twitter
    For Quick Alerts
    ALLOW NOTIFICATIONS  
    For Daily Alerts

    ಪಂಚನದಿಗಳ ಬೀಡು ಬಿಜಾಪುರದಲ್ಲಿ ನಮ್ಮೂರ ಹಮ್ಮೀರ

    By Rajendra
    |

    Suvarna News 24X7
    'ನಮ್ಮೂರ ಹಮ್ಮೀರ' ಎಂದರೆ ಸಾಮಾನ್ಯವಾಗಿ ರೆಬಲ್ ಸ್ಟಾರ್ ಅಂಬರೀಷ್ ನೆನಪಾಗುತ್ತಾರೆ. ಒಂದಾನೊಂದು ಕಾಲದಲ್ಲಿ ಅವರು ಕೂಡ ಎಲೆ ಮರೆಯ ಕಾಯಿಯಂತಿದ್ದರು. ಅಂತಹ ಅದೆಷ್ಟೋ ಎಲೆ ಮರೆಯ ಕಾಯಿಗಳು ನಮ್ಮ ರಾಜ್ಯದ ಉದ್ದಗಲಕ್ಕೂ ಇದ್ದಾರೆ. ಅಂತಹ ಪ್ರತಿಭೆಗಳನ್ನು ಹೆಕ್ಕಿ ತೆಗೆಯುವ ಪ್ರಯತ್ನಕ್ಕೆ ಸುವರ್ಣ ನ್ಯೂಸ್ 24X7 ಮುಂದಾಗಿದೆ.

    ಪ್ರಪ್ರಥಮ ಬಾರಿಗೆ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ವಿನೂತನ ಕಾರ್ಯಕ್ರ 'ನಮ್ಮೂರ ಹಮ್ಮೀರ' ಡಿ.22 ಹಾಗೂ 23ರಂದು ನಡೆಯಲಿದೆ. ಈ ಕಾರ್ಯಕ್ರಮದ ಮೂಲಕ ರಾಜ್ಯದ ಮೂಲೆ ಮೂಲೆಯಲ್ಲಿರು ಎಲೆ ಮರೆಯ ಕಾಯಿಗಳನ್ನು ಗುರುತಿಸಲಾಗುತ್ತದೆ ಎಂದು ಸುವರ್ಣ ನ್ಯೂಸ್ ಸುದ್ದಿ ಸಂಪಾದಕ ಸುರೇಶ್ ಭಟ್ ತಿಳಿಸಿದ್ದಾರೆ.

    ಈ ಕಾರ್ಯಕ್ರಮ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಿದ್ದು, ಬಿಜಾಪುರ ಜಿಲ್ಲೆಯಿಂದ ಆರಂಭಿಸಲಾಗುತ್ತಿದೆ ಎಂದು ಅವರು ಸುದ್ದಿಗೋಷ್ಠಿಯಲಿ ತಿಳಿಸಿದರು. ಪ್ರತಿ ಕಲಾವಿದರೂ ದೊಡ್ಡ ಶಹರಗಳಿಗೆ ತೆರಳಿ ಅವಕಾಶ ಗಿಟ್ಟಿಸಿಕೊಳ್ಳಲಿಕ್ಕಾಗದು. ಇದೇ ಕಾರಣಕ್ಕೆ ನಾವೇ ನಿಮ್ಮೂರಿಗೆ ಬಂದು ಅಂತಹದೊಂದು ವೇದಿಕೆ ಒದಗಿಸಿಕೊಡುತ್ತಿದ್ದೇವೆ ಎಂದು ವಾಹಿನಿ ಹೇಳಿದೆ.

    ಡಿ.22ರಂದು ಕಲಾವಿದರ ಮೊದಲನ ಸುತ್ತಿನ ಆಯ್ಕೆ ಬಿಜಾಪುರದ ಮಧುವನ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ. ಡಿ.23ರಂದು ಬೆಳಗ್ಗೆಯಿಂದ ಸಂಜೆವರೆಗೆ ಅಂತಿಮ ಸುತ್ತಿನ ಆಯ್ಕೆ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

    ಹೆಚ್ಚಿನ ಮಾಹಿಗಾಗಿ ಹಾಗೂ ಹೆಸರು ನೋಂದಾಯಿಸಿಕೊಳ್ಳಲು ರಾಜು ಪಾಟೀಲ್ (ಮೊ.96322 01534), ರುದ್ರಪ್ಪ ಆಸಂಗಿ (ಮೊ.9341029329), ಸಂಗಮೇಶ ಕಂಬಾರ (ಮೊ.9916116377), ಪ್ರದೀಪ್ ಕುಲಕರ್ಣಿ (ಮೊ.9343112303) ಇವರನ್ನು ಸಂಪರ್ಕಿಸಲು ಸೂಚಿಸಲಾಗಿದೆ. (ಏಜೆನ್ಸೀಸ್)

    English summary
    Suvarna News 24X7 has announced the launch of the 'Nammura Hammira' talent hunt programme, wherein auditions would be held in select cities around Karnataka. The first round audition will be held at Bijapur on Dec 22 and 23 said the news editor of the channel Suresh Bhat.
    Thursday, December 22, 2011, 13:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X