ಸೊಸೆಯಿಂದ ನಿಮ್ಮ ಸಂದೇಹಗಳಿಗೆ ಸೂಕ್ತ ಉತ್ತರ!

<ul id="pagination-digg"><li class="previous"><a href="/tv/23-dream-concept-zee-kannada-serial-sose-aid0172.html">« Previous</a>

Sose Serial Image
ಕನ್ನಡದಲ್ಲೂ ಶ್ರಾವಣ ಬಂತು ಸಿನೆಮಾದಲ್ಲಿ ರಾಜ್ ಕುಮಾರ್ ಗೆ ಹಳೆಯ ಜನ್ಮದ ದೇವಸ್ಥಾನ ಪದೇ ಪದೇ ಕನಸಿನಲ್ಲಿ ಬಂದು ಅದನ್ನು ಹುಡುಕಿಕೊಂಡು ಹೊರಡುವ ಕಥೆಯಿದೆ. ಇಂಥ ತಂತ್ರವನ್ನೇ ಜೀ ಕನ್ನಡದ ಸೊಸೆ ಧಾರಾವಾಹಿಯ ಸಂಚಿಕೆಗಳಲ್ಲಿ ಬಳಸಿಕೊಳ್ಳಲಾಗಿದೆ.

ದೊಡ್ಡ ಕುಟುಂಬವೊಂದಕ್ಕೆ ಒಳ್ಳೆಯದನ್ನು ಮಾಡಲು ಹೊರಟಿದ್ದ ಗಾಯತ್ರಿಯನ್ನು ರೈಲಿಂದ ತಳ್ಳಿ ಅಂಜಲಿ ತಾನೇ ಗಾಯತ್ರಿಯಾಗಿ ಆ ಮನೆಯನ್ನು ಸೇರಿಕೊಂಡಿರುತ್ತಾಳೆ. ಒಳ್ಳೆಯವಳಂತೆ ಸೋಗು ಹಾಕಿದ ಇವಳನ್ನು ಆ ಮನೆಯವರು ಸೊಸೆಯಾಗಿ ತಂದುಕೊಳ್ಳಲು ಬಯಸಿ ಎಲ್ಲಾ ತಯಾರಿಯನ್ನೂ ಮಾಡುತ್ತಿರುತ್ತಾರೆ. ಈ ಮಧ್ಯೆ ಸತ್ತ ಗಾಯತ್ರಿ ನಿಶ್ಚಿತಾರ್ಥದ ದಿನ ಬಂದಂತೆ ಅಂಜಲಿಗೆ ಕನಸು ಬೀಳುತ್ತದೆ.

ಆ ಕನಸಿನ ನಂತರ ನಡೆಯುವ ಘಟನಾವಳಿಗಳು ಕಾಕತಾಳೀಯವಾಗಿ ಒಂದಕ್ಕೊಂದು ತಾಳೆಯಾಗಿ ಮುಂದೆ ನಿಜವಾಗಿಯೂ ದೊಡ್ಡ ಅನಾಹುತವೊಂದು ಸಂಭವಿಸಲಿದೆ ಎನ್ನುವ ಕುತೂಹಲ ಹುಟ್ಟಿಸುತ್ತವೆ. ಕನಸಿನಂತೆ ನಿಜವಾಗಿಯೂ ನಡೆಯುತ್ತದಾ? ಕನಸು ಭವಿಷ್ಯದ ಮುನ್ಸೂಚನೇನಾ? ನಿಜವಾಗಿಯೂ ಗಾಯಿತ್ರಿ ನಿಶ್ಚಿತಾರ್ಥಕ್ಕೆ ಬಂದು ನಕಲಿ ಗಾಯಿತ್ರಿಯ ಗುಟ್ಟ ರಟ್ಟಾಗುತ್ತದಾ?

ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು ನಿಮ್ಮ ಮನದಲ್ಲಿನ ಕುತೂಹಲ ತಣಿಸಿಕೊಳ್ಳಲು ಇಂದು ಮತ್ತು ನಾಳೆ ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 8.30 ಕ್ಕೆ ಪ್ರಸಾರವಾಗುವ 'ಸೊಸೆ' ಧಾರಾವಾಹಿಯ ಮನೋವೈಜ್ಞಾನಿಕ ಸಂಚಿಕೆಗಳನ್ನು ನೋಡಿ. ನಿಮ್ಮ ಸಾಕಷ್ಟು ಸಂದೇಹಗಳಿಗೆ ಉತ್ತರ ಸಿಕ್ಕರೂ ಸಿಗಬಹುದು... (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/tv/23-dream-concept-zee-kannada-serial-sose-aid0172.html">« Previous</a>

More from Filmibeat

English summary
Zee Kannada Serial Sose is taking an unimagined turns. Now this serial goes towords 'Scientific Shades' in its story. Watch this on Zee Kannada Channel, Today and Tomorrow (23 and 24, 2012) at 8-30 PM. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X