ಕಾಲ್ನಡಿಗೆಯಲ್ಲಿ ಮಂತ್ರಾಲಯಕ್ಕೆ ನಟ ಶ್ರೀನಿವಾಸಮೂರ್ತಿ
ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀನಿವಾಸಮೂರ್ತಿ ಅವರು ಪುಣ್ಯಕ್ಷೇತ್ರ ಮಂತ್ರಾಲಯಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಗುರು ರಾಘವೇಂದ್ರ ವೈಭವ" ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾಗಿನಿಂದಲೂ ಅವರು ಮಂತ್ರಾಲಯ ದರ್ಶನ್ ಮಾಡಲು ನಿರ್ಧರಿಸಿದ್ದರು.
ಶ್ರೀನಿವಾಸಮೂರ್ತಿ ಅವರಿಗೆ ಅವರ ಗೆಳೆಯರು ಸಾಥ್ ನೀಡಿದ್ದಾರೆ. ಬುಧವಾರ (ಅ.20) ಬೆಳಗ್ಗೆ ಬೆಂಗಳೂರಿನಿಂದ ಅವರು ಮಂತ್ರಾಲಯಕ್ಕೆ ಪಾದಯಾತ್ರೆ ಹೊರಟರು. ಅವರ ಅಭಿನಯದ ಭಕ್ತ ಅಂಬರೀಷ್ ನಾಟಕ ಇತ್ತೀಚೆಗೆ ಯಶಸ್ವಿ ಪ್ರದರ್ಶನ ಕಂಡಿತ್ತು.
ಪ್ರತಿದಿನ 40 ಕಿ.ಮೀ. ಗಳಷ್ಟು ದೂರ ಕಾಲ್ನಡಿಗೆಯಲ್ಲಿ ಕ್ರಮಿಸಲಿದ್ದಾರೆ. ಒಟ್ಟು 12 ದಿನಗಳ ಕಾಲ ಅವರ ಪಾದಯಾತ್ರೆ ನಡೆಯಲಿದ್ದು 400 ಕಿ.ಮೀಗಳನ್ನು ತಲುಪುವ ಗುರಿ ಹೊಂದಿದ್ದಾರೆ. ಸೋಮವಾರದಿಂದ ಶುಕ್ರವಾರದವರೆಗೂ ಪ್ರತಿ ರಾತ್ರಿ 10 ಗಂಟೆಗೆ ಕನ್ನಡ ಜನತೆ ಭಯ ಭಕ್ತಿಗಳಿಂದ ಟಿವಿಯ ಮುಂದೆ ಕೂತು ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿರುವ ರಾಯರ ಕಥೆಯನ್ನು ಸವಿಯುತ್ತಿದ್ದಾರೆ. (ಒನ್‌ಇಂಡಿಯಾ ಕನ್ನಡ)
More from Filmibeat
English summary
Kannada films veteran actor Srinivasamurthy has taken up Mantralaya padayatra early morning on Wednesday (Oct 19). He is acting in Guru Raghavendra Vaibhava in Suvarna TV.
ಶ್ರೀನಿವಾಸಮೂರ್ತಿ ಮಂತ್ರಾಲಯ ಸುವರ್ಣ ವಾಹಿನಿ ಧಾರಾವಾಹಿ ಕಿರುತೆರೆ suvarna channel mantralaya small screen srinivasa murthy


Click it and Unblock the Notifications












