For Quick Alerts
  ALLOW NOTIFICATIONS  
  For Daily Alerts

  ಪ್ರಪ್ರಥಮ ಬಾರಿಗೆ ಕಿರುತೆರೆಯಲ್ಲಿ ಮತ್ತೊಂದ್ ಮದುವೆನಾ!

  By Rajendra
  |
  ಇದೇ ಮೊದಲ ಬಾರಿಗೆ ಯಶಸ್ವಿ ನಿರ್ದೇಶಕ ಎಂದೇ ಗುರುತಿಸಿಕೊಂಡಿರುವ ದಿನೇಶ್ ಬಾಬು ಅವರ 'ಮತ್ತೊಂದ್ ಮದುವೆನಾ!' ಹಾಸ್ಯ ಪ್ರಧಾನ ಚಿತ್ರ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಇಂದು ಶನಿವಾರ (ಜ.21) ಸಂಜೆ 4.30ಕ್ಕೆ ಮನೆಮಂದಿಯಲ್ಲಾ ಕುಳಿತು ಸುವರ್ಣ ವಾಹಿನಿಯಲ್ಲಿ ಸಿನಿಮಾ ನೋಡಿ ಆನಂದಿಸಬಹುದು.

  'ಎರಡನೇ ಮದುವೆ' ಚಿತ್ರದ ಮುಂದುವರಿದ ಭಾಗವೇ ಈ ಚಿತ್ರ. ಮಾಳವಿಕಾ ತನ್ನ ಬಾಯ್‌ಫ್ರೆಂಡ್ ವಿವೇಕ್‌ನನ್ನು ಮದುವೆಯಾಗುತ್ತಾರೆ. ಮಾಳವಿಕಾ ತಾಯಿಗೆ ಈ ಮದುವೆ ಸುತಾರಾಂ ಇಷ್ಟವಿರಲ್ಲ. ಹೊಸದಾಗಿ ಮದುವೆಯಾದ ದಂಪತಿಗಳ ಮಧ್ಯೆ ಮೂಗು ತೂರಿಸಿ ಅವರಿಗೆ ತೊಂದರೆ ಕೊಡಲು ಪ್ರಾರಂಭಿಸುತ್ತಾರೆ. ಹಾಸ್ಯ ಧಾಟಿಯಲ್ಲಿ ಚಿತ್ರ ಕುತೂಹಲಭರಿತವಾಗಿ ಸಾಗುತ್ತದೆ.

  ಅನಂತನಾಗ್, ಸುಹಾಸಿನಿ, ನವೀನ್ ಕೃಷ್ಣ, ಪ್ರಿಯಾಂಕಾ, ತಾರಾ, ರಾಜು ತಾಳಿಕೋಟೆ ಅವರ ಅಭಿನಯದ ಮೋಡಿ ಚಿತ್ರದಲ್ಲಿದೆ. ಇದೊಂದು ಫುಲ್ ಎಂಟರ್ಟೈನರ್ ಸಿನಿಮಾ. ಒಂದು ವೇಳೆ ಶನಿವಾರ ಮಿಸ್ ಆದರೆ ಭಾನುವಾರ (ಜ.22) ಮಧ್ಯಾಹ್ನ 1 ಗಂಟೆಗೆ ಈ ಮತ್ತೊಮ್ಮೆ ಈ ಸಿನಿಮಾವನ್ನು ಸವಿಯಬಹುದು. (ಒನ್‍ಇಂಡಿಯಾ ಕನ್ನಡ)

  English summary
  Dinesh Baboo directed Kannda movie Mathondu Maduvena is playing on Saturday (Jan 21) and Sunday (Jan 22) at 4.30 pm and 1 pm IST respectively on Asianet Suvarna Channel. The movie is a sequel to Eradane Maduve. Malavika gets married to her boyfriend Vivek. Malavika's mother interferes and the couple starts having problems.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X