ಕಸ್ತೂರಿಯಲ್ಲಿ ಶಬ್ದವೇದಿ; ಸುವರ್ಣದಲ್ಲಿ ಬಳ್ಳಾರಿ ನಾಗ

ದಟ್ಸ್‌ಕನ್ನಡದ ಅಪಾರ ಓದುಗ ಬಳಗ ಪದೇ ಪದೇ ನಮ್ಮನ್ನು ಕೇಳುತ್ತಿರುವ ಪ್ರಶ್ನೆ, "ಈ ವಾರ ಕಿರುತೆರೆಯಲ್ಲಿ ಯಾವ ಸಿನಿಮಾ ಬಿಡುಗಡೆ ಆಗುತ್ತಿದೆ?" ಎಂದು. ಅವರ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಿರುವ ನಾವು ಈ ವಾರ ಯಾವ ಯಾವ ಸಿನಿಮಾ ಯಾವ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ ಎಂಬ ಮಾಹಿತಿಯನ್ನು ನೀಡುತ್ತಿದ್ದೇವೆ.
ಪ್ರತಿ ವಾರಾಂತ್ಯ ಯಾವ ಸಿನಿಮಾ ಯಾವ ಟಿವಿಯಲ್ಲಿ ಪ್ರಸಾರವಾಗಲಿದೆ ಎಂಬ ಪಕ್ಕಾ ಮಾಹಿತಿಯನ್ನು ನಿಮ್ಮ ನೆಚ್ಚಿನ ದಟ್ಸ್‌ಕನ್ನಡ ತಾಣ ತಪ್ಪದೆ ನೀಡಲು ಪಣತೊಟ್ಟಿದೆ. ಕನ್ನಡ ಚಲನಚಿತ್ರಗಳನ್ನು ಮನೆಯಲ್ಲೇ ಕೂತು ಬಂಧು ಬಾಂಧವರೊಡನೆ ನೋಡುವ ಆನಂದ ನಿಮ್ಮದಾಗಲಿ. ಈ ಭಾನುವಾರ (ಜು.24) ಪ್ರಸಾರವಾಗುತ್ತಿರುವ ಸಿನಿಮಾಗಳು ಹೀಗಿವೆ.
ಈ ಟಿವಿ ಕನ್ನಡ: ಮುಂದೈತೆ ಊರಹಬ್ಬ ಸಂಜೆ 5.30ಕ್ಕೆ ಪ್ರಸಾರವಾಗಲಿದೆ. ಜಗ್ಗೇಶ್, ರಾಶಿ, ಇಂದ್ರಜಾ, ಮುಖ್ಯಮಂತ್ರಿ ಚಂದ್ರು ಪಾತ್ರವರ್ಗದಲ್ಲಿರುವ ಚಿತ್ರವನ್ನು ಧವಳ ಸತ್ಯಂ ನಿರ್ದೇಶಿಸಿದ್ದಾರೆ.
ಉದಯ ಮೂವೀಸ್: ಕೆಂಪ ಸಂಜೆ 4 ಗಂಟೆಗೆ; ಬೊಂಬಾಟ್ ಹುಡುಗ ಮಧ್ಯಾಹ್ನ 11ಕ್ಕೆ; ಗಂಧದ ಗುಡಿ ಭಾಗ 2 ಬೆಳಗ್ಗೆ 10ಕ್ಕೆ; ಸ್ನೇಹ ಲೋಕ ಮಧ್ಯಾಹ್ನ 1ಗಂಟೆಗೆ ಪ್ರಸಾರವಾಗಲಿದೆ.
ಜೀ ಕನ್ನಡ: ಪ್ರೀತಿ ನೀ ಹೀಗೇಕೆ ಮಧ್ಯಾಹ್ನ 11 ಗಂಟೆಗೆ; ಸಂಘರ್ಷ ರಾತ್ರಿ 12 ಗಂಟೆಗೆ; ಹೂವು ಸಂಜೆ 5.30 ಗಂಟೆಗೆ. ಸುರೇಶ್ ಹಾನಗಲ್ ನಿರ್ಮಿಸಿ ನಿರ್ದೇಶಿಸಿರುವ ಚಿತ್ರ ಪ್ರೀತಿ ನೀ ಹೀಗೇಕೆ. ಮಾಸ್ಟರ್ ಆನಂದ್, ತೇಜಸ್ವಿನಿ ಮುಖ್ಯಭೂಮಿಕೆಯಲ್ಲಿರುವ ಚಿತ್ರ.
ಕಸ್ತೂರಿ: ಶಬ್ದವೇದಿ ಸಂಜೆ 3.05 ಗಂಟೆಗೆ ಪ್ರಸಾರವಾಲಿದೆ. ಕಲಾ ಸಾಮ್ರಾಟ್ ಎಸ್ ನಾರಾಯಣ್ ನಿರ್ದೇಶನದ ಚಿತ್ರ. ವರನಟ ಡಾ.ರಾಜ್‌ಕುಮಾರ್, ಜಯಪ್ರದಾ ಅಭಿನಯದ ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದ್ದಾರೆ.
ಡಿಡಿ ಚಂದನ: ಬದ್ರಿ ಸಂಜೆ 4ಕ್ಕೆ ಪ್ರಸಾರವಾಗಲಿದೆ. ಯೋಗೇಶ್ವರ್, ಕೌಸಲ್ಯ, ಸ್ವಾತಿ, ಹರೀಶ್ ರಾಜ್, ಉಮೇಶ್, ಬಿರಾದಾರ್ ಪಾತ್ರವರ್ಗದಲ್ಲಿದ್ದು, ರಘುವರ್ಧನ್ ನಿರ್ದೇಶನದ ಚಿತ್ರ ಇದಾಗಿದೆ.
ಉದಯ ಟಿವಿ: ಮಳೆಯಲಿ ಜೊತೆಯಲಿ ಸಂಜೆ 7.35 ಕ್ಕೆ; ಎಕ್ಸ್‌ಕ್ಯೂಸ್ ಮಿ ಮಧ್ಯಾಹ್ನ 1.30ಕ್ಕೆ; ಪ್ರೀತಿ ಪ್ರೇಮ ರಾತ್ರಿ 9 ಕ್ಕೆ; ದಾಸ ಸಂಜೆ 3 ಗಂಟೆಗೆ ಪ್ರಸಾರವಾಗಲಿವೆ. ಪ್ರೇಮ್ ನಿರ್ದೇಶನದ ಎಕ್ಸ್‌ಕ್ಯೂಸ್ ಮಿ ಚಿತ್ರ ಸೂಪರ್ ಹಿಟ್ ಚಿತ್ರವಾಗಿದ್ದು ರಮ್ಯಾ, ಅಜಯ್ ರಾವ್, ಸುನಿಲ್ ರಾವ್ ಅಭಿನಯಿಸಿದ್ದಾರೆ.
ಸುವರ್ಣ ವಾಹಿನಿ: ಬಳ್ಳಾರಿ ನಾಗ ಮಧ್ಯಾಹ್ನ 2ಕ್ಕೆ; ವೀರಮದಕರಿ ಸಂಜೆ 5.30ಕ್ಕೆ ಪ್ರಸಾರವಾಗಲಿದೆ. ಇವರೆಡೂ ಆಕ್ಷನ್ ಪ್ರಧಾನ ಚಿತ್ರಗಳಾಗಿದ್ದು ಅತ್ತ ಸುದೀಪ್ ಇತ್ತ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳಿಗೆ ರಸದೌತಣ ನೀಡಲಿವೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











