twitter
    For Quick Alerts
    ALLOW NOTIFICATIONS  
    For Daily Alerts

    ಜಾಹೀರಾತು ರಹಿತ ಸಿನಿಮಾ ಅದು ಸನ್ ನೆಟ್ವರ್ಕ್ ನಲ್ಲಿ ಮಾತ್ರ

    By Mahesh
    |

    Sun DTH offers Ad Free Movie Watching
    ಮೂರು ವಿಭಿನ್ನ ಭಾಷೆಗಳಲ್ಲಿ "ಜಾಹೀರಾತು ರಹಿತ" ದಿನದ 24 ಗಂಟೆ ಚಲನಚಿತ್ರ ಸೇವೆಯನ್ನು ಒದಗಿಸುವ ಮೂಲಕ ದೇಶದ ಮೊದಲ ಡಿಟಿಎಚ್ ವಾಹಿನಿ ಎನ್ನುವ ಹೆಗ್ಗಳಿಕೆಗೆ ಸನ್ ನೆಟ್ವರ್ಕ್ ಪಾತ್ರವಾಗಿದೆ.

    ದಕ್ಷಿಣಭಾರತದ ಟಿವಿ ವಾಹಿನಿಗಳಲ್ಲಿ ಫ್ರಂಟ್ ರನ್ನರ್ ಆಗಿರುವ ಸನ್ ನೆಟ್ ವರ್ಕ್ ಕನ್ನಡದಲ್ಲಿ ಒಟ್ಟು ಆರು ಚಾನಲ್ ಗಳನ್ನು (ಉದಯ ವಾರ್ತೆಗಳು, ಚಿಂಟು ಟಿವಿ, ಉದಯ ಮೂವೀಸ್, ಉದಯ ಟಿವಿ, ಉದಯ ಕಾಮಿಡಿ ಮತ್ತು ಉದಯ ಮ್ಯೂಸಿಕ್) ಹೊಂದಿದೆ.

    ಇದಲ್ಲದೆ ಡಿಟಿಎಚ್ (ಡೈರೆಕ್ಟ್ - ಟು-ಹೋಮ್) ಸೇವೆಯಲ್ಲೂ ಮಂಚೂಣಿಯಲ್ಲಿದೆ. ಇದೀಗ ತನ್ನ ಗ್ರಾಹಕರಿಗೆ 'ಸಿನಿಮಾ ಪ್ಲಸ್ ಪ್ಯಾಕ್' ಎಂಬ ಹೊಸ ಕೊಡುಗೆಯನ್ನು ನೀಡುತ್ತಿದೆ.

    ದಕ್ಷಿಣ ಭಾರತದ ಪ್ರಮುಖ ಭಾಷೆಗಳಾದ ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ಈ ಸೇವೆ ಆರಂಭವಾಗಿದೆ. ಆಯಾ ಭಾಷಿಗರ ಟಿವಿ ವೀಕ್ಷಕರನ್ನು ತನ್ನದೇ ಆದ ವಿಭಿನ್ನ ಮಾರ್ಗದಲ್ಲಿ ರಂಜಿಸಲು ಸನ್ ನೆಟ್ ವರ್ಕ್ ಸಜ್ಜಾಗಿದೆ.

    ಸನ್ ನೆಟ್ ವರ್ಕ್ ತನ್ನ ಆರಂಭಿಕ ಗ್ರಾಹಕರಿಗೆ ರಿಯಾಯತಿ ದರದಲ್ಲಿ ಕೊಡುಗೆ ನೀಡಲು ನಿರ್ಧರಿಸಿದೆ. ಪ್ಯಾಕೇಜ್ ದರ ವಾರ್ಷಿಕ 1,640 ರೂಪಾಯಿಗಳಿಂದ ಆರಂಭವಾಗಲಿದೆ. ಅದಲ್ಲದೆ ಕೇವಲ 26 ರೂಪಾಯಿಗಳಲ್ಲಿ ಚಂದಾದಾರಿಕೆಯನ್ನು ರಿನಿವಲ್ ಮಾಡಿಸಿಕೊಳ್ಳಬಹುದಾಗಿದೆ.

    English summary
    Sun Direct, the leading direct-to-home (DTH) service provider announced their new Cinema Plus pack, an exclusive regional movie service in 3 south Indian languages – Tamil, Kannada and Telugu
    Wednesday, July 20, 2011, 10:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X