ಡಿ.27ರಿಂದ ಪುನೀತ್ 'ರಿಯಾಲಿಟಿ ಶೋ' ಸ್ಟಾರ್ಟ್

ಕನ್ನಡದ ಪವರ್ ಸ್ಟಾರ್ ಪುನೀತ್ ನಡೆಸಿಕೊಡಲಿರುವ ಈ ಕಾರ್ಯಕ್ರಮ ಕನ್ನಡಿಗರಿಗೆ ಸಿಹಿಸಿಹಿ ಸುದ್ದಿ. ಕೌನ್ ಬನೇಗಾ ಕರೋಡ್ ಪತಿಯಲ್ಲಿ ಅವಕಾಶ ವಂಚಿತರಾದವರೂ ಈ ಕಾರ್ಯಕ್ರಮದ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು. ಇದಕ್ಕೆ, ಇದೇ ಡಿಸೆಂಬರ್ 27 ರಿಂದ ರಿಜಿಸ್ಟ್ರೇಷನ್ಸ್ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಕೇವಲ 15 ಪ್ರಶ್ನೆಗಳಿಗೆ ಉತ್ತರ ಕೊಡುವ ಮೂಲಕ ಸಾಮಾನ್ಯ ಜ್ಞಾನ ಹೊಂದಿರುವ ಯಾರು ಬೇಕಾದರೂ ಈ ಶೋನಲ್ಲಿ ಪಾಲ್ಗೊಳ್ಳಬಹುದು. ಶೋ ನಲ್ಲಿ ಭಾಗವಸಹಿಸಲು ಯಾವುದೇ ನಿರ್ಭಂಧವಿಲ್ಲ. ಕರ್ನಾಟಕದ ಯಾವುದೇ ಮೂಲೆಯಿಂದ ಬೇಕಾದರೂ ಬಂದು ಸ್ಪರ್ಧಿಸಬಹುದು, ಕೋಟಿ ರು. ಗೆಲ್ಲಬಹುದು. ನಿಮ್ಮ ಜ್ಞಾನದ ಮೂಲಕ ಕೋಟಿ ರು. ಗಳಿಸಲು ರೆಡಿಯಾಗಿ. 'ನಿಜವಾದ ಜ್ಞಾನವೇ ಸಂಪತ್ತು. ಹಣವೇ ಸರ್ವಸ್ವವಲ್ಲ. ಹಣಕ್ಕೆ ಜ್ಞಾನವೇ ಮೂಲ' ಎಂಬುದು 'ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಶೋ ವೇದವಾಕ್ಯ. ಮುಂದಿನ ಪುಟ ನೋಡಿ...
English summary
Powerstar Puneet Rajkumar hosts a TV Show 'Kannadada Kotyadhipati in Suvarna Channel from this month, Dec. 27 at 8 Pm.
ಸುವರ್ಣ ವಾಹಿನಿ ಪುನೀತ್ ರಾಜ್ ಕುಮಾರ್ ರಿಯಾಲಿಟಿ ಶೋ ಕಿರುತೆರೆ puneeth rajkumar reality show suvarna channel small screen


Click it and Unblock the Notifications