ರಾಧಿಕಾ ಕರೆಯುವ ಕುಮಾರಸ್ಟಾಮಿ ಹೆಸರೇನು? ಓದಿ...
"ನನ್ನ ಮುಖ ನೋಡಿದರೆ ನಿಮಗೆ ಬೇಸರದಿಂದ ಇದ್ದಂತೆ ಕಾಣುತ್ತದೆಯೇ? ಇಲ್ಲ ತಾನೇ, ಹಾಗಾದರೆ ಬೇಸರದ ಮಾತೆಲ್ಲಿಂದ ಬಂತು? ನಾನು ಮೊದಲೇ ಹೇಳಿದಂತೆ ನಮ್ಮಿಬ್ಬರ ಹಣೆಬರಹದ ಪ್ರಕಾರ ಮದುವೆಯಾಗಿದ್ದೇವೆ. ಸಾಮಾನ್ಯವಾಗಿ ನಾವಿಬ್ಬರೂ ಮನೆಯಲ್ಲಿ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ಏಕೆಂದರೆ ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ.
ಹೆಚ್ಚಾಗಿ ನಾನು ಸಿನಮಾ ಬಗ್ಗೆ ಮಾತನಾಡುತ್ತೇನೆ. ನಾನು ನೋಡಿದ ತಮಿಳು, ತೆಲುಗು, ಹಿಂದಿ ಸಿನಿಮಾಗಳ ಬಗ್ಗೆ ಅವರಿಗೆ ವಿವರ ನೀಡುತ್ತೇನೆ. ಅವರಿಗೂ ಚಿತ್ರರಂಗದ ಬಗ್ಗೆ ಆಸಕ್ತಿ ಇದೆ. ನಾನು ಎಂದೂ ಅವರನ್ನು ಹೆಸರು ಕರೆದು ಮಾತನಾಡಿಸಿಲ್ಲ. ಮನೆಯಲ್ಲಿ ರೀ ಎಂದೇ ಕರೆಯುತ್ತೇನೆ. ದೊಡ್ಡವರ ಪ್ರಕಾರ ಹೆಂಡತಿಯಾದವಳು ಗಂಡನ ಹೆಸರು ಹೇಳಬಾರದಂತೆ. ಹೀಗಾಗಿ ನಾನು ಎಂದೂ ಅವರ ಹೆಸರು ಹೇಳಿಲ್ಲ.
ನಾವಿಬ್ಬರೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ ಎಂದು ಎಲ್ಲರೂ ಕೇಳುತ್ತಾರೆ. ಆದರೆ ಅಂಥ ಅವಕಾಶ ನಮಗೆ ಇದುವರೆಗೆ ಬಂದಿಲ್ಲ. ಸಂದರ್ಭ ಬಂದಾಗ ಖಂಡಿತ ಒಟ್ಟಗೆ ಕಾಣಿಸಿಕೊಳ್ಳುತ್ತೇವೆ. ಮಾತ್ರವಲ್ಲ, ಅವರು ಒಪ್ಪಿದರೆ ನಿಮ್ಮ ವಾಹಿನಿಯ ಸ್ಟುಡಿಯೋಗೂ ಬಂದು ಸಂದರ್ಶನ ನೀಡುತ್ತೇವೆ" ಎಂದು ತಿಳಿಸಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











