TRP ಯಲ್ಲಿ ಬೊಂಬಾಟ್, ಏಳುನೂರಕ್ಕೂ ನಾಟ್ ಔಟ್

ಮಲಗುವ ಮುನ್ನ ಕೊಲೆ, ರಕ್ತಪಾತ ನೋಡಿ ದುಃಸ್ವಪ್ನ ಕಾಣುವ ಬದಲು ನಕ್ಕು ಹಗುರಾಗಿ ಸುಖನಿದ್ದೆ ಮಾಡಿ ಎಂಬ ಕರೆಗೆ ವೀಕ್ಷಕರು ಓಗೊಟ್ಟಿದ್ದಾರೆ. ಎರಡು ಮನೆಗಳು, ಅಲ್ಲಿಂದಿಲ್ಲಿಗೆ ಬೆಸೆದುಕೊಂಡಿರುವ ಸ್ನೇಹದ ಕೊಂಡಿಗಳು, ಆಗೀಗ ಕಮರುವ ಪ್ರೇಮಾಂಕುರಗಳು, ಈಡೇರದ ಆಸೆಗಳು, ಆಕಾಶಕ್ಕೆ ಏಣಿಗಳು, ಆಣೆಗಳು, ಭಾಷೆಗಳು ಒಟ್ಟೂ ಕಲೆತರೆ ಅದೇ ಪಾರ್ವತಿ ಪರಮೇಶ್ವರ!
ಇಂದು ಸುಬ್ಬು ಪಾತ್ರಧಾರಿ ಬಸವರಾಜ್, ವೇದ-ಜಯಶೀಲಾ, ಲಾಯರ್ ಗುಂಡಣ್ಣ- ಲೋಕೇಶ್, ಪಾರ್ವತಿ-ಗಾನಶ್ರೀ, ಪರಮೇಶ್ವರ-ರವಿತೇಜ ರಸ್ತೆಯಲ್ಲಿ ಹೋದರೆ ಜನ ಮುತ್ತಿಕೊಳ್ಳುತ್ತಾರೆ. ಕಲಾವಿದರ ಮನಮುಟ್ಟುವ ಅಭಿನಯ, ಎಂ.ಎಸ್. ನರಸಿಂಹಮೂರ್ತಿ ಮೊನಚು ಸಂಭಾಷಣೆ, ಸಂಚಿಕೆ ನಿರ್ದೇಶಕ ಪೃಥ್ವಿರಾಜ್ ಕುಲಕರ್ಣಿ ಇವರುಗಳ ಪರಿಶ್ರಮದ ಫಲವಾಗಿದೆ ಈ ಧಾರಾವಾಹಿಯ 'ಯಶಸ್ಸು'. (ಒನ್ ಇಂಡಿಯಾ ಕನ್ನಡ)
More from Filmibeat
English summary
Zee Kannada Serial 'Parvati Parameshwara' reached 700 Episode. It is running successfully with high TRP. Sihikahi Chandru is the main Director and Prathviraj Kulkarni is the episode director.


Click it and Unblock the Notifications











