ಕನ್ನಡದ ಕೋಟ್ಯಾಧಿಪತಿ ಶೋನಲ್ಲಿ ಹಿರಿಯ ತಾರೆ ಲಕ್ಷ್ಮಿ

ಅಣ್ಣಾವ್ರ ಜೊತೆ ಲಕ್ಷ್ಮಿ ಅವರು ಗೋವಾದಲ್ಲಿ ಸಿಐಡಿ 999, ನಾ ನಿನ್ನ ಮರೆಯಲಾರೆ, ಒಲವೇ ಗೆಲುವು, ನಾನೊಬ್ಬ ಕಳ್ಳ, ರವಿಚಂದ್ರ ಚಿತ್ರಗಳಲ್ಲಿ ಅಮೋಘ ಅಭಿನಯ ನೀಡಿದ್ದರು. ಈ ಶೋನಲ್ಲಿ ಭಾಗವಹಿಸುವುದರ ಜೊತೆಗೆ ರಾಜ್ ಅವರೊಂದಿಗಿನ ಒಡನಾಟ, ಮಧುರ ನೆನಪುಗಳನ್ನು ಲಕ್ಷ್ಮಿ ಮೆಲುಕು ಹಾಕಲಿದ್ದಾರೆ.
ಗೋಲ್ಡನ್ ಗರ್ಲ್ ರಮ್ಯಾ ಅವರ ಬಳಿಕ ಕೋಟ್ಯಾಧಿಪತಿ ಶೋನಲ್ಲಿ ಕಾಣಿಸಿಕೊಳ್ಳುತ್ತಿರುವ ಎರಡನೇ ಸೆಲೆಬ್ರಿಟಿ ಲಕ್ಷ್ಮಿ. ಈ ಶೋನಲ್ಲಿ ಗೆದ್ದ ಹಣವನ್ನು ಅವರು ಮಾತ್ರೋಶಿಕ್ಷಣ ಸಂಸ್ಥೆಗೆ ನೀಡುವುದಾಗಿ ತಿಳಿಸಿದ್ದಾರೆ. ಈ ಸಂಸ್ಥೆ ಅಂಧತ್ವದಿಂದ ಬಳಲುತ್ತಿರುವ ಮಕ್ಕಳ ಏಳಿಗೆಗೆ ಶ್ರಮಿಸುತ್ತಿದೆ. ಏ.24ರ ರಾತ್ರಿ 8 ಗಂಟೆಗೆ ಸರಿಯಾಗಿ ನಿಮ್ಮ ನೆಚ್ಚಿನ ಸುವರ್ಣ ವಾಹಿನಿಯಲ್ಲಿ ಶೋ ನೋಡಬಹುದು. (ಒನ್‌ಇಂಡಿಯಾ ಕನ್ನಡ)
More from Filmibeat
English summary
Kannada films senior actress Lakshmi is the second celebrity guest on Puneet Rajkumar’s quiz show Kannadada kotyadipathi. Watch the special episode on 24th April at 8:00 PM on Asianet Suvarna Channel. The game show is hosted by Puneet Rajkumar.
ಪುನೀತ್ ರಾಜ್ ಕುಮಾರ್ ಲಕ್ಷ್ಮಿ ಕಿರುತೆರೆ ಸುವರ್ಣ ಟಿವಿ ಕನ್ನಡದ ಕೋಟ್ಯಧಿಪತಿ puneeth rajkumar lakshmi tv suvarna tv kannadada kotyadipathi


Click it and Unblock the Notifications











