ಝೀ ಕನ್ನಡದ ದೀಪಾವಳಿ ವಿಶೇಷ ಕಾರ್ಯಕ್ರಮಗಳು

ಅಕ್ಟೋಬರ್ 26, ಬುಧವಾರ ಬೆಳಗ್ಗೆ 11 ಗಂಟೆಗೆ:
'ಬೆಂಕಿಯಲ್ಲಿ ಅರಳಿದ ಹೂವು' ದೀಪಾವಳಿ ವಿಶೇಷ ಕಾರ್ಯಕ್ರಮ
ಕಿರುತೆರೆ ಧಾರಾವಾಹಿಯೊಂದರಲ್ಲಿ ಮೊಟ್ಟಮೊದಲ ಬಾರಿಗೆ ನಟಿಸುತ್ತಿರುವ ದೊಡ್ಡಣ್ಣ ಅಂದು ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗದ ಹಾಟ್ ಫೇವರಿಟ್ ನಟಿ ರಾಗಿಣಿ ದ್ವಿವೇದಿ ಧಾರಾವಾಹಿಯ 'ದೀಪಾವಳಿ ಸಂಭ್ರಮ'ದಲ್ಲಿ ಹಾಡಿ ಕುಣಿದು ರಂಗೇರಿಸಲಿದ್ದಾರೆ.
ಅಕ್ಟೋಬರ್ 27 ಗುರುವಾರ ಬೆಳಗ್ಗೆ 11 ಗಂಟೆಗೆ:
ಸೂರ್ಯಕಾಂತಿ ದೀಪಾವಳಿ ವಿಶೇಷ
ಸದಾ ಅಳುವ ಕಾಂತಿ ಅಂದು ನಕ್ಕು ನಲಿದು ಬಝಾರ್ಗೆ ಭೇಟಿ ಕೊಟ್ಟು ಜನರೊಂದಿಗೆ ಸಂಭ್ರಮ ಹಂಚಿಕೊಂಡು, ರಾಗಿಣಿ ದ್ವಿವೇದಿ ಮನೆಗೆ ಹೋಗಿ ದೀಪ ಹಚ್ಚಿ, ಅರಸಿಯ ಸೂಜಿ ಜೊತೆ ಕುಂಟಾಬಿಲ್ಲೆ ಆಡಿ ಸವತಿ ಐಶ್ವರ್ಯ ಜೊತೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾಳೆ.
ಅಕ್ಟೋಬರ್ 27 ಗುರುವಾರ ರಾತ್ರಿ 10 ಗಂಟೆಗೆ:
ಪಾರ್ವತಿ ಪರಮೇಶ್ವರ ದೀಪಾವಳಿ ವಿಶೇಷ.
ಪಾಂಡುರಂಗ ವಿಠಲದ ಕಲಾವಿದರೂ ಜತೆಯಾಗುತ್ತಿರುವುದು ವಿಶೇಷ. ಎದುರು-ಬದರು ಪಟಾಕಿ ಅಂಗಡಿ, ವ್ಯಾಪಾರಕ್ಕಾಗಿ ಮೇಲಾಟ, ಜಟಾಪಟಿ ನಡುವೆ ನಕ್ಕುನಗಿಸುವ ದೀಪಾವಳಿ!
ಅಕ್ಟೋಬರ್ 27-28 ರಾತ್ರಿ 9 ಗಂಟೆಗೆ
ಕುಣಿಯೋಣು ಬಾರಾ ವಿಶೇಷ. ಚಿತ್ರನಟಿ 'ರಂಭಾ' ಈ ನೃತ್ಯ ಕಾರ್ಯಕ್ರಮದ ವಿಶೇಷ ಆಕರ್ಷಣೆ.
ಈ ದೀಪಾವಳಿಯನ್ನು ಝೀ ಕನ್ನಡದ ಕಾರ್ಯಕ್ರಮಗಳೊಂದಿಗೆ ಆಚರಿಸಿ, ಧನ್ಯತಾಭಾವ ಅನುಭವಿಸಿ (ಒನ್ ಇಂಡಿಯಾ ಕನ್ನಡ)


Click it and Unblock the Notifications











