ಸಮಯ ನ್ಯೂಸ್ ಚಾನಲ್ ಯಾರಿಗೆ ಸೇಲ್ ಆಗಲಿದೆ?

By Rajendra

Samaya TV
ಈ ಹಿಂದೆ ಒಂದು ಸುದ್ದಿ ಹಬ್ಬಿತ್ತು ಅಥವಾ ಹರಿದು ಬಿಡಲಾಗಿತ್ತು. ಅದೇನಪ್ಪಾ ಎಂದರೆ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಒಡೆತನದ ಸಮಯ ಸುದ್ದಿ ವಾಹಿನಿಯನ್ನು ಮಾನ್ಯ ಎಚ್ ಡಿ ಕುಮಾರಸ್ವಾಮಿ ಅವರು ಖರೀದಿಸುತ್ತಾರೆ ಎಂಬುದು. ಆದರೆ ಅವರು ಸಮಯ ವಾಹಿನಿಯನ್ನು ಖರೀದಿಸುವ ಸುದ್ದಿ ಠುಸ್ ಆಗಿದೆ. ಹಾಗಿದ್ದರೆ ಇನ್ಯಾರ ತೆಕ್ಕೆಗೆ ಸಮಯ ವಾಹಿನಿ ಬೀಳಲಿದೆ ಎಂಬ ಪ್ರಶ್ನೆಗೆ ಇದೀಗ ಸ್ಪ್ಫೋಟಕ ಉತ್ತರವೊಂದು ಸಿಕ್ಕಿದೆ.

ಸಮಯ ನ್ಯೂಸ್ ಚಾನಲನ್ನು ಯಾರು ಖರೀದಿಸುತ್ತಾರೆ ಎಂಬ ಪ್ರಶ್ನೆಗೆ ಸದ್ಯಕ್ಕೆ ಮಾಧ್ಯಮ ವಲಯದಲ್ಲಿ ಒಂದು ನಮೂನೆಯ ಸುದ್ದಿ ಹರಿದಾಡುತ್ತಿದೆ. ಹಾಸನದ ಸಚಿನ್ ಎಂಬುವವರು ಸಮಯ ಟಿವಿಯನ್ನು ಕೊಳ್ಳುತ್ತಿರುರುವುದಾಗಿ ಸುದ್ದಿ. ಈ ಸುದ್ದಿ ಪಕ್ಕಾ ಎಂದೂ ಹೇಳಲಾಗಿದೆ. ಸಚಿನ್ ಅವರಿಗೆ ಯಡಿಯೂರಪ್ಪನವರ ಬೆಂಬಲವೂ ಇದೆಯಂತೆ.

ಸಚಿನ್‌ ಜೊತೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹಾಗೂ ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕೈ ಜೋಡಿಸಿದ್ದಾರೆ ಎಂಬ ಸುದ್ದಿಯೂ ತೇಲಾಡುತ್ತಾ ಓಲಾಡುತ್ತಾ ಸಾಗುತ್ತಿದೆ. ಸದ್ಯಕ್ಕೆ ಹಾಸನದ ಸಚಿನ್ ಅವರೊಂದಿಗೆ ಸತೀಶ್ ಜಾರಕಿ ಹೊಳಿ ಮಾತುಕತೆ ಒಂದು ಘಟ್ಟಕ್ಕೆ ಬಂದು ನಿಂತಿದ್ದು ಶೀಘ್ರದಲ್ಲೇ ಸೇಲ್ ಆಗುವ ಎಲ್ಲ ಲಕ್ಷಣಗಳು ಇವೆ.

More from Filmibeat

English summary
The latest buzz about the News TV channel Samaya is that a person named Sachin from Hassan is reportedly set to buy the channel. And surprisingly CM Yeddyurappa and Industrial Minister Murugesh Nirani have supported him in this deal. It was reported that HD Kumaraswamy was planning to buy the channel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X