ಕನ್ನಡದಲ್ಲಿ ನಟಿ ರಂಭಾ ಎರಡನೇ ಇನ್ನಿಂಗ್ಸ್ ಆರಂಭ
ಮದುವೆ, ಮಕ್ಕಳು, ಸಂಸಾರ ಎಂದು ಚಿತ್ರರಂಗದಿಂದ ದೂರ ಉಳಿದಿದ್ದ ನಟಿ ರಂಭಾ ಈಗ ಕನ್ನಡಕ್ಕೆ ಮತ್ತೆ ಮರಳಿದ್ದಾರೆ. ಆದರೆ ಬೆಳ್ಳಿತೆರೆಗಲ್ಲ ಕಿರುತೆರೆಗೆ. ಈ ಮೂಲಕ ಕನ್ನಡದಲ್ಲಿ ಆಕೆಯ ಎರಡನೇ ಇನ್ನಿಂಗ್ಸ್ ಆರಂಭವಾಗಿದೆ. ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಕುಣಿಯೋಣ ಬಾರಾ'ಗೆ ರಂಭಾ ಎಂಟ್ರಿ ಕೊಟ್ಟಿದ್ದಾರೆ.
ಅಕ್ಟೋಬರ್ 27 ಹಾಗೂ 28ರಂದು ಜೀ ಕನ್ನಡದಲ್ಲಿ ರಾತ್ರಿ 9ಕ್ಕೆ ಪ್ರಸಾರವಾಗಲಿರುವ 'ಕುಣಿಯೋಣ ಬಾರಾ'ದಲ್ಲಿ ರಂಭಾ ಕಾಣಿಸಲಿದ್ದಾರೆ. ಕುಣಿಯೋಣ ಬಾರಾ ಡಾನ್ಸ್ ರಿಯಾಲಿಟಿ ಶೋ ಫೈನಲ್‌ನಲ್ಲಿ ರಂಭಾ ವಿಶೇಷ ಅತಿಥಿಯಾಗಿ ಕಾಣಿಸುತ್ತಿರುವುದು ವಿಶೇಷ.
ಅಂದಹಾಗೆ ರಂಭಾ ಅವರು ಓ ಪ್ರೇಮವೆ, ಭಾವ ಭಾಮೈದ, ಅನಾಥರು, ಪಾಂಡುರಂಗ ವಿಠಲ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಸರ್ವರ್ ಸೋಮಣ್ಣ' ಕನ್ನಡ ಚಿತ್ರದ ಮೂಲಕ ರಂಭಾ ಕನ್ನಡಕ್ಕೆ ಕೋಮಲ ಪಾದ ಊರಿದ್ದನ್ನು ಇಲ್ಲಿ ಧಾರಾಳವಾಗಿ ಸ್ಮರಿಸಬಹುದು. (ಒನ್‌ಇಂಡಿಯಾ ಕನ್ನಡ)
More from Filmibeat
English summary
South Indian actress Rambha to appear in the current season of Zee Kannada’s Kuniyonu Baara, Karnatakas No.1 dance reality show has now reached its finale. She will appear in a special show that is on air at 9 pm on 27th and 28th of October in Zee Kannada.


Click it and Unblock the Notifications











