For Quick Alerts
  ALLOW NOTIFICATIONS  
  For Daily Alerts

  ಕೋಟ್ಯಾಧಿಪತಿಗೆ ಬರುತ್ತಿದ್ದಾರೆ ಬಿಗ್ ಬಿ ಅಮಿತಾಬ್

  By Rajendra
  |

  ಬಿಗ್ ಬಿ ಅಮಿತಾಬ್ ಬಚ್ಚನ್‌ಗೆ ಸಾಕಷ್ಟು ಹೆಸರು, ಹಣ ತಂದುಕೊಟ್ಟಂತಹ ಗೇಮ್ ಶೋ 'ಕೌನ್ ಬನೇಗಾ ಕರೋಡ್‌ಪತಿ'. ಈ ಶೋಗೂ ಮುನ್ನ ಅಮಿತಾಬ್ ಪರಿಸ್ಥಿತಿ ಬಹಳ ಬರ್ಬಾದ್ ಆಗಿತ್ತು. ಕೆಬಿಸಿಗೆ ಯಾವಾಗ ಎಂಟ್ರಿಕೊಟ್ಟರೋ ಅಲ್ಲಿಂದ ಅಮಿತಾಬ್‌ಗೆ ಮತ್ತೆ ಶುಕ್ರದೆಸೆ ಶುರುವಾಗಿತ್ತು. ಈಗ ಮತ್ತೊಮ್ಮೆ 'ಕೌನ್ ಬನೇಗಾ ಕರೋಡ್‌ಪತಿ' ಶೋ ಅಮಿತಾಬ್ ಕೈಗೆ ಸಿಕ್ಕಿದೆ.

  ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಮಿತಾಬ್ ಸುಳಿವು ನೀಡಿದ್ದಾರೆ. "ಕೆಬಿಸಿ ಮುಂದಿನ ಆವೃತ್ತಿಯ ಬಗ್ಗೆ ಸೋನಿ ಟಿವಿ ಜೊತೆ ಪ್ಲಾನ್ ಮಾಡಲಾಗುತ್ತಿದೆ. ಎಲ್ಲ ವಿವರಗಳನ್ನೂ ಶೀಘ್ರದಲ್ಲೇ ಕೊಡಲಿದ್ದೇನೆ" ಎಂದಿದ್ದಾರೆ ಅಮಿತಾಬ್.

  ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿದ್ದ 'ಕೌನ್ ಬನೇಗಾ ಕರೋಡ್‌ಪತಿ' ಟಿಆರ್‌ಪಿ (ಟೆಲಿವಿಷನ್ ರೇಟಿಂಗ್ ಪಾಯಿಂಟ್) ರೇಟಿಂಗ್‌ನಲ್ಲೂ ಹೊಸ ದಾಖಲೆ ನಿರ್ಮಿಸಿತ್ತು. ಇದುವರೆಗೂ ಐದು ಸೀಸನ್‌ಗಳು ನಡೆದಿದ್ದು, 1, 2, 4 ಹಾಗೂ 5ನೇ ಸೀಸನ್ ಅಮಿತಾಬ್ ನಿರ್ವಹಿಸಿದ್ದರು. ಈಗ ಆರನೇ ಸೀಸನ್ ಕೂಡ ಅವರ ಕೈಗೇ ಸಿಕ್ಕಿದೆ. (ಏಜೆನ್ಸೀಸ್)

  English summary
  Amitabh Bachchan will soon be back with Kaun Banega Crorepati, one of the most loved quiz shows in the country. Before Kaun Banega Crorepati, not many Bollywood stars thought it was appropriate for stars to be seen on the small screen. However, with KBC, Amitabh Bachchan set a new trend.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X