twitter
    For Quick Alerts
    ALLOW NOTIFICATIONS  
    For Daily Alerts

    ರೆಡ್ಡಿಗಳಿಗೆ ಬಿಳಿಯಾನೆಯಾದ ಜನಶ್ರೀ ಚಾನಲ್

    By Rajendra
    |

    Janashree TV become white elephant
    ಬಳ್ಳಾರಿ ರೆಡ್ಡಿ ಸಹೋದರರಿಗೆ ಮಾಧ್ಯಮ ಕ್ಷೇತ್ರ ಗಣಿಗಾರಿಕೆಯಷ್ಟು ಸಲೀಸಲ್ಲ ಎಂಬ ಸಂಗತಿ ತಡವಾಗಿಯಾರೂ ಗೊತ್ತಾಗಿದೆ. ಜನಶ್ರೀ 24/7 ಟಿವಿ ವಾಹಿನಿ ಆರಂಭವಾಗಿ ಹೆಚ್ಚುಕಡಿಮೆ ಒಂದು ವರ್ಷ ಕಳೆಯುವಷ್ಟರಲ್ಲೆ ಮಾಧ್ಯಮ ಸಹವಾಸ ಸಾಕಪ್ಪಾ ಸಾಕು ಅನ್ನಿಸಿದೆ. ಜನಶ್ರೀ ವಾಹಿನಿ ಅವರ ಪಾಲಿಗೆ ಬಿಳಿಯಾನೆ.

    ಜನಶ್ರೀ ವಾಹಿನಿಯ ಉನ್ನತ ಮೂಲಗಳ ಪ್ರಕಾರ, ಗುಜರಾತ್ ಮೂಲದ ಎಂಟರ್‌ಟೈನ್‌ಮೆಂಟ್ ಹಾಗೂ ಮೀಡಿಯಾ ಕಂಪನಿ ಜೊತೆ ಜನಶ್ರೀಯನ್ನು ಶೇ.60ರ ಪಾಲುದಾರಿಕೆಯಲ್ಲಿ ವಿಲೀನಗೊಳಿಸಲು ಮುಂದಾಗಿದ್ದಾರೆ. ಚಾನಲ್ ನಿರ್ವಹಣೆ ತೀರಾ ದುಸ್ತರವಾಗಿದೆಯಂತೆ.

    ಸದ್ಯಕ್ಕೆ ಜನಶ್ರೀ ವಾಹಿನಿಯಿಂದ ರೆಡ್ಡಿ ಸಹೋದರರಿಗೆ ನಯಾ ಪೈಸೆ ಲಾಭವಿಲ್ಲ. ತಿಂಗಳಿಗೆ ಏನಿಲ್ಲಾ ಎಂದರೂ ಹೆಚ್ಚು ಕಡಿಮೆ ರು.3 ಕೋಟಿ ಜನಶ್ರೀ ಮೇಲೆ ಸುರಿಯಬೇಕಾಗಿದೆ. ಇನ್ನೂ ನಾಲ್ಕು ವರ್ಷ ಇದೇ ಹುಮ್ಮಸ್ಸಿನಲ್ಲಿ ಚಾನಲನ್ನು ಮುನ್ನಡೆಸಿದರೆ ಆಗ ಲಾಭ ನಿರೀಕ್ಷಿಸಬಹುದು.

    ಅಲ್ಲಿಯವರೆಗೂ ಜನಶ್ರೀ ವಾಹಿನಿಯನ್ನು ನಿಭಾಯಿಸುವುದು ಹೇಗೆ? ಅಷ್ಟು ತಾಳ್ಮೆ, ಸಹನೆ ರೆಡ್ಡಿ ಬ್ರದರ್ಸ್‌ಗೆ ಸದ್ಯಕ್ಕೆ ಇಲ್ಲ ಎನ್ನುತ್ತವೆ ಮೂಲಗಳು. ಒಂದು ಕಡೆ ಅದಿರು ರಫ್ತು ನಿಷೇಧ ಇನ್ನೊಂದು ಕಡೆ ಜನಶ್ರೀ ವಾಹಿನಿ ಕೈ ಕಚ್ಚುತ್ತಿರುವುದು ರೆಡ್ಡಿ ಬ್ರದರ್ಸ್‌ಗೆ ಪೀಕಲಾಟ ತಂದಿದೆ. ಜನಶ್ರೀ ವಿಲೀನದಿಂದ ಬಂದಷ್ಟು ಬರಲಿ ಎಂಬ ಲೆಕ್ಕಾಚಾರದಲ್ಲಿ ರೆಡ್ಡಿ ಬ್ರದರ್ಸ್ ಇದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

    English summary
    Is Janashree 24/7 TV channel becomes a white elephaat for Bellary Reddy brothers? If sources to be belived they are planning an exit from their media venture by offloading their stakes in the 24/7 Kannada news channel, Janashree TV. A Gujarat-based entertainment and media company has emerged as the frontrunner," a top executive of Janashree TV said.
    Tuesday, June 21, 2011, 17:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X