ಸುಸ್ತಾಗಿ ಸೆಟ್ಸ್‌ನಲ್ಲೇ ಕುಸಿದು ಬಿದ್ದ ರಾಖಿ ಸಾವಂತ್
ಬಾಲಿವುಡ್ ತಾರೆ ರಾಖಿ ಸಾವಂತ್ ಬಿಡುವಿಲ್ಲದಂತೆ ಚಿತ್ರೀಕರಣದಲ್ಲಿ ಪಾಲ್ಗೊಂಡ ಕಾರಣ ತಿವ್ರ ಆಯಾಸಗೊಂಡು ಸೆಟ್ಸ್‌ನಲ್ಲೆ ಕುಸಿದು ಬಿದ್ದಿ ಘಟನೆ ನಡೆದಿದೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ದೈಹಿಕ ಮತ್ತು ಮಾನಸಿಕವಾಗಿ ರಾಖಿ ತೀವ್ರ ಬಳಲಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಕಿರುತೆರೆಯ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ರಾಖಿ ಸತತವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸತತ 13 ಗಂಟೆಗಳ ಕಾಲ ರಾಖಿ ಚಿತ್ರೀಕರಣದಲ್ಲಿ ಭಾಗವಹಿಸಿ ಸುಸ್ತಾಗಿ ಸೆಟ್ಸ್‌ನಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದರು. ಸದ್ಯಕ್ಕೆ ಚೇತರಿಸಿಕೊಂಡಿರುವ ಅವರು ಮರಳಿ ಕಾರ್ಯಕ್ರಮ ನಡೆಸಿಕೊಡಲಿದ್ದಾರಂತೆ. ರಾಖಿ ದಿನಕ್ಕೆ ಎರಡು ಕಂತುಗಳನ್ನು ನಡೆಸಿಕೊಡಬೇಕಾಗಿತ್ತು. ಹಾಗಾಗಿ ಅವರು 12 ಗಂಟೆಗಳಿಗೂ ಅಧಿಕ ಸಮಯ ಸೆಟ್ಸ್‌ನಲ್ಲೇ ಕಳೆಯುತ್ತಿದ್ದರು ಎನ್ನುತ್ತಾರೆ ಕಾರ್ಯಕ್ರಮ ನಿರ್ವಾಹಕರು. (ಏಜೆನ್ಸೀಸ್)
More from Filmibeat
English summary
Rakhi Sawant was recently rushed to the emergency ward of a hospital and had to be hospitalised after suffering physical and mental exhaustion shooting for long hours for a television reality theme-based show.


Click it and Unblock the Notifications











