For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ಪ್ಲಸ್ ಮಾಸ್ಟರ್ ಚೆಫ್ ಇಂಡಿಯಾದಿಂದ ಅಕ್ಷಯ್ ಔಟ್

  By Rajendra
  |

  ಬಾಲಿವುಡ್ ನಟ ಅಕ್ಷಯ್ ಕುಮಾರ್ ನಡೆಸಿಕೊಡುತ್ತ್ತಿದ್ದ ವಿಭಿನ್ನ ರುಚಿಯ ಟಿವಿ ಕಾರ್ಯಕ್ರಮ ಮಾಸ್ಟರ್ ಚೆಫ್ ಇಂಡಿಯಾ. ಸ್ಟಾರ್ ಪ್ಲಸ್ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಇದೂ ಒಂದಾಗಿತ್ತು. ಅಕ್ಷಯ್ ನಡೆಸಿಕೊಡುತ್ತಿದ್ದ ಅಡುಗೆ ಕಾರ್ಯಕ್ರಮ ಹೆಂಗೆಳೆಯರನ್ನಷ್ಟೇ ಅಲ್ಲ ಗಂಡಸರನ್ನೂ ಟಿವಿ ಮುಂದೆ ಕೂರುವಂತೆ ಮಾಡಿತ್ತು.

  ಈಗ ಮಾಸ್ಟರ್ ಚೆಫ್ ಇಂಡಿಯಾ ಸೀಸನ್ 2 ಆರಂಭವಾಗುತ್ತಿದೆ. ಮೂಲಗಳ ಪ್ರಕಾರ ಎರಡನೇ ಭಾಗದಲ್ಲಿ ಅಕ್ಷಯ್ ಕುಮಾರ್‌ಗೆ ಅವಕಾಶ ನೀಡಿಲ್ಲ. ಬದಲಾಗಿ ನಿಜವಾದ ಬಾಣಸಿಗರೇ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಸೀಸನ್ ಎರಡು 20 ರಿಂದ 26 ಕಂತುಗಳಲ್ಲಿ ಪ್ರಸಾರವಾಗಲಿದೆ.

  ವಿಶ್ವಖ್ಯಾತಿಯ ಬಾಣಸಿಗರಾದ ಅತುಲ್ ಕೊಚ್ಚಾರ್, ವಿನೀತ್ ಭಾಟಿಯಾ ಹಾಗೂ ವಿಕಾಸ್ ಖನ್ನಾ ಜೊತೆಗೆ ಸೀಸನ್ ಒಂದರ ಬಾಣಸಿಗರಾದ ಕುನಾಲ್ ಕಪೂರ್, ಅಜಯ್ ಚೋಪ್ರ ಕೂಡ ಭಾಗವಹಿಸಲಿದ್ದಾರೆ ಎಂದು ಕೋಲೋಸಿಯಂ ಮೀಡಿಯಾ ಪ್ರೈ.ಲಿ. ಮುಖ್ಯ ಕಾರ್ಯನಿರ್ವಹಣಾಧಿ ಅಜಿತ್ ಅಂಧರೆ ತಿಳಿಸಿದ್ದಾರೆ. (ಏಜೆನ್ಸೀಸ್)

  English summary
  Akshay Kumar nor Kajol nor Saif Ali Khan who will be hosting MasterChef India Season Two. Instead, it will be real chefs! Ajit Andhare, CEO, Colosseum Media Private Limited, who is producing the show, went on record to say that they are now looking for real chefs to host the second season of the show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X