ಕಸ್ತೂರಿ ವಾಹಿನಿಯಲ್ಲಿ ಕಾಶಿನಾಥ್ ಕಾಮಿಡಿ ದರ್ಬಾರ್

By Rajendra

Actor Kashinath
ಉಡುಪಿ ಜಿಲ್ಲೆ ಕುಂದಾಪುರ ಬಳಿಯ ಕೋಟೇಶ್ವರದ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಕಾಶೀನಾಥ್ ತನ್ನದೇ ಆದ ಶೈಲಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯೆಬ್ಬಿಸಿದವರು. ಉಪೇಂದ್ರ, ವಿ ಮನೋಹರ್, ಸುನಿಲ್ ಕುಮಾರ್ ದೇಸಾಯಿ ಮುಂತಾದ ನಿರ್ದೇಶಕರನ್ನು ಚಿತ್ರರಂಗಕ್ಕೆ ಪರಿಚಯಿಸಿದವರು.

1980-90ರ ದಶಕದಲ್ಲಿ ಕನ್ನಡ ಚಿತ್ರರಂಗದ ಟ್ರೆಂಡ್ ಸೆಟ್ಟರ್ ಕಾಶೀನಾಥ್ ಹಿಂದಿಯಲ್ಲಿ ಕೂಡ ಒಂದು ಚಿತ್ರವನ್ನು ನಿರ್ಮಿಸಿದ್ದರು. ನಟನೆ, ನಿರ್ದೇಶನ, ಸಂಗೀತ, ಚಿತ್ರ ನಿರ್ಮಾಣ ಕ್ಷೇತ್ರದಲ್ಲೂ ತಮ್ಮ ಕೈಚಳಕ ತೋರಿಸಿರುವ ಕಾಶೀನಾಥ್ ಅವರ ವಿಭಿನ್ನ ಶೈಲಿಯ ಚಿತ್ರಗಳು ಯಶಸ್ಸಿನ ಉತ್ತುಂಗಕ್ಕೇರಿ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿದ್ದವು.

ಅವರ ಅನುಭವ, ಅನಂತನ ಅವಾಂತರ, ಹೆಂಡತಿ ಎಂದರೆ ಹೀಗಿರಬೇಕು, ಅವಳೇ ನನ್ನ ಹೆಂಡತಿ ಮುಂತಾದ ಚಿತ್ರಗಳು ಭರ್ಜರಿ ಯಶಸ್ಸು ಕಂಡಿದ್ದವು. ಅಜಗಜಾಂತರ ಚಿತ್ರ ಯಾವ ಮಟ್ಟಿಗೆ ಯಶಸ್ವಿಯಾಗಿತ್ತೆಂದರೆ ಈ ಚಿತ್ರವನ್ನು 'ಜುದಾಯಿ' ಎನ್ನುವ ಹೆಸರಿನಲ್ಲಿ (ಅನಿಲ್ ಕಪೂರ್, ಶ್ರೀದೇವಿ, ಊರ್ಮಿಳಾ) ಹಿಂದಿಗೆ ಇವರೇ ರಿಮೇಕ್ ಮಾಡಿದ್ದರು. ಅಲ್ಲದೇ ಅವಳೇ ನನ್ನ ಹೆಂಡತಿ ಚಿತ್ರ 'ಜವಾನಿ ಜಿಂದಾಬಾದ್' ಹೆಸರಿನಲ್ಲಿ ( ಅಮೀರ್ ಖಾನ್, ಫರಾ) ರಿಮೇಕ್ ಆಗಿದ್ದವು.

13 ಕನ್ನಡ, 2 ತೆಲುಗು ಮತ್ತು ಒಂದು ಹಿಂದಿ ಚಿತ್ರವನ್ನು ನಿರ್ದೇಶಿಸಿರುವ ಕಾಶೀನಾಥ್ 11 ಕನ್ನಡ ಮತ್ತು ತಲಾ ಒಂದೊಂದು (ಹಿಂದಿ ಮತ್ತು ತೆಲುಗು) ಚಿತ್ರವನ್ನು ನಿರ್ಮಿಸಿದ್ದರು ಕೂಡ. ಇಷ್ಟೆಲ್ಲಾ ಹೇಳಲು ಕಾರಣ ಈಗ ಕಾಶೀನಾಥ್ ಕಿರುತೆರೆಗೆ ಅಡಿಯಿಟ್ಟಿದ್ದಾರೆ. ಕಾಮಿಡಿ ಕಾರ್ಯಕ್ರಮವೊಂದರಲ್ಲಿ ನಟಿಸುತ್ತಿದ್ದಾರೆ.

ಕಸ್ತೂರಿ ವಾಹಿನಿ ಪ್ರಸಾರ ಮಾಡುತ್ತಿರುವ 'ಕಾಮಿಡಿ ದರ್ಬಾರ್' ಎನ್ನುವ ಕಾಮಿಡಿ ಶೋ ಈಗಾಗಲೇ ಆರಂಭವಾಗಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8.30ಕ್ಕೆ ಈ ಶೋ ಪ್ರಸಾರವಾಗುತ್ತಿದೆ. ನಿಖಿಲ್ ಕ್ರಿಯೇಸನ್ಸ್ ನಿರ್ಮಿಸುತ್ತಿರುವ ಈ ಹಾಸ್ಯ ಧಾರಾವಾಹಿಯಲ್ಲಿ ಕೊಡಗಿನ ಮಹಾರಾಜನಾಗಿ ಕಾಶೀನಾಥ್ ಮತ್ತು ಮಂತ್ರಿಯಾಗಿ ನಟ ಹಾಗೂ ರಂಗಭೂಮಿ ಪ್ರತಿಭೆ ರಾಜು ತಾಳಿಕೋಟೆ ನಟಿಸಿದ್ದಾರೆ. ಅಲ್ಲದೆ ಈ ಕಾರ್ಯಕ್ರದಲ್ಲಿ ಖ್ಯಾತ ಹಾಸ್ಯ ನಟರು ಕೂಡಾ ಅಭಿನಯಿಸುತ್ತಿದ್ದಾರೆ. ಟಿ ಆರ್ ಪಿ ಯಲ್ಲಿ ಮುನ್ನುಗ್ಗ ಬೇಕಾದರೆ ಈ ತಂಡ ಇನ್ನೂ ಕ್ವಾಲಿಟಿ ಹಾಸ್ಯ ನೀಡಬೇಕಾಗುವುದಂತೂ ಸತ್ಯ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Comedy Darbar is a new humor TV Show on Kasthuri TV starting from 23rd July, 2011. Comedy Darbar on kasthuri TV is scheduled to air every Saturday and Sunday at 8.30 PM in India. Kannada films famous actor, director and producer Kashinath also appearing in the show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X