ರೋಮಾಂಚಕ ಧಾರಾವಾಹಿ ಗುಡ್ಡದ ಭೂತ ನೋಡಿ

ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟರ ಮನೆಯನ್ನು 'ಗುಡ್ಡದ ಭೂತ' ಧಾರಾವಾಹಿಗೆ ಬಳಸಿಕೊಳ್ಳಲಾಗಿತ್ತು. ಧಾರಾವಾಹಿಯ ನೆನಪಿಗಾಗಿ ಈ ಮನೆಯನ್ನು ಈಗಲೂ ಅವರು ಹಾಗೆಯೇ ಉಳಿಸಿಕೊಂಡಿದ್ದಾರೆ. 'ಗುಡ್ಡದ ಭೂತ' ಶೀರ್ಷಿಕೆ ಡೆನ್ನಾನಾ ಡೆನ್ನಾನಾ... ಗೀತೆ ಬಿ ಆರ್ ಛಾಯಾ ಅವರ ಕಂಠಸಿರಿಯಲ್ಲಿ ಹೊರಹೊಮ್ಮಿತ್ತು.
ತುಳು ನಾಟಕ ಒಂದರ ಮೂಲವಾಗಿದ್ದ 'ಗುಡ್ಡದ ಭೂತ' ಧಾರಾವಾಹಿಯಲ್ಲಿ ಊರ ಹೊರಗಿನ ಮನೆಯಲ್ಲಿ ಭೂತವಿದೆ ಎಂದು ಜನ ನಂಬುವುದು. ಅದಕ್ಕೆ ಪೂರಕವಾಗಿ ಕೆಲವು ಘಟನೆಗಳು ನಡೆಯುವುದು. ಮುಂಬೈನಿಂದ ಬರುವ ಕಥಾನಾಯಕ (ಪ್ರಕಾಶ್ ರೈ) ಭೂತವನ್ನು ಪತ್ತೆ ಮಾಡಲು ಅನೇಕ ಸಾಹಸಗಳನ್ನು ಮಾಡುವುದು, ಚಿತ್ರ ವಿಚಿತ್ರ ಬೆಳವಣಿಗಳು ನಡೆಯುವುದೇ ಧಾರಾವಾಹಿಯ ಕಥಾಹಂದರ. (ಒನ್‌ಇಂಡಿಯಾ ಕನ್ನಡ)
More from Filmibeat
English summary
Janasri News 24x7, a Kannada news channel re-telecasts 90's popular thrilling soap Guddada Bhoota. Actor Prakash Rai (Prakash Raj) played lead role in this serial. The early 90s in Kannada could not have missed Guddada Bhootha! The tune was haunting, the storyline suspenseful and people still remember the ending which was superb. Watch the serial on everay Saturday at 9.30 to 10 pm IST.


Click it and Unblock the Notifications











