ರಾಘವೇಂದ್ರ ಆತ್ಮಹತ್ಯೆ ಯತ್ನಕ್ಕೆ ರಿಯಲ್ ಕಾರಣ ಏನು?

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ರಾಘವೇಂದ್ರ ಅವರ ಪತ್ನಿ ಸುಧಾ ರಾಘವೇಂದ್ರ ಅವರು, ಕಾರ್ತೀಕ ದೀಪ ಧಾರಾವಾಹಿಯಿಂದ ತುಂಬಾ ನಷ್ಟ ಅನುಭವಿಸಿದ್ದೇವೆ. ಈ ನಷ್ಟವನ್ನು ಅವರು ಭರಿಸಲಾಗದೆ ಆತ್ಮಹತ್ಯೆಗೆ ಯತ್ನಿಸಿದರು ಎಂದಿದ್ದಾರೆ.
ಕಾರ್ತೀಕ ದೀಪ ಧಾರಾವಾಹಿಯಿಂದ ತಾವು ಸುಮಾರು ರು.80 ರಿಂದ 90 ಲಕ್ಷ ನಷ್ಟ ಅನುಭವಿಸಿದ್ದೇವೆ. ಈ ನಷ್ಟವನ್ನು ಭರಿಸಲು ಸಾಧ್ಯವಾಗದೆ ಅವರು ಆತ್ಮಹತ್ಯೆಗೆ ಯತ್ನಿಸಿದರು. ಕಲಾವಿದರಾಗಲಿ, ತಂತ್ರಜ್ಞಾರಾಗಲಿ ಯಾರಿಂದಲೂ ತಮಗೆ ಕಿರುಕುಳವಿಲ್ಲ. ಎಲ್ಲರೂ ನಮ್ಮೊಂದಿಗೆ ಸಹಕರಿಸಿದ್ದಾರೆ ಎಂದಿದ್ದಾರೆ ಸುಧಾ.
ಕಾರ್ತೀಕ ದೀಪ ಧಾರಾವಾಹಿಯ ಕಲಾವಿದರಿಗೆ ನಾಲ್ಕು ತಿಂಗಳಿಂದಲೂ ಪೇಮೆಂಟ್ ಕೊಟ್ಟಿಲ್ಲ ಎನ್ನಲಾಗಿದ್ದು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಧಾ ಅವರು, ಕಲಾವಿದರಾರು ಆತಂಕಪಡಬೇಕಾಗಿಲ್ಲ. ಅವರ ಮನೆ ಬಾಗಿಲಿಗೇ ಹಣ ತಲುಪಿಸುತ್ತೇನೆ. ಧಾರಾವಾಹಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
What is the real reason behind small screen director Hiriyur Raghavendra suicide attempt? His wife Sudha Raghavedra speaks to media and she said that huge lose on the serial leads to suicide attempt. Hiriyur Raghavendra known for Karthika Deepa serial.


Click it and Unblock the Notifications











