»   » ಸುವರ್ಣ ಟಿವಿ ಹೊಸ ಧಾರಾವಾಹಿ ಅಮೃತವರ್ಷಿಣಿ

ಸುವರ್ಣ ಟಿವಿ ಹೊಸ ಧಾರಾವಾಹಿ ಅಮೃತವರ್ಷಿಣಿ

Posted By:
Subscribe to Filmibeat Kannada
Amratavarshini
ಸುವರ್ಣ ಟಿವಿಯಲ್ಲಿ ಹೊಸ ಧಾರಾವಾಹಿ ಇಂದಿನಿಂದ (ಮಾ.19) ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಬಡ ಕುಟುಂಬದಿಂದ ಬಂದಂತಹ ಮುಗ್ಧ ಹುಡುಗಿ ಶ್ರೀಮಂತ ಹುಡುಗನನ್ನು ವರಿಸಿದಾಗ ಬದುಕಿನಲ್ಲಿ ಆಗುವ ಬದಲಾವಣೆಗಳ ಕಥೆಯೇ 'ಅಮೃತವಷಿಣಿ' ಧಾರಾವಾಹಿ.

"ಸೊಸೆ ಅಂದ್ರೆ ಮಗನ ಹೆಂಡತಿ ಮಾತ್ರ ಅಲ್ಲ; ಮನೆ ಬೆಳಗೋ ಮಗಳೂ ಹೌದು" ಎಂಬ ಸಂದೇಶ ಈ ಧಾರಾವಾಹಿಯಲ್ಲಿ ಮನೆಮನೆಗೆ ಮುಟ್ಟಿಸಲಿದೆ. ಆರ್.ಜಿ. ಮೀಡಿಯಾ ಸ್ಟಪ್ ಸಂಸ್ಥೆಯ ನಿರ್ಮಾಣದ ಧಾರಾವಾಹಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗಲಿದೆ.

ಈ ಧಾರಾವಾಹಿಯನ್ನು ಯಾವುದೇ ರಾಜಿ ಮಾಡಿಕೊಳ್ಳದಂತೆ ಗುಣಾತ್ಮಕವಾಗಿ ತೆರೆಗೆ ತರಲಾಗಿದ್ದು, ಅದ್ದೂರಿಯಾಗಿ ಚಿತ್ರೀಕರಿಸಿದ್ದೇವೆ ಎಂದಿದ್ದಾರೆ ನಿರ್ಮಾಪಕ ರವಿ ಗರಣಿ. ಇವರು ಈ ಹಿಂದೆ ಕೃಷ್ಣ ರುಕ್ಮಿಣಿ ಎಂಬ ಯಶಸ್ವಿ ಧಾರಾವಾಹಿಯನ್ನು ನಿರ್ಮಿಸಿದ್ದರು. (ಒನ್‌ಇಂಡಿಯಾ ಕನ್ನಡ)

English summary
Amratavarshini, a New Serial Starting on Asianet Suvarna from 19th March 2012. Watch Amratavarshini Every Monday to Friday at 9.30 P.M On Suvarna.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X