ಟಿವಿ ನಿರೂಪಕನಿಗೆ ದೀಪಿಕಾ ಪಡುಕೋಣೆ ಕಪಾಳಮೋಕ್ಷ

By Rajendra

ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಟಿವಿ ನಿರೂಪಕನೊಬ್ಬನ ಮೇಲೆ ಕೈ ಮಾಡಿದ ಪ್ರಸಂಗವಿದು. ಏನ್ರಿ ತಮಾಷೆ ಮಾಡ್ತಾ ಇದ್ದೀರಾ? ಹೌದ್ರಿ ದೀಪಿಕಾ ಪಡುಕೋಣೆ ನಿಜವಾಗಿಯೂ ಕಪಾಳಮೋಕ್ಷ ಮಾಡಿದ ಘಟನೆಯಿದು. ಘಟನೆಯ ವಿವರಗಳು ಹೀಗಿವೆ.

ಝೂಮ್ ಟಿವಿ ಹೊಸ ಕಾರ್ಯಕ್ರಮ indiatimes STAR CHITCHAT. ಈ ಕಾರ್ಯಕ್ರಮದ ನಿರೂಪಕ ವಿವಾನ್. ಇನ್ನೇನು ಕಾರ್ಯಕ್ರಮ ಆರಂಭವಾಗಬೇಕು. ವಿವಾನ್ ಹಾಗೂ ದೀಪಿಕಾ ಇಬ್ಬರೂ ವೇದಿಕೆಗೆ ಬಂದರು. ಇದ್ದಕ್ಕಿದ್ದಂತೆ ದೀಪಿಕಾಗೆ ಏನಾಯಿತೋ ಏನೋ ವಿವಾನ್ ಕಪಾಳಕ್ಕೆ ತೆಗೆದು ಒಂದು ಬಿಟ್ಟಿದ್ದಾರೆ. ಸಭಿಕರು ಕ್ಷಣಕಾಲ ಕರೆಂಟ್ ಹೊಡೆದ ಕಾಗೆಯಂತಾಗಿದ್ದಾರೆ.

ಏನಾಯಿತು ಎಂದು ಅವರಿಗೆ ಅರ್ಥವಾಗಲಿಲ್ಲ. ಆಗ ದೀಪಿಕಾ ಹೇಳಿದ್ದೇನೆಂದರೆ, ನಾನು ಹಾಗೂ ವಿವಾನ್ ಒಂದೇ ಚಿತ್ರದಲ್ಲಿ ಅಭಿನಯಿಸಿದ್ದೆವು. ಅದು 'ಕಾರ್ತಿಕ್ ಕಾಲಿಂಗ್ ಕಾರ್ತಿಕ್' ಚಿತ್ರ. ಆ ಚಿತ್ರದಲ್ಲಿ ನಮ್ಮಿಬ್ಬರ ನಡುವಿನ ಮೊದಲ ಶಾಟ್ ಕಪಾಳಮೋಕ್ಷದ ಮೂಲಕವೇ ಆರಂಭವಾಗುತ್ತದೆ.

ಈ ಕಾರ್ಯಕ್ರಮವೂ ಕಪಾಳಮೋಕ್ಷದ ಮೂಲಕ ಯಾಕೆ ಆರಂಭವಾಗಬಾರದು ಅನ್ನಿಸಿ ಹೀಗೆ ಮಾಡಿದೆ. ಅಷ್ಟೇ ಉದ್ದೇಶಪೂರ್ವಕವಾಗಿಯೇ ವಿವಾನ್ ಕೆನ್ನೆಗೆ ಹೊಡೆದೆ. ಕೆನ್ನೆಗೆ ಹೊಡೆದು ಕ್ಲಾಪ್ ನೀಡಿದ್ದೇನೆ ಅಷ್ಟೇ. ಇದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಬೇಡಿ. ನಕ್ಕು ಹಗುರಾಗಿ ಎಂದಿದ್ದಾರೆ. ನ.28ರ ಸೋಮವಾರ ರಾತ್ರಿ 9.30ಕ್ಕೆ ಈ ಕಾರ್ಯಕ್ರಮವನ್ನು ನೋಡಬಹುದು. (ಏಜೆನ್ಸೀಸ್)

More from Filmibeat

English summary
Guess what disaster Ms Deepika Padukone commit? She slapped the host Vivaan in a show launched by Zoom. Shocked? Well, here is Ms Dippy to explain you the incident that led her to commit such a disaster.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X