ಜಾಹೀರಾತು ರಹಿತ ಸಿನಿಮಾ ಅದು ಸನ್ ನೆಟ್ವರ್ಕ್ ನಲ್ಲಿ ಮಾತ್ರ

ದಕ್ಷಿಣಭಾರತದ ಟಿವಿ ವಾಹಿನಿಗಳಲ್ಲಿ ಫ್ರಂಟ್ ರನ್ನರ್ ಆಗಿರುವ ಸನ್ ನೆಟ್ ವರ್ಕ್ ಕನ್ನಡದಲ್ಲಿ ಒಟ್ಟು ಆರು ಚಾನಲ್ ಗಳನ್ನು (ಉದಯ ವಾರ್ತೆಗಳು, ಚಿಂಟು ಟಿವಿ, ಉದಯ ಮೂವೀಸ್, ಉದಯ ಟಿವಿ, ಉದಯ ಕಾಮಿಡಿ ಮತ್ತು ಉದಯ ಮ್ಯೂಸಿಕ್) ಹೊಂದಿದೆ.
ಇದಲ್ಲದೆ ಡಿಟಿಎಚ್ (ಡೈರೆಕ್ಟ್ - ಟು-ಹೋಮ್) ಸೇವೆಯಲ್ಲೂ ಮಂಚೂಣಿಯಲ್ಲಿದೆ. ಇದೀಗ ತನ್ನ ಗ್ರಾಹಕರಿಗೆ 'ಸಿನಿಮಾ ಪ್ಲಸ್ ಪ್ಯಾಕ್' ಎಂಬ ಹೊಸ ಕೊಡುಗೆಯನ್ನು ನೀಡುತ್ತಿದೆ.
ದಕ್ಷಿಣ ಭಾರತದ ಪ್ರಮುಖ ಭಾಷೆಗಳಾದ ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ಈ ಸೇವೆ ಆರಂಭವಾಗಿದೆ. ಆಯಾ ಭಾಷಿಗರ ಟಿವಿ ವೀಕ್ಷಕರನ್ನು ತನ್ನದೇ ಆದ ವಿಭಿನ್ನ ಮಾರ್ಗದಲ್ಲಿ ರಂಜಿಸಲು ಸನ್ ನೆಟ್ ವರ್ಕ್ ಸಜ್ಜಾಗಿದೆ.
ಸನ್ ನೆಟ್ ವರ್ಕ್ ತನ್ನ ಆರಂಭಿಕ ಗ್ರಾಹಕರಿಗೆ ರಿಯಾಯತಿ ದರದಲ್ಲಿ ಕೊಡುಗೆ ನೀಡಲು ನಿರ್ಧರಿಸಿದೆ. ಪ್ಯಾಕೇಜ್ ದರ ವಾರ್ಷಿಕ 1,640 ರೂಪಾಯಿಗಳಿಂದ ಆರಂಭವಾಗಲಿದೆ. ಅದಲ್ಲದೆ ಕೇವಲ 26 ರೂಪಾಯಿಗಳಲ್ಲಿ ಚಂದಾದಾರಿಕೆಯನ್ನು ರಿನಿವಲ್ ಮಾಡಿಸಿಕೊಳ್ಳಬಹುದಾಗಿದೆ.
More from Filmibeat
English summary
Sun Direct, the leading direct-to-home (DTH) service provider announced their new Cinema Plus pack, an exclusive regional movie service in 3 south Indian languages – Tamil, Kannada and Telugu


Click it and Unblock the Notifications











