For Quick Alerts
  ALLOW NOTIFICATIONS  
  For Daily Alerts

  ಬೊಂಬಾಟ್ ಭೋಜನವಿದು ವಿಚಿತ್ರ ಭಕ್ಷ್ಯಗಳಿವು ಹ್ಹಹ್ಹಹ್ಹಹ್ಹಾ

  By Rajendra
  |

  ಸುವರ್ಣ ವಾಹಿನಿಯ ಜನಪ್ರಿಯ ಅಡುಗೆ ಕಾರ್ಯಕ್ರಮ 'ಬೊಂಬಾಟ್ ಭೋಜನ' ಐದು ನೂರು ಕಂತುಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಪುಸ್ತಕ ರೂಪದಲ್ಲಿ ಬಿಡುಗಡೆಯಾದ ಎರಡು ಭಾಗಗಳ ಪ್ರತಿಗಳು ದಾಖಲೆ ಮಟ್ಟದಲ್ಲಿ ಮಾರಾಟವಾಗಿರುವುದು ಈ ಕಾರ್ಯಕ್ರಮದ ಇನ್ನೊಂದು ವಿಶೇಷ.

  2010ರ ಫ್ರೆಬ್ರವರಿಯಲ್ಲಿ ಆರಂಭವಾದ 'ಬೊಂಬಾಟ್ ಭೋಜನ' ಕಾರ್ಯಕ್ರಮ ಇದೇ 2012 ಜನವರಿ 6ಕ್ಕೆ ಐದು ನೂರು ಕಂತುಗಳನ್ನು ಪೂರೈಸಿದೆ. ಕನ್ನಡ ಕಿರುತೆರೆ ಇತಿಹಾಸದಲ್ಲಿ ಅಡುಗೆಗೆ ಸಂಬಂಧಿಸಿದ ಕಾರ್ಯಕ್ರಮವೊಂದು ಈ ರೀತಿ ಯಶಸ್ಸು ಗಳಿಸಿರುವುದು ಇದೇ ಮೊದಲು ಎನ್ನಬಹುದು.

  ಈ ಕಾರ್ಯಕ್ರಮದ ಯಶಸ್ಸಿನ ಸೂತ್ರಧಾರ ಸಿಹಿಕಹಿ ಚಂದ್ರು. ಇವರ ವೈವಿಧ್ಯಪೂರ್ಣ ಕಲ್ಪನೆಯೇ ಜನಮನ ಮುಟ್ಟುವಲ್ಲಿ ಯಶಸ್ವಿಯಾಗಲು ಕಾರಣ. ಲಿಂಗಭೇಧವಿಲ್ಲದೆ ಎಲ್ಲ ವಯೋಮಾನದವರ ಜಿಹ್ವಾ ಚಾಪಲ್ಯ ತಣಿಸುತ್ತಿರುವ ಕಾರ್ಯಕ್ರಮ ಇದಾಗಿದೆ. ಸೋಮವಾರದಿಂದ ಶುಕ್ರವಾರದ ತನಕ ಮಧ್ಯಾಹ್ನ 1 ಗಂಟೆಗೆ ನಿಮ್ಮ ನೆಚ್ಚಿನ ಸುವರ್ಣ ವಾಹಿನಿಯಲ್ಲಿ ನೋಡಿ ಆನಂದಿಸಿ. (ಒನ್‌ಇಂಡಿಯಾ ಕನ್ನಡ)

  English summary
  Bombat Bhojana is the Hottest Cookery Show on Kannada Television with high TRP Ratings, now completes 500 episodes. Currently aired on Asianet - Suvarna Monday to Friday at 1.00pm. The show is hosted by acclaimed actor, producer, director and comedian Sihi Kahi Chandru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X