For Quick Alerts
  ALLOW NOTIFICATIONS  
  For Daily Alerts

  ಮೈಸೂರಿನ ರಾಜ ವಿಜಯೇಂದ್ರರಿಗ್ಯಾಕಿ ದುರ್ಗತಿ ಬಂತು

  By Rajendra
  |

  ಮೈಸೂರಿನ ರಾಜ ಮನೆತನದ ಕತೆಯಿದು. ರಾಜಾ ವಿಜಯೇಂದ್ರರಿಗೆ ತನ್ನ 'ರತ್ನ ಮಹಲ್' ಅರಮನೆ ಮುಂದೆ ಉಳಿದಿದ್ದೆಲ್ಲವೂ ಗೌಣ. ರಾಜನ ಮಗಳು ಲಕ್ಷ್ಮಿಗೆ ಅಪ್ಪ ಎಂದರೆ ಪಂಚಪ್ರಾಣ. ಯಾವುದೋ ಒಂದು ಕೆಟ್ಟ ಗಳಿಗೆಯಲ್ಲಿ ವಿಜಯೇಂದ್ರ ಅರಸ್ ತನ್ನ ಅರಮನೆ ಜೊತೆಗೆ ಐಶ್ವರ್ಯವನ್ನೂ ಕಳೆದುಕೊಳ್ಳುತ್ತಾನೆ.

  ಇದು ಜೀ ಕನ್ನಡ ವಾಹಿನಿ ಆರಂಭಿಸಿರುವ ಹೊಸ ಧಾರಾವಾಹಿ ರಾಜಕುಮಾರಿ ಕತೆ. ಇಂದಿನಿಂದ (ಏ.23) ಧಾರಾವಾಹಿ ಆರಂಭವಾಗಲಿದೆ. ಪ್ರತಿ ಸೋಮವಾರದಿಂದ ಶುಕ್ರವಾರದ ತನಕ ಧಾರಾವಾಹಿ ರಾತ್ರಿ 8ಕ್ಕೆ ಪ್ರಸಾರವಾಗಲಿದೆ. ಹೊಸ್ತಿಲಾಚೆ ಅರಮನೆ, ಹೊಸ್ತಿಲೊಳಗೆ ಬಡಮನೆ, ಅರಮನೆಯೆಂಬ ಬಡಮನೆಯ ರಾಜ ಮತ್ತು ಕುಮಾರಿಯ ಕತೆ ನೋಡಬಹುದು.

  ರಾಜ ವಿಜಯೇಂದ್ರರ ಪಾತ್ರದಲ್ಲಿ ದತ್ತಣ್ಣ ಕಾಣಿಸಲಿದ್ದಾರೆ. ಸುದೀರ್ಘ ಸಮಯದ ಬಳಿಕ ಅವರು ಕಿರುತೆರೆಗೆ ಮರಳಿರುವುದು ಸಂತಸದ ವಿಚಾರ. ಲಕ್ಷ್ಮಿ ಚಂದ್ರಶೇಖರ್ ರಾಣಿಯಾಗಿ, ಅಂಜನಾ (ಹೊಸ ಪರಿಚಯ) ರಾಜಕುಮಾರಿಯಾಗಿ ಅಭಿನಯಿಸಿದ್ದಾರೆ. ಪಾತ್ರವರ್ಗದಲ್ಲಿ ಶ್ರೀದೇವಿ, ವಾಣಿಶ್ರೀ, ರೋಹಿಣಿ, ಕಾವ್ಯಾ ಶಾ, ಶಶಿಕುಮಾರ್, ಎನ್ ಎಂ ಸುರೇಶ್, ಸಾಗರ್ ಪುರಾಣಿಕ್ ಮುಂತಾದವರಿದ್ದಾರೆ.

  ಈ ಹಿಂದೆ ಚಿ.ಸೌ.ಸಾವಿತ್ರಿ ಧಾರಾವಾಹಿಯನ್ನು ನಿರ್ದೇಶಿಸಿದ್ದ ಶೃತಿ ನಾಯ್ಡು ರಾಜಕುಮಾರಿ ನಿರ್ದೇಶಕರು. ಈ ಧಾರಾವಾಹಿಗಾಗಿ ಜೀ ಕನ್ನಡ ವಾಹಿನಿ ರು.8 ಲಕ್ಷ ವೆಚ್ಚದಲ್ಲಿ ಸೆಟ್ ನಿರ್ಮಿಸಿರುವುದು ಕಿರುತೆರೆಯಲ್ಲೇ ದಾಖಲೆ ಎನ್ನಬಹುದು. (ಒನ್‌ಇಂಡಿಯಾ ಕನ್ನಡ)

  English summary
  Zee Kannada will start airing a new daily soap, ‘Rajakumari’ (Princess), based on the stories of the Mysore royals, from 23 April. Rajakumari will run Monday to Friday at the 8 pm slot.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X