ಜೀ ಕನ್ನಡದಲ್ಲಿ ಶಿವರಾತ್ರಿ ಸ್ಪೆಷಲ್ ವಿಶಿಷ್ಟ ಭರತನಾಟ್ಯ

ನೃತ್ಯ ಕಲಾವಿದೆಯರಾದ ಶೋಭಾ ಎಂ ಲೋಕನಾಥ್, ರಮ್ಯಾ ವೆಂಕಟೇಶ್, ದಿವ್ಯಾ ರಘುರಾಮ್ ಹಾಗೂ ಲತಾ ಎಸ್ ರಾವ್ ಅವರು ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ. ಜೊತೆಗೆ ಇವರು ಯಾರಿಗುಂಟು ಯಾರಿಗಿಲ್ಲ ವಿನೋದ ಕಾರ್ಯಕ್ರಮಗಳಲ್ಲೂ ಭಾಗವಹಿಸಲಿದ್ದಾರೆ.ನಟರಾಜನ ಪ್ರತಿಮೆ ಎದುರು ನಡೆಯುವ ಈ
ನೃತ್ಯ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡಲಿದೆ.
ಇಂದು ರಾತ್ರಿ 9ರಿಂದ 10ಗಂಟೆ ತನಕ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಕುಂಟಬಿಲ್ಲೆ, ಲಗೋರಿ ಸೇರಿದಂತೆ ಇನ್ನಿತರೆ ಗ್ರಾಮೀಣ ಆಟಗಳನ್ನು ಈ ಬಾರಿಯ ಶೋನಲ್ಲಿ ಸೇರಿಸಿಕೊಳ್ಳಲಾಗಿದೆ. ಸೋಮವಾರದಿಂದ ಬುಧವಾರದವರೆಗೆ ವಾರಕ್ಕೆ ಮೂರು ದಿನ ಯಾರಿಗುಂಟು ಯಾರಿಗಿಲ್ಲ ಗೇಮ್ ಶೋ ರಂಜಿಸಲಿದೆ. (ಒನ್‌ಇಂಡಿಯಾ ಕನ್ನಡ)
More from Filmibeat
English summary
Zee Kannada celebrating Maha Shivaratri on his popular game show Yaarigungu Yaarigilla on 21st Feb at 9 to 10 pm IST. This is a popular woman based game show. Participants are between the age group of 18 and 35.


Click it and Unblock the Notifications











