47-41 ; ಇಬ್ಬರ ನಡುವೆ 6 ವರ್ಷಗಳ ಅಂತರ - 23 ವರ್ಷದ ಪ್ರೀತಿ, ಕೊನೆಗೂ ಮದುವೆಯಾದ ಕಿರುತೆರೆಯ ಖ್ಯಾತ ಜೋಡಿ
ಪ್ರೀತಿ ಎಂಬ ಎರಡಕ್ಷರವನ್ನು ನಿರೂಪಿಸುವುದು ತುಂಬಾ ಕಷ್ಟ. ಯಾಕೆಂದರೆ.. ಪ್ರೀತಿಯನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯ ಇಲ್ಲ. ಅದನ್ನು ಅನುಭವಿಸಿಯೇ ತೀರಬೇಕು. ಇನ್ನೂ ನಿಜವಾದ ಪ್ರೀತಿ ಅಂದರೆ ಅದು ಹೃದಯದ ಬಡಿತ ಅಲ್ಲ. ನನ್ನ ಹೃದಯದ ಬಡಿತ ನಿನ್ನದೇ ಹೆಸರು ಹೇಳುತ್ತಿದೆ ಅಂದರೆ ಅದು ನಿಜವೂ ಅಲ್ಲ. ಯಾಕೆಂದರೆ ನಿಜವಾದ ಪ್ರೀತಿ ಎನ್ನುವುದು ಪರಿಪೂರ್ಣ ಪ್ರಣಯ.
ಆದರೆ ಅದನ್ನು ಗುರುತಿಸುವುದು ಸುಲಭ ಅಲ್ಲ. ಪ್ರೀತಿ ಒಂದು ಸುಂದರ ಅನುಭವ, ಅದನ್ನು ಖುಷಿಯಿಂದ ಅನುಭವಿಸಬೇಕು. ಕಷ್ಟದಲ್ಲಾದರೂ, ಸುಖದಲ್ಲಾದರೂ ಒಬ್ಬರಿಗೊಬ್ಬರು ಜೊತೆಯಾಗಿ ನಂಬಿಕೆಯಿಂದ ಇದ್ದರೆ ಮಾತ್ರ ಪ್ರೇಮದಾನಂದವನ್ನು ಸವಿಯಲು ಸಾಧ್ಯ. ಈ ಮಾತುಗಳಿಗೆ ಅತ್ಯುತ್ತಮ ಉದಾಹರಣೆಯೇ ಅಶ್ಲೇಷಾ ಸಾವಂತ್ ಮತ್ತು ಸಂದೀಪ್ ಬಸ್ವಾನ್.

ಹೌದು. ಅಶ್ಲೇಷಾ ಸಾವಂತ್ ಮತ್ತು ಸಂದೀಪ್ ಬಸ್ವಾನ್.. ಹಿಂದಿ ಕಿರುತೆರೆಯ ಖ್ಯಾತ ಜೋಡಿ. 25 ವರ್ಷಗಳ ಹಿಂದೆ ಪ್ರಸಾರವಾದ ಖ್ಯಾತ ಧಾರಾವಾಹಿ ' 'ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ'' ಇವರಿಬ್ಬರ ಸಂಬಂಧಕ್ಕೆ ಅಡಿಪಾಯ ಹಾಕಿತ್ತು. ಈ ಧಾರಾವಾಹಿಯಲ್ಲಿ ಮುಖಾಮುಖಿಯಾದ ಇಬ್ಬರು ಕಾಲ ಕ್ರಮೇಣ ಪ್ರೀತಿಯಲ್ಲಿ ಬಿದ್ದರು.
ವಿಶೇಷ ಅಂದರೆ ಪ್ರೀತಿ ಅನ್ನೋದು ಶೋಕಿಯಾಗಿರುವ ಈ ಕಾಲದಲ್ಲಿ ಇಬ್ಬರು ಒಂದಲ್ಲ.. ಎರಡಲ್ಲ.. ಐದಲ್ಲ .. ಹತ್ತಲ್ಲ .. ಬರೋಬ್ಬರಿ 23 ವರ್ಷ ತಮ್ಮ ಪ್ರೀತಿಯನ್ನು ಇಬ್ಬರು ಕಾಪಿಟ್ಟುಕೊಂಡರು.
ಇಂಥಾ ಅಶ್ಲೇಷಾ ಸಾವಂತ್ ಮತ್ತು ಸಂದೀಪ್ ಬಸ್ವಾನ್ ಈಗ ತಮ್ಮ 23 ವರ್ಷದ ಪ್ರೀತಿಯ ಮೇಲೆ ಅಧಿಕೃತವಾಗಿ ಮದುವೆಯ ಮುದ್ರೆಯನ್ನೊತ್ತಿದ್ದಾರೆ. ಈ ಮೂಲಕ ಹೊಸ ಬದುಕನ್ನು ಶುರು ಮಾಡಿದ್ದಾರೆ. ಹೊಸ ಅಧ್ಯಾಯಕ್ಕೆ ನಾವು ಮುನ್ನುಡಿ ಬರೆದಿದ್ದು ಹೀಗೆ ಎಂದು ಬರೆದುಕೊಂಡಿದ್ದಾರೆ.
ಸದ್ಯ ಅಶ್ಲೇಷಾ ಸಾವಂತ್ ಮತ್ತು ಸಂದೀಪ್ ಬಸ್ವಾನ್ ಅವರಿಗೆ ಇಬ್ಬರ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಪುಲ್ಕಿತ್ ಸಾಮ್ರಾಟ್.. ದಿಶಾ ಪರ್ಮಾರ್.. ಸೃತಿ ಝಾ.. ನಕುಲ್ ಮೆಹ್ತಾ.. ನಿಧಿ ಷಾ.. ಪೂಜಾ ಬ್ಯಾನರ್ಜಿ.. ಸುಪ್ರಿಯಾ ಶುಕ್ಲಾ.. ಮಾಹಿ ವಿಜ್.. ಸುಧಾಂಶು ಪಾಂಡೆ.. ಮುಸ್ಕಾನ್ ಬಾಮ್ನೆ ಸೇರಿದಂತೆ ಹಲವರು ನವ ಜೋಡಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ''ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ'' ಧಾರಾವಾಹಿಯ ಮೂಲಕ ಜನ ಮನ ಗೆದ್ದು ರಾಜಕೀಯಕ್ಕೆ ಬಂದ ಸ್ಮತಿ ಇರಾನಿ ಕೂಡ ಅಶ್ಲೇಷಾ ಮತ್ತು ಸಂದೀಪ್ ಅವರಿಗೆ ಶುಭಾಶಯ ಕೋರಿದ್ದಾರೆ.

ಇನ್ನು ತಮ್ಮ ಮದುವೆ ಮತ್ತು ತಮ್ಮ ಲವ್ ಸ್ಟೋರಿಯ ಕುರಿತು ''ಟೈಮ್ಸ್ ಆಫ್ ಇಂಡಿಯಾ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಶ್ಲೇಷಾ ಮತ್ತು ಸಂದೀಪ್, ನಾವು ಇಬ್ಬರು ಕಳೆದ ಏಪ್ರಿಲ್‌ನಲ್ಲಿ ವೃಂದಾವನಕ್ಕೆ ಹೋಗಿದ್ದೇವು. ಅಲ್ಲಿನ ರಾಧಾ ಕೃಷ್ಣ ದೇವಾಲಯವೇ ನಮಗೆ ಮದುವೆಯಾಗುವಂತೆ ಪ್ರೇರಣೆ ನೀಡಿತು ಎಂದು ಹೇಳಿದ್ದಾರೆ.
ನಾವು ಇಬ್ಬರು ಮದುವೆಯಾಗಬೇಕೆಂದು ನಮ್ಮ ಇಬ್ಬರ ಪೋಷಕರು ಬಹುದಿನಗಳಿಂದ ಕಾಯುತ್ತಿದ್ದರು ಎಂದು ಹೇಳಿರುವ ಇಬ್ಬರು ಸದ್ಯ ನಮ್ಮ ಮದುವೆಯಿಂದ ನಮ್ಮ ಮನೆಯಲ್ಲಿನ ಎಲ್ಲ ಸದಸ್ಯರು ಖುಷಿಯಾಗಿದ್ದಾರೆ ಎಂದು ಹೇಳಿದ್ದಾರೆ. ಮುಂದುವರೆದು ಇಷ್ಟು ವರ್ಷಗಳ ಕಾಲ ನಾವು ಜೊತೆಯಲ್ಲಿದ್ದರು ಮದುವೆ ಯಾಕೆ ಆಗ್ತಿಲ್ಲ ಎನ್ನುವ ಪ್ರಶ್ನೆ ಕೇಳಿ ನಮಗೆ ಸಾಕಾಗಿತ್ತು ಎಂದು ತಮಾಷೆಯನ್ನು ಮಾಡಿರುವ ಇಬ್ಬರು, ಮನದಲ್ಲಿಯೇ ನಾವು ಇಬ್ಬರು 23 ವರ್ಷಗಳ ಹಿಂದೆ ಮದುವೆಯಾಗಿದ್ದೇವು ಹೀಗಾಗಿ ನಮಗೆ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ ಎಂದು ಹೇಳಿದ್ದಾರೆ. ಶಾಸ್ತ್ರೋಕ್ತವಾಗಿ ಮದುವೆಯಾಗಬೇಕಿತ್ತು ಅದಕ್ಕೆ ಕಾಲ ಈಗ ಕೂಡಿ ಬಂದಿದೆ ಎಂದು ಹೇಳಿದ್ದಾರೆ.
ರಾಧಾ ಕೃಷ್ಣ ದೇವಸ್ಥಾನದಲ್ಲಿ ಮದುವೆಯಾಗಲು ಪ್ರೇರಣೆ ಸಿಕ್ಕ ಹಿನ್ನೆಲೆ ನಾವು ಶ್ರೀಕೃಷ್ಣನ ದೇವಾಲಯದಲ್ಲಿಯೇ ಮದುವೆಯಾಗುವ ನಿರ್ಧಾರವನ್ನು ಮಾಡಿದೆವು ಎಂದು ಕೂಡ ಹೇಳಿದ್ಧಾರೆ. ಇನ್ನುಳಿದಂತೆ ಅಶ್ಲೇಷಾ ಸದ್ಯ ''ಜಾನಕ್'' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಸಂದೀಪ್ ಕೊನೆಯದಾಗಿ ''ಅಪೊಲೆನಾ'' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಅಂದ್ಹಾಗೇ ಅಶ್ಲೇಷಾ ಸಾವಂತ್ ಅವರಿಗೆ ಈಗ 41 ವರ್ಷ. ಸಂದೀಪ್ ಬಸ್ವಾನ್ ಅವರಿಗೆ 47 ವರ್ಷ. ಇಬ್ಬರ ನಡುವೆ 6 ವರ್ಷಗಳ ಅಂತರ ಇದೆ.


Click it and Unblock the Notifications











