2 ಮದುವೆ, 2 ಲಿವ್ ಇನ್ ಸಂಬಂಧ, 4 ಜನರ ಜೊತೆ ರೊಮ್ಯಾನ್ಸ್ ; ತನ್ನ ಬದುಕಿನ ಕಥೆ ಹೇಳಿದ ಬಿಗ್ ಬಾಸ್ ಸ್ಫರ್ಧಿ
ಪ್ರೀತಿ-ಪ್ರೇಮ ಇದ್ದಲ್ಲಿ ವಿರಹ ಮತ್ತು ನೋವು ಹೊಸದಲ್ಲ. ಅದು ಇಂದು ನಿನ್ನೆಯ ಕಥೆಯೂ ಅಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಪ್ರೇಮ ಕಥೆ ಮತ್ತು ವ್ಯಥೆಗಳನ್ನು ನಮ್ಮ ಸುತ್ತ ಮುತ್ತ ನಾವು ಮತ್ತು ನೀವು ದಿನನಿತ್ಯ ಕೇಳುತ್ತಾನೆ ಇರುತ್ತೇವೆ. ಇನ್ನೂ.. ಬಣ್ಣದ ಬದುಕಿನಲ್ಲಿ ಬಹುತೇಕರಿಗೆ ಗೊತ್ತಿರುವಂತೆ ಲವ್ ಮತ್ತು ದೋಖಾ ತುಂಬಾ ಮಾಮೂಲು. ಇವತ್ತು 'ಐ ಲವ್ ಯೂ' ..
ಎಂದು ಹೇಳಿದವರೇ ಮರು ದಿನ 'ಐ ಹೇಟ್ ಯು' ಎಂದು ಹೇಳಿ ಸಂಬಂಧಗಳನ್ನು ಮುರಿದುಕೊಳ್ಳುತ್ತಾರೆ. ಎಲ್ಲವನ್ನೂ ಮರೆತು ಹೊಸ ಬದುಕಿನ ಹುಡುಕಾಟ ನಡೆಸುತ್ತಾರೆ. ಇದಕ್ಕೆ ಕುನಿಕಾ ಸದಾನಂದ್ ಅವರ ವ್ಯೆಯಕ್ತಿಕ ಬದುಕು ಅತ್ಯುತ್ತಮ ಉದಾಹರಣೆ.

ಹೌದು ಕುನಿಕಾ (ಕುಣಿಕಾ) ಸದಾನಂದ್. ಒಂದ್ಕಾಲದ ಅಪ್ರತಿಮ ಸುಂದರಿ. ಆದರೆ.. ದುರಾದೃಷ್ಟ ನಾಯಕಿಯಾಗಿ ಮಿಂಚುವಲ್ಲಿ ವಿಫಲವಾದ ಕುನಿಕಾ ಆ ನಂತರ ''ಬೇಟಾ''.. ''ಖಿಲಾಡಿ''.. ''ಗುಮ್ರಾಹ್''.. ''ಕೊಯ್ಲಾ''.. ''ಪ್ಯಾರ್ ಕಿಯಾ ತೋ ಡರನಾ ಕ್ಯಾ''.. ''ಹಮ್ ಸಾಥ್ ಸಾಥ್ ಹೈ''.. ''ಪೇಜ್ 3''.. ಹೀಗೆ ನೂರಕ್ಕೂ ಅಧಿಕ ಚಿತ್ರಗಳಲ್ಲಿ ಪ್ರಮುಖವಾದ ಪಾತ್ರಗಳನ್ನು ನಿರ್ವಹಿಸಿದರು. ಕಿರುತೆರೆಯಲ್ಲಿ ಕೂಡ ಕೆಲಸ ಮಾಡಿದರು. ವೃತ್ತಿಯಲ್ಲಿ ವಕೀಲೆ ಕೂಡ ಆಗಿರುವ ಕುನಿಕಾ ಸಾಮಾಜಿಕ ಕಾರ್ಯಕರ್ತೆ ಕೂಡ ಹೌದು.
ಇಂಥಾ ಕುನಿಕಾ ಸದ್ಯ ಸಲ್ಮಾನ್ ಖಾನ್ ಸಾರಥ್ಯ ವಹಿಸಿರುವ ''ಬಿಗ್ ಬಾಸ್'' ಮನೆಯಲ್ಲಿದ್ದಾರೆ. ತಮ್ಮ ನಿಷ್ಠುರ ವ್ಯಕ್ತಿತ್ವ ಮತ್ತು ನೇರ ಮಾತುಗಳಿಂದ ಮನೆಯಲ್ಲಿ ಸದ್ದು ಮಾಡುತ್ತಿದ್ದಾರೆ. ಪ್ರೇಕ್ಷಕರ ಹೃದಯವನ್ನು ಕೂಡ ಗೆಲ್ಲುತ್ತಿದ್ದಾರೆ. ಇದರ ನಡುವೆ ಇದೀಗ ಈ ಮನೆಯಲ್ಲಿ ತಮ್ಮ ಬದುಕಿನ ಕತೆ ಮತ್ತು ವ್ಯಥೆಯನ್ನು ಕೂಡ ಸದ್ಯ ಕುನಿಕಾ ಸದಾನಂದ್ ಹಂಚಿಕೊಂಡಿದ್ದಾರೆ.
ಸಹ-ಸ್ಪರ್ಧಿಗಳಾದ ಗೌರವ್ ಖನ್ನಾ, ಪ್ರಣಿತ್ ಮೋರ್ ಮತ್ತು ಮೃದುಲ್ ತಿವಾರಿಯ ಜೊತೆ ನಿನ್ನೆ ( ಅಕ್ಟೋಬರ್ 11 ) ಕುನಿಕಾ ಮಾತನಾಡುತ್ತಿದ್ದ ಸಮಯದಲ್ಲಿ ಮೃದುಲ್ ನಿಮ್ಮ ಕೆಟ್ಟ ಅಭ್ಯಾಸದ ಬಗ್ಗೆ ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ತಮ್ಮ ಬದುಕಿನ ಪುಟಗಳನ್ನು ಮೆಲುಕು ಹಾಕಿರುವ ಕುನಿಕಾ ನಾನು ಎಂದಿಗೂ ಡ್ರಗ್ಸ್ ಸೇವಿಸಿಲ್ಲ, ಆದರೆ ಒಂದು ಕಾಲದಲ್ಲಿ ನಾನು ದೊಡ್ಡ ಕುಡುಕಿಯಾಗಿದ್ದೇ ಎಂದು ಹೇಳಿದ್ದಾರೆ.
ಬ್ರೇಕಪ್ ಆದ ನಂತರ ಮಾನಸಿಕವಾಗಿ ನಾನು ಕುಗ್ಗಿ ಹೋಗಿದ್ದೆ. ತುಂಬಾ ದಪ್ಪ ಆಗಿದ್ದೆ. ಡಬ್ಬಿಂಗ್ ಸಮಯದಲ್ಲಿ ನನ್ನನ್ನು ನಾನು ನೋಡಿದಾಗ ಅಯ್ಯೋ ದೇವರೆ ಹೇಗಿದ್ದೇ ಹೇಗಾದೆ ಎಂದು ನನಗೆ ಆಶ್ಚರ್ಯವಾಯ್ತು ಎಂದು ಹೇಳಿರುವ ಕುನಿಕಾ ನೈಟ್ ಕ್ಲಬ್‌ಗಳಿಗೆ ಹೋಗಿ ನಾನು ಎಣ್ಣೆ ಹೊಡೆಯುತ್ತಿದ್ದೆ. ಬೇರೆಯವರ ಹಣದಲ್ಲಿ ಕುಡಿಯಬೇಡ ಎಂದು ನನಗೆ ನನ್ನ ತಂದೆ ಹೇಳುತ್ತಿದ್ದರು ಎಂದು ಹೇಳಿದ್ದಾರೆ.

ಇದೇ ಸಮಯದಲ್ಲಿ ಗೌರವ್ ನಿಮ್ಮ ಸಂಬಂಧಗಳ ಕುರಿತು ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಇಬ್ಬರ ಜೊತೆ ನಾನು ಲಿವ್ ಇನ್ ಸಂಬಂಧದಲ್ಲಿದ್ದೇ.. ನಾಲ್ಕು ಜನರ ಜೊತೆ ರೊಮ್ಯಾಂಟಿಕ್ ಸಂಬಂಧಗಳಿದ್ದವು ಎಂದು ಹೇಳಿರುವ ಕುನಿಕಾ ನನಗೆ ಅಧಿಕೃತವಾಗಿ ಎರಡು ಮದುವೆಗಳಾಗಿವೆ ಎಂದು ಹೇಳಿದ್ದಾರೆ. ಅರವತ್ತು ವರ್ಷ ವಯಸ್ಸಾಗುವರೆಗೆ ಅದರಲ್ಲೇನು ತಪ್ಪಿಲ್ಲ ಎಂದು ಹೇಳಿ ನಕ್ಕಿದ್ದಾರೆ.
ಕುನಿಕಾ ಹೇಳಿದ ಈ ಮಾತುಗಳನ್ನು ಕೇಳಿ ಗೌರವ್.. ಮೃದುಲ್ ಮತ್ತು ಪ್ರಣೀತ್ ಶಾಕ್ ಆಗಿದ್ದಾರೆ. ನಿಮ್ಮಂತಹ ಆತ್ಮವಿಶ್ವಾಸ ನನಗೆ ನನ್ನ ಬದುಕಿನಲ್ಲಿ ಬೇಕು ಎಂದು ಮೃದುಲ್ ಕಾಲೆಳೆದಿದ್ದಾರೆ. ಇದೇ ಸಮಯದಲ್ಲಿ ಚಿತ್ರರಂಗದ ಸ್ಟಾರ್‌ಗಳ ಜೊತೆ ನಿಮಗೆ ಸಂಬಂಧ ಇತ್ತಾ ಎಂದು ಗೌರವ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಕುನಿಕಾ ಇಲ್ಲ ಸ್ಟಾರ್‌ಗಳ ಜೊತೆ ನಾನು ಯಾವತ್ತು ಪ್ರೀತಿಯಲ್ಲಿ ಬೀಳಲಿಲ್ಲ ಯಾಕೆಂದರೆ ಅವರು ತಮ್ಮನ್ನು ತಾವು ತುಂಬಾ ಪ್ರೀತಿಸುತ್ತಾರೆ. ಬೇರೆಯವರನ್ನು ಪ್ರೀತಿಸಲು ಅವರಿಂದ ಸಾಧ್ಯ ಇಲ್ಲ ಎಂದು ಹೇಳಿದ್ದಾರೆ.

ಅಂದ್ಹಾಗೇ ಕುನಿಕಾ ಸದಾನಂದ್ ಅಭಯ್ ಕೊಠಾರಿ ಅವರ ಜೊತೆ ಮದುವೆಯಾಗಿದ್ದರು. ಆದರೆ ಈ ಸಂಬಂಧ ಮುರಿದು ಬಿತ್ತು. ತಮ್ಮ ಮಗನ ಲಾಲನೆ ಪಾಲನೆಯ ಹಕ್ಕು ತಮಗೆ ನೀಡಬೇಕೆಂದು ಕಾನೂನು ಹೋರಾಟವನ್ನು ಕೂಡ ಕುನಿಕಾ ಮಾಡಿದ್ದರು. ಆದರೆ ಈ ಹೋರಾಟದಲ್ಲಿ ಇವರಿಗೆ ಸೋಲಾಗಿತ್ತು.
ಆ ನಂತರ ವಿನಯ್ ಲಾಲ್ ಅವರ ಜೊತೆ ಕುನಿಕಾ ಮದುವೆಯಾದರು. ಈ ಪ್ರೀತಿಯ ಸಂಕೇತವಾಗಿ ಕೂಡ ಇವರಿಗೆ ಅಯಾನ್ ಲಾಲ್ ಎಂಬ ಮಗ ಇದ್ದಾನೆ. ಈ ಸಂಬಂಧವೂ ಕೂಡ ವಿಚ್ಛೇದನದಲ್ಲಿ ಮುಕ್ತಾಯವಾಯ್ತು.
1990 ರ ಸುಮಾರು ಬಾಲಿವುಡ್‌ನ ಪ್ರಖ್ಯಾತ ಗಾಯಕ ಕುಮಾರ್ ಸಾನು ಖ್ಯಾತಿಯ ತುತ್ತ ತುದಿಯಲ್ಲಿದ್ದಾಗ ಕುಮಾರ್ ಸಾನು ಜೊತೆ ಕುಣಿಕಾ ಸಂಬಂಧದಲ್ಲಿದ್ದರು. ಖುದ್ದು ಕುನಿಕಾ ಅವರೇ ಸಿದ್ಧಾರ್ಥ್ ಕಣ್ಣನ್ ಅವರಿಗೆ ಈ ವರ್ಷದ ಜನವರಿಯಲ್ಲಿ ನೀಡಿದ್ದ ಸಂದರ್ಶನದಲ್ಲಿ ಈ ಮಾತು ಹೇಳಿದ್ದರು.


Click it and Unblock the Notifications











