸಿಗತ್ತೆ.
ಅಲ್ಲಿ ಮಚ್ಚು, ಲಾಂಗಿಗಿಂತ ರೌಡಿ ಪಟ್ಟದ ಹೋರಾಟಕ್ಕೆ ನಡೆದ ಸಂಘರ್ಷ, ತಂತ್ರ, ಗುಂಪುಗಾರಿಕೆ ಮತ್ತು ಕೈಚಳಕಗಳ ಚಿತ್ರಣವೇ ಈ ಮಾಲಿಕೆಯ ಜೀವಾಳ. ಸರಣಿಯ ಮೊದಲ ಕಂತಿನಲ್ಲಿ ಜಯರಾಜ್ ಹಾಗೂ ಕೊತ್ವಾಲ್ ರಾಮಚಂದ್ರ ಅವರ ನಡುವಿನ ಹೋರಾಟದ ಕಥೆಯಿದೆ. ನೋಡಿ.
ಫ್ಲ್ಯಾಶ್ ಬ್ಲಾಕ್ ವಿಡಿಯೋ 1 || ಫ್ಲ್ಯಾಶ್ ಬ್ಲಾಕ್ ವಿಡಿಯೋ 2 || ಫ್ಲ್ಯಾಶ್ ಬ್ಲಾಕ್ ವಿಡಿಯೋ 3
ಮುಂದಿನ ಭಾಗದಲ್ಲಿ ಮತ್ತಷ್ಟು ಭೂಗತ ಕಥೆಗಳಿಗಾಗಿ ನಿರೀಕ್ಷಿಸಿ...


Click it and Unblock the Notifications











