ಪಂಚನದಿಗಳ ಬೀಡು ಬಿಜಾಪುರದಲ್ಲಿ ನಮ್ಮೂರ ಹಮ್ಮೀರ

ಪ್ರಪ್ರಥಮ ಬಾರಿಗೆ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ವಿನೂತನ ಕಾರ್ಯಕ್ರ 'ನಮ್ಮೂರ ಹಮ್ಮೀರ' ಡಿ.22 ಹಾಗೂ 23ರಂದು ನಡೆಯಲಿದೆ. ಈ ಕಾರ್ಯಕ್ರಮದ ಮೂಲಕ ರಾಜ್ಯದ ಮೂಲೆ ಮೂಲೆಯಲ್ಲಿರು ಎಲೆ ಮರೆಯ ಕಾಯಿಗಳನ್ನು ಗುರುತಿಸಲಾಗುತ್ತದೆ ಎಂದು ಸುವರ್ಣ ನ್ಯೂಸ್ ಸುದ್ದಿ ಸಂಪಾದಕ ಸುರೇಶ್ ಭಟ್ ತಿಳಿಸಿದ್ದಾರೆ.
ಈ ಕಾರ್ಯಕ್ರಮ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಿದ್ದು, ಬಿಜಾಪುರ ಜಿಲ್ಲೆಯಿಂದ ಆರಂಭಿಸಲಾಗುತ್ತಿದೆ ಎಂದು ಅವರು ಸುದ್ದಿಗೋಷ್ಠಿಯಲಿ ತಿಳಿಸಿದರು. ಪ್ರತಿ ಕಲಾವಿದರೂ ದೊಡ್ಡ ಶಹರಗಳಿಗೆ ತೆರಳಿ ಅವಕಾಶ ಗಿಟ್ಟಿಸಿಕೊಳ್ಳಲಿಕ್ಕಾಗದು. ಇದೇ ಕಾರಣಕ್ಕೆ ನಾವೇ ನಿಮ್ಮೂರಿಗೆ ಬಂದು ಅಂತಹದೊಂದು ವೇದಿಕೆ ಒದಗಿಸಿಕೊಡುತ್ತಿದ್ದೇವೆ ಎಂದು ವಾಹಿನಿ ಹೇಳಿದೆ.
ಡಿ.22ರಂದು ಕಲಾವಿದರ ಮೊದಲನ ಸುತ್ತಿನ ಆಯ್ಕೆ ಬಿಜಾಪುರದ ಮಧುವನ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ. ಡಿ.23ರಂದು ಬೆಳಗ್ಗೆಯಿಂದ ಸಂಜೆವರೆಗೆ ಅಂತಿಮ ಸುತ್ತಿನ ಆಯ್ಕೆ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿಗಾಗಿ ಹಾಗೂ ಹೆಸರು ನೋಂದಾಯಿಸಿಕೊಳ್ಳಲು ರಾಜು ಪಾಟೀಲ್ (ಮೊ.96322 01534), ರುದ್ರಪ್ಪ ಆಸಂಗಿ (ಮೊ.9341029329), ಸಂಗಮೇಶ ಕಂಬಾರ (ಮೊ.9916116377), ಪ್ರದೀಪ್ ಕುಲಕರ್ಣಿ (ಮೊ.9343112303) ಇವರನ್ನು ಸಂಪರ್ಕಿಸಲು ಸೂಚಿಸಲಾಗಿದೆ. (ಏಜೆನ್ಸೀಸ್)


Click it and Unblock the Notifications











