ಪುಸ್ತಕ ಹಿಡಿದು ಫೋಟೋಗೆ ಪೋಸ್ ನೀಡಿದ ಮೇಘಾ ಶೆಟ್ಟಿ: ಈ ನಟಿಯ ಕೈಯಲ್ಲಿರೋ ಸಿನಿಮಾಗಳೆಷ್ಟು?

By ಪೂರ್ವ

ಮೇಘಾ ಶೆಟ್ಟಿ ಅಂದ ಕೂಡಲೇ ಮೊದಲು ನೆನಪಾಗುವುದೇ ಅನು ಸಿರಿಮನೆ ಎಂಬ ಹೆಸರು. ಕಿರುತೆರೆಯ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ ಹಲವು ನಟಿಯರಲ್ಲಿ ಮೇಘಾ ಶೆಟ್ಟಿ ಕೂಡ ಒಬ್ಬರು. ಮುದ್ದು ಮುದ್ದಾಗಿ ಕಾಣಿಸುವ ನಟಿಯನ್ನು ನೋಡುವುದೇ ಒಂದು ರೀತಿಯ ಚಂದ. ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿರುವ ಈ ನಟಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

'ಜೊತೆ ಜೊತೆಯಲಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ಮೇಘಾ ಶೆಟ್ಟಿಗೆ ಸಿನಿಮಾಗಳಲ್ಲಿಯೂ ಆಫರ್‌ಗಳು ಬರತೊಡಗಿದವು. ಈ ಧಾರಾವಾಹಿ ಮುಗಿದ ಬಳಿಕ ಕಿರುತೆರೆಗೆ ಬ್ರೇಕ್ ಕೊಟ್ಟಿ ಸಿನಿಮಾರಂಗದಲ್ಲಿಯೇ ಹೆಚ್ಚಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

2025 Kannada actress Megha Shetty 3 films may release here is the list

ಮೇಘಾ ಶೆಟ್ಟಿ ಕಿರುತೆರೆಯಲ್ಲಿ ಪಡೆದ ಜನಪ್ರಿಯತೆ ಸಿನಿಮಾದಲ್ಲೂ ವರ್ಕ್ಔಟ್ ಆಗುತ್ತಿದೆ. ಹೀಗಾಗಿ ಹೆಚ್ಚಾಗಿ ಸಿನಿಮಾ ಪ್ರಾಜೆಕ್ಟ್‌ಗಳ ಬಗ್ಗೆ ಗಮನ ಹರಿಸಿದ್ದಾರೆ. ಫಿಟ್ನೆಸ್, ಲುಕ್ ಟೆಸ್ಟ್, ಫೋಟೋಶೂಟ್ ಅಂತ ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ತಮ್ಮ ಅಭಿಮಾನಿಗಳಿಗೆ ಲೆಟೆಸ್ಟ್ ಲುಕ್‌ ಅನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮೇಘಾ ಶೆಟ್ಟಿ ಎರಡು ಹೊಸ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಬಂಡೆ ಮೇಲೆ ಕುಳಿತು ಪುಸ್ತಕ ಹಿಡಿದು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೊಗಳಿಗೆ ಅವರ ಬೆಂಬಲಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚೂಡಿದಾರ ತೊಟ್ಟು, ಕೂದಲು ಫ್ರೀಯಾಗಿ ಬಿಟ್ಟು ಪಕ್ಕಾ ದೇಸಿ ಹುಡುಗಿ ಲುಕ್‌ ಹುಡುಗರ ಹೃದಯಕ್ಕೆ ಹೂವಿನಂತಾಗಿದೆ.

ಮೇಘಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳುವುದು ಹೊಸ ವಿಷಯವೇನಲ್ಲ. ಆದರೆ, ಕೆಲವು ಫೋಟೊ ಹಾಗೂ ವಿಡಿಯೋಗಳು ಅವರ ಅಭಿಮಾನಿಗಳಿಗೆ ಹಿಡಿಸಿಬಿಡುತ್ತೆ. ಈಗ ಟ್ರೆಡಿಷನಲ್‌ ಲುಕ್‌ನಲ್ಲಿ ಮೇಘಾ ಶೆಟ್ಟಿ ಫೋಟೋಗಳಿಗೆ ಲುಕ್ ಕೊಟ್ಟಿದ್ದು ಬಹಳಷ್ಟು ಮಂದಿಗೆ ಖುಷಿ ಕೊಟ್ಟಿದೆ. ಅದಕ್ಕೆ ಕಾಮೆಂಟ್‌ಗಳನ್ನು ಮಾಡುತ್ತಲೇ ಇದ್ದಾರೆ.

ಮೇಘಾ ಶೆಟ್ಟಿ ಮಾಡರ್ನ್ ಲುಕ್‌ನಲ್ಲೂ ಮಿಂಚಿದ್ದಾರೆ. ಹಾಗೇ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಎರಡೂ ಲುಕ್‌ನಲ್ಲೂ ಹೊಂದಿಕೆಯಾಗುವಂತಹ ನಟಿ. ಹೀಗಾಗಿ ಮೇಘಾ ಶೆಟ್ಟಿಗೆ ಸಿನಿಮಾ ಆಫರ್‌ಗಳು ಬರುತ್ತಿವೆ. ಅಲ್ಲದೆ ಕಿರುತೆರೆಯಲ್ಲಿ ಹೆಚ್ಚು ಜನಪ್ರಿಯರಾಗಿರುವ ಮೇಘಾ ಶೆಟ್ಟಿಯನ್ನು ಬೆಳ್ಳಿ ಪರದೆ ಮೇಲೆ ನೋಡುವುದಕ್ಕೆ ಜನರು ಬರುತ್ತಾರೆಂಬ ನಂಬಿಕೆ ಫಿಲ್ಮ್ ಮೇಕರ್‌ಗಳದ್ದು. ಸದ್ಯ ಮೇಘಾ ಶೆಟ್ಟಿ ಕೈಯಲ್ಲಿ ಮೂರು ಸಿನಿಮಾಗಳು ಇವೆ.

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ 'ತ್ರಿಬಲ್ ರೈಡಿಂಗ್'ನಲ್ಲಿ ಮೇಘಾ ಶೆಟ್ಟಿ ನಟಿಸಿದ್ದರು. ಇಲ್ಲಿಂದ ಸಿನಿಮಾ ಜರ್ನಿ ಆರಂಭ ಆಗಿತ್ತು. ಬಳಿಕ ಡಾರ್ಲಿಂಗ್ ಕೃಷ್ಣ ನಟನೆಯ 'ದಿಲ್ ಪಸಂದ್', ಧನ್ವೀರ್ ಸಿನಿಮಾ 'ಕೈವ'ಗೂ ಮೇಘಾ ಶೆಟ್ಟಿ ನಾಯಕಿಯಾಗಿದ್ದರು. ಇಲ್ಲಿಂದ ಮೇಘಾ ಸಿನಿ ಜರ್ನಿ ಯಶಸ್ವಿಯಾಗಿ ಮುಂದುವರೆದಿದೆ.

ಮೇಘಾ ಶೆಟ್ಟಿ ಕೈಯಲ್ಲೀಗ ಮೂರು ಸಿನಿಮಾಗಳಿವೆ. ವಿನಯ್ ರಾಜ್‌ಕುಮಾರ್ ಅಭಿನಯದ 'ಗ್ರಾಮಾಯಣ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ 'ಆಫ್ಟರ್ ಆಪರೇಷನ್ ಲಂಡನ್ ಕೆಫೆ' ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಆ ಸಿನಿಮಾ ಕನ್ನಡ ಹಾಗೂ ಮರಾಠಿ ಎರಡು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಹಾಗೇ 'ಚೀತಾ' ಅನ್ನೋ ಸಿನಿಮಾದಲ್ಲಿಯೂ ಮೇಘಾ ಶೆಟ್ಟಿ ನಟಿಸುತ್ತಿದ್ದಾರೆ.

ಮೇಘಾ ಶೆಟ್ಟಿಯ ನಟನೆಯ ಮೂರು ಸಿನಿಮಾಗಳು 2025ಕ್ಕೆ ರಿಲೀಸ್ ಆಗುವ ಸಾಧ್ಯತೆಯಿದೆ. ಇನ್ನೂ ಕೆಲವು ನಿರ್ಮಾಣ ಸಂಸ್ಥೆಯಿಂದ ಆಫರ್ ಬಂದಿದೆ ಎನ್ನಲಾಗಿದೆ. ಶೂಟಿಂಗ್‌ನಿಂದ ಫ್ರೀಯಾಗಿದ್ದಾಗ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ಇದರಲ್ಲಿ ಮೇಘಾ ಶೆಟ್ಟಿಯ ಪ್ರತಿಯೊಂದು ಹೆಜ್ಜೆಯನ್ನು ಫಾಲೋ ಮಾಡುತ್ತಿದ್ದಾರೆ. ಇವರಿಗೆ ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 1.2 ಮಿಲಿಯನ್ ಫಾಲೋವರ್ಸ್ ಇದ್ದಾರೆ.

More from Filmibeat

English summary
In 2025 Kannada actress Megha Shetty 3 films may release here is the list
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X