For Quick Alerts
  ALLOW NOTIFICATIONS  
  For Daily Alerts

  ಜೀ ಕನ್ನಡದಲ್ಲಿ 'ಯಮಲೋಕದಲ್ಲಿ ಪ್ರಾಯಶ್ಚಿತ್ತ'

  |

  ಈ ಪ್ರಪಂಚದಲ್ಲಿ ಪಾಪಗಳನ್ನು ಮಾಡಿಲ್ಲ ಅಂತ ಎದೆ ತಟ್ಟಿ ಹೇಳಿಕೊಳ್ಳುವವರು ಯಾರೂ ಇರಲಿಕ್ಕಿಲ್ಲ. ಹಾಗೆಯೇ ಪಾಪಿಗಳನ್ನು ನಿರ್ದಯವಾಗಿ ಶಿಕ್ಷಿಸುವ ಯಮಧರ್ಮ ಮತ್ತು ಚಿತ್ರಗುಪ್ತರ ಬಗ್ಗೆ ಕೇಳದವರೂ ಇದ್ದಾರೆಯೆ? ಪ್ರಾಯಶ್ಚಿತ್ತ ದಿನನಿತ್ಯದ ಜೀವನದಲ್ಲಿ ಆಗಾಗ ಕೇಳಿಬರುವ ಪದ. ಪಾಪಿಗಳ ಲೆಕ್ಕವನ್ನು ಚಿತ್ರಗುಪ್ತ ಇಡುತ್ತಾನೆ ಮತ್ತು ಸಾವಿನ ನಂತರ ಯಮಧರ್ಮ ನರಕದಲ್ಲಿ ಅವರಿಗೆ ಶಿಕ್ಷೆ ಕೊಡುತ್ತಾನೆ ಎಂದು ಭಾರತೀಯ ಪುರಾಣಗಳಲ್ಲಿ ಉಲ್ಲೇಖಿತವಾಗಿದೆ.

  ಯಮಲೋಕದಲ್ಲಿ ಪ್ರಾಯಶ್ಚಿತ್ತ ಕೂಡ ಇಂತಹ ನಂಬಿಕೆಯನ್ನೇ ಆಧರಿಸಿದೆ. ಆದರೆ ಇಲ್ಲಿ ಪಾಪಿಗಳು, ಶಿಕ್ಷೆಗೆ ಒಳಗಾಗಿ ಪ್ರಾಯಶ್ಚಿತ್ತ ಅನುಭವಿಸುವವರು ಸಾಮಾನ್ಯ ಜನರಲ್ಲ. ಬದಲಿಗೆ ಟಿ.ವಿ. ಸೀರಿಯಲ್, ಸಿನಿಮಾಗಳಲ್ಲಿ ಖಳನಟ, ಖಳನಟಿಯರಾಗಿ ಒಳ್ಳೆಯ ಪಾತ್ರಗಳಿಗೆ ಕಷ್ಟ ಕೊಡುತ್ತ ಪಾಪ ಎಸಗುವವರು! ಆ ಪಾತ್ರಗಳನ್ನು ಯಮಲೋಕಕ್ಕೆ ಕರೆತಂದು ವಿವಿಧ ಶಿಕ್ಷೆ ನೀಡಲಾಗುವುದು. ಆ ಶಿಕ್ಷೆಗಳನ್ನು ನೋಡಿದವರು ಬಿದ್ದು ಬಿದ್ದು ನಗುವುದಂತೂ ಖಂಡಿತ.

  ಉದಾ: ಹಾವಿನ ಬುಟ್ಟಿಯಲ್ಲಿ ಕೈ ಹಾಕಿ ಚೆಂಡು ಹೆಕ್ಕುವುದು, ಕೈ ಹಿಂದೆ ಕಟ್ಟಿಕೊಂಡು ಬಾಳೆಹಣ್ಣು ತಿನ್ನುವುದು, ಹಾಗಲಕಾಯಿ ತಿನ್ನುವುದು, ಐಸ್ ತುಂಡು ಅಂಗೈಲಿ ಹಿಡಿದು ಪ್ರದಕ್ಷಿಣೆ ಇತ್ಯಾದಿ ಇನ್ನೂ ತರಹೇವಾರಿ ಶಿಕ್ಷೆಗಳು. ಮೂರು ಸುತ್ತುಗಳಲ್ಲಿ ಶಿಕ್ಷೆ ಅನುಭವಿಸಿ ಯಾರು ಹೆಚ್ಚು ಪಾಯಿಂಟ್ ಗಳಿಸುತ್ತಾರೋ ಅವರು ಗೆದ್ದಂತೆ.

  ಈ ಹೊಚ್ಚ ಹೊಸ ಪರಿಕಲ್ಪನೆ ಕನ್ನಡ ಕಿರುತೆರೆಗೆ ಹೊಸ ಬಣ್ಣ ತುಂಬಲಿದೆ. ಪೌರಾಣಿಕ ಸೆಟ್ ಅಪ್ನಲ್ಲಿ ಆಧುನಿಕ ಪಾತ್ರಗಳು ಪ್ರವೇಶವಾಗಿ ನಗೆಯ ಹೊನಲು ಹರಿಯಲಿದೆ. ಖ್ಯಾತ ರಂಗಕರ್ಮಿ, ಚಿತ್ರನಟ ಮಂಡ್ಯರಮೇಶ್ ಚಿತ್ರಗುಪ್ತನ ಪಾತ್ರದಲ್ಲಿ ಶೋವನ್ನು ನಿರೂಪಿಸುತ್ತಾರೆ. ಯಮಧರ್ಮನಾಗಿ ರಂಗಕಲಾವಿದ ಗಿರೀಶ್ ಘಜರ್ ನಟಿಸಲಿದ್ದಾರೆ. ಇಲ್ಲಿ ಭಾಗವಹಿಸಲು ಚಾನೆಲ್ ಮತ್ತು ಕಲಾವಿದರ ವಿಷಯದಲ್ಲಿ ನಿರ್ಬಂಧ ಇಲ್ಲ.

  ಮನರಂಜನೆಯಲ್ಲಿ ಏಕತಾನತೆ ಮುರಿಯುವ ಸಲುವಾಗಿಯೇ ಈ ಶೋ ವಿನ್ಯಾಸಗೊಳಿಸಲಾಗಿದೆ. ಇದು ವೀಕ್ಷಕರಿಗೆ ಇಷ್ಟವಾಗುವುದರಲ್ಲಿ ಸಂದೇಹವೇ ಇಲ್ಲ ಎನ್ನುತ್ತಾರೆ ಜೀ ಕನ್ನಡ ಕಾರ್ಯಕ್ರಮ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್. ಯಮಲೋಕದಲ್ಲಿ ಪ್ರಾಯಶ್ಚಿತ್ತ ಮಾರ್ಚ್ 22ರಿಂದ ಪ್ರತಿ ಗುರುವಾರ ಮತ್ತು ಶುಕ್ರವಾರ ರಾತ್ರಿ 9 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ. (ಒನ್ ಇಂಡಿಯಾ ಕನ್ನಡ)

  English summary
  A new pattern Reality Show 'Yamalokadalli Prayashcitta' starts from 22 March in Zee Kannada Channel. This telecasts on Thursday and Friday at 9-00 PM. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X