ಕಿರುತೆರೆ ನಟಿ ವೇಶ್ಯಾವಾಟಿಕೆ ಜಾಲದಲ್ಲಿ ಪತ್ತೆ

ಶನಿವಾರ ಹಾಗೂ ಭಾನುವಾರ ಪುಣೆಯಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದರು. ಈ ಸಮಯದಲ್ಲಿ ಸಿಕ್ಕಿ ಬಿದ್ದ ಆರೋಪಿಗಳನ್ನು ಪಟ್ಟಿ ಮಾಡುವಾಗ ಕಸೌತಿ ಜಿಂದಗಿ ಕಿ ಸೀರಿಯಲ್ ನ ನಟಿ ಕೂಡಾ ಕಣ್ಣಿಗೆ ಬಿದ್ದಳು.
ಲಮ್ಹೆ ಎಂಬ ಹಿಂದಿ ಚಿತ್ರದಲ್ಲೂ ಈಕೆ ನಡೆಸಿದ್ದಾಳೆ. ಆರೋಪಿ ನಟಿಯ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ, ಆದರೆ, ಆಕೆ ಜನಪ್ರಿಯ ಧಾರಾವಾಹಿಯಲ್ಲಿ ನಟಿಸಿರುವುದನ್ನು ಸ್ಪಷ್ಟಪಡಿಸಿದ್ದಾರೆ.
ಪುಣೆ ರೈಲ್ವೇ ಸ್ಟೇಷನ್ ಬಳಿ ಗ್ರಾಹಕರ ಸೋಗಿನಲ್ಲಿ ದಳ್ಳಾಳಿಯನ್ನು ಸಂಪರ್ಕಿಸಿದ ಪೊಲೀಸರು, ವೇಶ್ಯಾವಾಟಿಕೆ ನಡೆಯುತ್ತಿದ್ದ ಮನೆ ಪ್ರವೇಶಿಸಿದ್ದಾರೆ. ಮನೆಯಲ್ಲಿ ಜಮ್ಮು ಕಾಶ್ಮೀರ ಮೂಲದ ಈ ನಟಿ ಹಾಗೂ ಮತ್ತೊಬ್ಬ ಪುರುಷ ಇದ್ದರೂ ಎನ್ನಲಾಗಿದೆ.
ಮುಂಬೈನಲ್ಲಿ ನಡೆದಿರುವ ವೇಶ್ಯಾವಾಟಿಕೆ ಜಾಲಕ್ಕೂ ಈ ನಟಿಗೂ ಭಾರಿ ಕನೆಕ್ಷನ್ ಇದ್ದು, ಪುಣೆಯಲ್ಲಿ ಗಂಟೆಗೆ 1.5 ಲಕ್ಷ ರೂ ಚಾರ್ಜ್ ಮಾಡುತ್ತಾಳೆ ಎನ್ನಲಾಗಿದೆ. ಸದ್ಯಕ್ಕೆ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಪೊಲೀಸರು ಇನ್ನೂ ಆರೋಪಿಗಳ ವಿವರಗಳನ್ನು ಬಹಿರಂಗಪಡಿಸಬೇಕಿದೆ.


Click it and Unblock the Notifications











