2024ರ ವರ್ಷವನ್ನು ಹೇಗೆ ಅಮೋಘ ವರ್ಷವನ್ನಾಗಿಸಬಹುದು ಎಂದು ಹೇಳಿಕೊಟ್ಟ ರಮೇಶ್ ಅರವಿಂದ್
ಎವರ್ ಗ್ರೀನ್ ಹೀರೋ ನಟ ರಮೇಶ್ ಅರವಿಂದ್ ಸುಮ್ಮನೆ ಕೂರುವ ವ್ಯಕ್ತಿಯಲ್ಲ. ಏನಾದರೂ ಒಂದು ಕೆಲಸವನ್ನು ಮಾಡುತ್ತಲೇ ಇರುತ್ತಾರೆ.
ಸಿನಿಮಾ ನಿರ್ದೇಶಿಸುವುದು, ಸಿನಿಮಾ ಕಥೆ ಬರೆಯುವುದು. ಬಿಡುವಿದ್ದಾಗ ಮಕ್ಕಳ ಜೊತೆಗೆ ಸಮಯ ಕಳೆಯುವುದು. ಮಕ್ಕಳಿಗೆ ಓದಿನಲ್ಲಿ ಸಹಾಯವನ್ನು ಕೂಡ ರಮೇಶ್ ಅರವಿಂದ್ ಮಾಡುತ್ತಿರುತ್ತಾರೆ.
ರಮೇಶ್ ಅರವಿಂದ್ ಈ ಬಗ್ಗೆ ಸ್ವತಃ ಅವರ ಮಕ್ಕಳೇ ಹಿಂದೊಮ್ಮೆ ಹೇಳಿದ್ದಾರೆ. ಈ ಮೂಲಕ ರಮೇಶ್ ಅವರು ಬೆಸ್ಟ್ ಆಕ್ಟರ್, ಡೈರೆಕ್ಟರ್ ಅಷ್ಟೇ ಅಲ್ಲ ಬೆಸ್ಟ್ ಅಪ್ಪ ಎಂದು ಕೂಡ ಎನಿಸಿಕೊಂಡಿದ್ದಾರೆ.

ಪುಸ್ತಕ ಬರೆದಿರುವ ನಟ
ನಟನೆ, ನಿರ್ದೇಶನಕ್ಕಷ್ಟೇ ಮೀಸಲಿರದ ರಮೇಶ್ ಕಾಲಕ್ಕೆ ತಕ್ಕಂತೆ ಕಿರುತೆರೆ ನಿರೂಪಕರಾದರು. 'ಪ್ರೀತಿಯಿಂದ ರಮೇಶ್', 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಸ್ಟಾರ್ ನಟ-ನಟಿಯರನ್ನು, ಸಾಧಕರನ್ನು ಕರೆಸಿ ಮಾತನಾಡಿಸುವ ರಮೇಶ್, ಎಲ್ಲರ ಮನ ಮುಟ್ಟುವಂತೆ ಮಾತನಾಡುತ್ತಾರೆ. ಅಷ್ಟೇ ಅಲ್ಲದೇ, ಆರ್ಟ್ ಆಫ್ ಸಕ್ಸಸ್ ಎಂಬ ಪುಸ್ತಕ ಬರೆದು ಬಿಡುಗಡೆ ಮಾಡಿದ್ದರು. ಈ ಪುಸ್ತಕದಲ್ಲಿ ಜೀವನದಲ್ಲಿ ಗುರಿ ತಲುಪಲು ಮನುಷ್ಯನಿಗೆ ಏನು ಮುಖ್ಯ. ಸಕ್ಸಸ್‌ಫುಲ್ ವ್ಯಕ್ತಿಗೆ ಯಾವೆಲ್ಲಾ ಚಾಲೆಂಜ್‌ಗಳಿರುತ್ತವೆ. ಅವನ್ನೆಲ್ಲಾ ಹೇಗೆ ಎದುರಿಸಬೇಕು ಎಂದು ಪಾಸಿಟಿವಿಯ ಪುಸ್ತಕವನ್ನು ಬರೆದಿದ್ದಾರೆ.
ರಮೇಶ್ ಸ್ಪೀಕಿಂಗ್
ಇದಷ್ಟೇ ಅಲ್ಲದೇ, ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಹೆಲೋ ರಮೇಶ್ ಸ್ಪೀಕಿಂಗ್ ಎಂಬ ಟ್ಯಾಗ್‌ನೊಂದಿಗೆ ರಮೇಶ್ ಇನ್‌ಸ್ಟಾಗ್ರಾಂನಲ್ಲಿ ಯಾವುದಾದರೂ ಒಂದು ವಿಚಾರದ ಬಗ್ಗೆ ಮಾತನಾಡುತ್ತಿರುತ್ತಾರೆ. ಇತ್ತೀಚೆಗೆ ಸಣ್ಣ ಪುಟ್ಟ ವಿಚಾರಗಳ ಬಗ್ಗೆ ಒಳ್ಳೊಳ್ಳೆಯ ಮಾತುಗಳ ಮೂಲಕ ಯುವಕರಿಗೆ ಕಿವಿ ಮಾತು ಹೇಳುತ್ತಿರುತ್ತಾರೆ.
ಆಸೆ ಧಾರಾವಾಹಿ ನಿರ್ಮಾಣ
ಇನ್ನು ಕಳೆದ ತಿಂಗಳಷ್ಟೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಆಸೆ ಎಂಬ ಧಾರಾವಾಹಿಯನ್ನು ನಿರ್ಮಾಣ ಮಾಡಿದ್ದಾರೆ. ಇದೀಗ 2023ರ ಕೊನೆಯ ದಿನ 2024ರ ಹೊಸ ವರ್ಷವನ್ನು ಹೇಗೆ ಸ್ವಾಗತ ಮಾಡಬಹುದು ಹಾಗೂ ಹೊಸ ವರ್ಷದಲ್ಲಿ ಏನು ಮಾಡಬಹುದು ಎಂಬುದನ್ನು ಜನರಿಗೆ ಬಹಳ ಅದ್ಭುತವಾಗಿ ಹೇಳಿದ್ದಾರೆ.
2024ರ ಸೂತ್ರ ಹೇಳಿಕೊಟ್ಟ ನಟ
ಹಾಯ್.. ಹೊಸ ವರ್ಷದಲ್ಲಿ ಎಲ್ಲರೂ ಏನು ಮಾಡಬೇಕು ಅಂತ ಇದ್ದೀರಾ.? ಮೊದಲು ಮೂರು ತಿಂಗಳು ಏನು ಮಾಡುತ್ತೀರಾ.? ಏಪ್ರಿಲ್, ಮೇ, ಜೂನ್‌ನಲ್ಲಿ ನಿಮ್ಮ ಐಡಿಯಾ ಏನು..? ಥರ್ಡ್ ಕ್ವಾಟರ್‌ನಲ್ಲಿ ಏನ್ ಪ್ಲಾನ್ ಮಾಡಿಕೊಂಡಿದ್ದೀರಾ..? ಕೊನೆಯ ಮೂರು ತಿಂಗಳು ಏನ್ ಮಾಡ್ಬೇಕು ಅನ್ನೋದು ನಿಮ್ಮ ಕನಸು ಎಂದು ಕೇಳಿದ್ದಾರೆ. ಪ್ರಶ್ನೆ ಕೇಳಿರುವ ರಮೇಶ್ ತಾವೇ ಉತ್ತರವನ್ನೂ ಕೂಡ ನೀಡಿದ್ದಾರೆ. ಅದೆಲ್ಲಾ ಬಿಡಿ.. ಜನವರಿ ಒಂದನೇ ತಾರೀಖು ಜನವರಿ ಒಂದನೇ ತಾರೀಕು ಒಂದೇ ಒಂದು ದಿನ ಮಾಡುವಂತಹ ಎಲ್ಲಾ ಕೆಲಸಗಳನ್ನು ಅತ್ಯುತ್ತಮವಾಗಿ, ಇನ್ವಾಲ್ಡ್ ಆಗಿ, ಹ್ಯಾಪಿಯಾಗಿ, ಒಂದೇ ಒಂದು ದಿನ ಕಂಪ್ಲೀಟ್ ಮಾಡಿ. ಅದನ್ನೇ ಎರಡನೇ ತಾರೀಖು ಮಾಡಿ, ಅದನ್ನೇ ಮೂರನೇ ತಾರೀಖು ಮಾಡಿ. ಹಾಗೇ ಪ್ರತಿ ದಿನ ಮಾಡಿ ಆಗ ನೋಡಿ ಎಷ್ಟು ಅಮೋಘವಾಗಿರುತ್ತೆ 2024 ಅಂತ.. ಇಟ್ ವಿಲ್ ಬಿದಿ ಬೆಸ್ಟ್ ಇಯರ್ ಅಂತ ಹೇಳಿ ಎಲ್ಲರಿಗೂ ಹೊಸ ವರ್ಷಕ್ಕೆ ರೆಸಲ್ಯೂಷನ್ ಹೇಗಿದ್ದರೆ? ಚೆಂದ ಎಂಬುದನ್ನು ಹೇಳಿದ್ದಾರೆ.


Click it and Unblock the Notifications











