ಜೀ ಕನ್ನಡದಲ್ಲಿ 'ನಗೆಪಾಕ' ಸಿಹಿಕಹಿ ಮಾತುಕತೆ

Sihikahi Chandru
ಜೀ ಕನ್ನಡ ವಾಹಿನಿಯು ತನ್ನ ಕಾರ್ಯಕ್ರಮಗಳ ಬಗ್ಗೆ ವೀಕ್ಷಕರೊಂದಿಗೆ ನೇರ ಚರ್ಚೆ ಏರ್ಪಡಿಸುತ್ತ ಬಂದಿದೆ. ರಾಯಚೂರಿನಲ್ಲಿ ಅಕ್ಟೋಬರ್ 30 ರಂದು ನಡೆದ ಅಂತಹ ಒಂದು ಕಾರ್ಯಕ್ರಮ ಸಿಹಿಕಹಿ ಮಾತುಕತೆ ಇದೇ ನವೆಂಬರ್ 21, 22 ಮತ್ತು 23 ರಂದು ರಾತ್ರಿ 9 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.

ಜೀ ಕನ್ನಡ ವಾಹಿನಿಯ ಹಾಸ್ಯ ಧಾರಾವಾಹಿ ಪಾಂಡುರಂಗ ವಿಠಲ ಕಲಾವಿದರಾದ ಜಹಾಂಗೀರ್, ಅಪೇಕ್ಷಾ ಘಳಿಗಿ, ಮೇಘಶ್ರೀ ಭಾಗವತರ್, ಸುಜಯ್ ಶಾಸ್ತ್ರಿ, ಶ್ರೀಲಕ್ಷ್ಮಿ, ಸತೀಶ್, ಹಿರಿಯ ಕಲಾವಿದೆ ಬಿ.ಜಯಮ್ಮ, ಹಾಗೆಯೇ ಪಾರ್ವತಿ ಪರಮೇಶ್ವರ ಕಲಾವಿದರಾದ ಗಾನಶ್ರೀ, ರವಿತೇಜ, ಜಯಶೀಲಾ, ಸುಬ್ಬ ಬಸವರಾಜ್ ಮತ್ತಿತರರು ನಡೆಸಿಕೊಟ್ಟ ನರ್ತನ, ಮ್ಯಾಡ್ ಆಡ್ಸ್, ಫ್ಯಾಷನ್ ಷೋ ಇತ್ಯಾದಿ ಹಾಸ್ಯಭರಿತ ಕಾರ್ಯಕ್ರಮ ಸಿಹಿಕಹಿ ಮಾತುಕತೆಯಲ್ಲಿದೆ.

ಸಾಹಿತಿ ಎಂ.ಎಸ್.ನರಸಿಂಹಮೂರ್ತಿ ಅವರ ಹಾಸ್ಯಚಟಾಕಿಗಳಿವೆ. ಸುಬ್ಬು ಮತ್ತು ವೇದಾ ಸ್ಪೆಷಲ್ ಡ್ಯಾನ್ಸ್ 'ಕುಳ್ಳನ ರಾಣಿ ಬಾರೇ...' ಸಖತ್ತಾಗಿದೆ. 75ರ ಹರೆಯದ ಬಿ.ಜಯಮ್ಮ ಹೆಜ್ಜೆ ಹಾಕಿದ 'ಜೋಕೆ ನಾನು ಬಳ್ಳಿಯ ಮಿಂಚು', ವೀಕ್ಷಿಸಿ ಅನೇಕರು ಯೌವನದ ಬಿಸಿ ನೆನಪಿಗೆ ಜಾರಬಹುದು. ವೀಕ್ಷಕರು ಮೊನಚಾದ ಪ್ರಶ್ನೆಗಳೊಂದಿಗೆ ಚಂದ್ರು ಮತ್ತು ತಂಡದವರನ್ನು ಗೋಳು ಹುಯ್ದುಕೊಂಡಿದ್ದನ್ನು ನೋಡಿ ಆನಂದಿಸಬಹುದು.

ರಾಯಚೂರಿನಲ್ಲಿ ನಡೆದ, ವಾಹಿನಿಯ ಮೊಟ್ಟಮೊದಲ ಕಾರ್ಯಕ್ರಮ ಇದಾಗಿದ್ದು ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಪ್ರೇಕ್ಷಕರು ತುಂಬಿ ತುಳುಕಿದ್ದರು. ಇಂದು, ನಾಳೆ ಮತ್ತು ನಾಳಿದ್ದು ರಾತ್ರಿ 9 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಸ್ವತಃ ನೋಡಿ; ನಕ್ಕು ಹಗುರಾಗಿ. (ಒನ್ ಇಂಡಿಯಾ ಕನ್ನಡ)

More from Filmibeat

English summary
There is Programme in Zee kannada, Nagepaaka by Sihikahi Chandru on 21, 22, and 23rd night at 9 PM.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X