»   » ಜೀ ವಾಹಿನಿಯಲ್ಲಿ 'ಜೀ ಕುಟುಂಬ ಅವಾರ್ಡ್' ಪ್ರಸಾರ

ಜೀ ವಾಹಿನಿಯಲ್ಲಿ 'ಜೀ ಕುಟುಂಬ ಅವಾರ್ಡ್' ಪ್ರಸಾರ

Posted By:
Subscribe to Filmibeat Kannada
Zee Function Image
ಇದೇ ತಿಂಗಳು, ಮಾರ್ಚ್ 3, 2012 ರಂದು 'ಜೀ ಕುಟುಂಬ ಅವಾರ್ಡ್' ಅದ್ದೂರಿಯಾಗಿ ನ್ಯಾಷನಲ್ ಕಾಲೇಜ್ ಗ್ರೌಂಡ್ ನಲ್ಲಿ ನಡೆದಿದ್ದು ಗೊತ್ತೇ ಇದೆ. ಜೀ ವಾಹಿನಿಯಲ್ಲಿ ಮೂಡಿಬರುತ್ತಿರುವ ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಪ್ರೇಕ್ಷಕರಿಗೆ ಯಾರು ಇಷ್ಟ ಎಂಬುದು ಅವರ ಎಸ್ ಎಂ ಎಸ್ ಆಯ್ಕೆಗಳ ಮೂಲಕ ಬಹಿರಂಗಗೊಂಡಿತ್ತು.

12 ವಿಭಾಗಗಳಲ್ಲಿ ನಡೆದ ಸ್ಫರ್ಧೆಯಲ್ಲಿ ಒಂದೊಂದು ವಿಭಾಗಗಳಲ್ಲಿ ಒಬ್ಬೊಬ್ಬರನ್ನು ಆಯ್ಕೆ ಮಾಡುವ ಮೂಲಕ ಕಾರ್ಯಕ್ರಮದ ರಂಗು ಹೆಚ್ಚಿತ್ತು. ಬಸವನಗುಡಿಯ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಕಿರುತೆರೆ ಅಭಿಮಾನಿ ಪ್ರೇಕ್ಷಕವೃಂದ ಅತಿಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾಗಿದ್ದರು.

ಇಂದು, ಭಾನುವಾರ (ಮಾರ್ಚ್ 25, 2012) ಸಂಜೆ 5.30ಕ್ಕೆ ಆ ಕಾರ್ಯಕ್ರಮವನ್ನು ಜೀ ಕನ್ನಡ ವಾಹಿನಿಯಲ್ಲಿ ವೀಕ್ಷಿಸುವ ಅವಕಾಶ ಪ್ರೇಕ್ಷಕರಿಗೆ ಲಭಿಸಲಿದೆ. ಅಂದು ನಡೆದ ಕಾರ್ಯಕ್ರಮದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಿರುತೆರೆ ಕಲಾವಿದರು ಭಾಗವಹಿಸಿದ್ದರು, ಹಾಡು, ನೃತ್ಯಗಳಿಗೆ ಹೆಜ್ಜೆ ಹಾಕಿದ್ದರು. ಅದನ್ನು ನೋಡಿದವರೂ ಮತ್ತೊಮ್ಮೆ ನೋಡಲು ಹಾಗೂ ನೋಡದಿದ್ದವರ ಕುತೂಹಲವೂ ನೋಡಿ ತಣಿಯುವಂತೆ ಇಂದು ಜೀ ವಾಹಿನಿ ಅದನ್ನು ಮತ್ತೆ ಪ್ರಸಾರ ಮಾಡುತ್ತಿದೆ, ವೀಕ್ಷಿಸಿ... (ಒನ್ ಇಂಡಿಯಾ ಕನ್ನಡ)

English summary
Zee Kannada Channel's Zee Kutumba Award Funtion telecasts on 25 March 2012.
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X