ಕೋಟಿಗಟ್ಟಲೆ ಬಾಚಿದ ಕೌನ್ ಬನೇಗಾ ಕರೋಡ್‌ಪತಿ
ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿರುವ ಕೌನ್ ಬನೇಗಾ ಕರೋಡ್‌ಪತಿ ಸೀಸನ್ 5 ಟಿಆರ್‌ಪಿ (ಟೆಲಿವಿಷನ್ ರೇಟಿಂಗ್ ಪಾಯಿಂಟ್) ರೇಟಿಂಗ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಆಗಸ್ಟ್ 15, 2011ರ ಕಾರ್ಯಕ್ರಮದ ಆರಂಭದ ದಿನ 5.24 ಟಿಆರ್‌ಪಿಯನ್ನು ದಾಖಲಿಸಿದೆ.
ಈ ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಈ ಬಾರಿಯ ಕೆಬಿಸಿ ಸಿಕ್ಕಾಪಟ್ಟೆ ಹಿಟ್ ಕಾರ್ಯಕ್ರಮ ಎನ್ನಬಹುದು. ಸೋಮವಾರದಿಂದ ಗುರುವಾರದ ತನಕ ರಾತ್ರಿ 8.30ರಿಂದ 9.30ರತನಕ ಈ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು ಸೋನಿ ಟಿವಿಗೆ ಅಪಾರ ಜನಪ್ರಿಯತೆ ಜೊತೆಗೆ ಹಣದ ಹೊಳೆಯನ್ನೇ ಹರಿಸುತ್ತಿದೆ.
ಈ ಕಾರ್ಯಕ್ರಮದಿಂದ ಸರಿಸುಮಾರು ರು.200 ಕೋಟಿ ಹರಿದು ಬರುವ ಸಾಧ್ಯತೆಗಳಿವೆ ಎನ್ನುತ್ತವೆ ಮೂಲಗಳು. ಕ್ಯಾಡ್‌ಬರಿ ಇಂಡಿಯಾ ಹಾಗೂ ಐಡಿಯಾ ಸೆಲ್ಯುಲಾರ್ ಈ ಕಾರ್ಯಕ್ರಮದ ಪಾಲುದಾರರಾಗಿದ್ದು ಕ್ರಮವಾಗಿ ರು.25 ಕೋಟಿ ಹಾಗೂ ರು.35 ಕೋಟಿ ಹಣ ತೊಡಗಿಸಿದ್ದಾರೆ.
ಸ್ಯಾಂಸಂಗ್ ಸ್ಮಾರ್ಟ್ ಟಿವಿ, ಮಾರುತಿ, ಪೆಪ್ಸಿ, ಜಸ್ಟ್ ಡಯಲ್, ಹೀರೋ ಮೋಟಾರ್ಸ್ ಹಾಗೂ ಆಕ್ಸಿಸ್ ಬ್ಯಾಂಕ್‌ಗಳು 60 ಸೆಕೆಂಡ್‍ಗಳ ಜಾಹೀರಾತಿಗೆ 16ರಿಂದ 18 ಕೋಟಿ ರುಪಾಯಿ ಕೊಡುತ್ತಿದ್ದಾರೆ. ಇದು ಕಾರ್ಯಕ್ರಮದ ಒಂದು ಕಂತಿಗೆ ಹರಿದುಬರುತ್ತಿರುವ ದುಡ್ಡು ಅಷ್ಟೆ. (ಏಜೆನ್ಸೀಸ್)


Click it and Unblock the Notifications











